Karnataka Times
Trending Stories, Viral News, Gossips & Everything in Kannada

Loan: ಕೇಂದ್ರದ ಬಂಪರ್ ಯೋಜನೆ! 4% ಬಡ್ಡಿಗೆ ಇಂತಹವರಿಗೆ ಲಕ್ಷಾಂತರ ಸಾಲ, ಅರ್ಜಿಗೆ ಮುಗಿಬಿದ್ದ ಜನ

advertisement

ಇಂದು ಸಾಲದ ಅವಶ್ಯಕತೆ ಹೆಚ್ಚಿನ ಜನರಿಗೆ ಇರುತ್ತದೆ. ಅದರಲ್ಲೂ ರೈತರು ಸಾಲ (Loan) ಮಾಡಿಯೇ ಬದುಕುವಂತಹ ಸ್ಥಿತಿ ನಿರ್ಮಾಣ ವಾಗಿದೆ. ರೈತರನ್ನು ಅಭಿವೃದ್ಧಿ ಮಾಡಲು ಸರಕಾರ ಅನೇಕ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಕೃಷಿ ಕೇತ್ರದಲ್ಲಿ ಪ್ರಗತಿ ಕಾಣಲು ಯಂತ್ರೋಪಕರಣ ಬಳಕೆಗೂ ಸರಕಾರ ಉತ್ತೇಜನ ನೀಡುತ್ತಾ ಬಂದಿದೆ. ಈಗಾಗಲೇ ಬರ ಪರಿಹಾರ, ಕಿಸಾನ್ ಹಣ, ಇತ್ಯಾದಿ ಸೌಲಭ್ಯ ಗಳನ್ನು ರೈತರಿಗೆ ನೀಡುತ್ತಿದ್ದು ಕೃಷಿಗಾಗಿ ಶೂನ್ಯ ಬಡ್ಡಿ ದರದ ಸಾಲವನ್ನು ನೀಡುತ್ತಿದೆ. ಅದೇ ರೀತಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಇದ್ದರೂ ಹೆಚ್ಚಿನ ಮೊತ್ತದ ಸಾಲ (Loan) ಸೌಲಭ್ಯ ಪಡೆಯಬಹುದು.ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್: 

ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)  ರೈತರ ಕೃಷಿ ಆಧಾರಿತ ಕಾರ್ಯ ಚಟುವಟಿಕೆಗಳಿಗಾಗಿಯೇ ಜಾರಿಗೆ ತಂದಿದ್ದು ಈ ಕಾರ್ಡ್ ಮೂಲಕ ಕೃಷಿಯೇತರ ಚಟುವಟಿಕೆಗಳಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಸಿಗಲಿದೆ.ಕೇಂದ್ರ ಸರ್ಕಾರ ಈ ಕಾರ್ಡ್ ಅನ್ನು ರೂಪಿಸಿದ್ದು ರೈತರು ತಮ್ಮ ಹೊಲಗಳಿಗೆ ಬೀಜ ಬಿತ್ತನೆ ಮಾಡುವುದು, ಬೆಳೆ ಪೋಷಣೆ, ರಸಗೊಬ್ಬರ ತಯಾರಿ ಇತ್ಯಾದಿ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಬಹುದಾಗಿದೆ.

Image Source: Rising Kashmir

ಎಷ್ಟು ಸಾಲ (Loan) ಸೌಲಭ್ಯ?

ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ 3 ವರ್ಷದವರೆಗೆ ಅಲ್ಪಾವಧಿ ಸಾಲವನ್ನು ಈ ಕಾರ್ಡ್ ಮೂಲಕ ನೀಡಲಾಗುತ್ತದೆ.‌ ರೈತರ ಭೂ ದಾಖಲೆಗಳ ಆಧಾರದ ಮೇಲೆ ಸಾಲ ಸೌಲಭ್ಯ ದೊರಕಲಿದೆ. ನಾಲ್ಕು ಪರ್ಸೆಂಟ್ ಬಡ್ಡಿಗೆ ಮೂರು ಲಕ್ಷದ ವರೆಗೆ ಸಾಲ ಸೌಲಭ್ಯ ಸಿಗಲಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರೂ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳಲ್ಲಿ ಕಿಸಾನ್‌ ಕ್ರೆಡಿಟ್ ಕಾರ್ಡ್ ನಿಮಗೆ ವಿತರಣೆ ಮಾಡಲಾಗುತ್ತದೆ.

advertisement

ಈ ಬ್ಯಾಂಕ್ ನಲ್ಲಿ Loan ಲಭ್ಯ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಅಂದರೆ ಎರಡು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ಸಿಗಲಿದೆ, ಇನ್ನೂ ಹೆಚ್ ಡಿ ಎಫ್ ಸಿ (HDFC) ಬ್ಯಾಂಕ್ ನಲ್ಲಿ 9% ಬಡ್ಡಿ ದರದಲ್ಲಿ ಸಾಲ ಸಿಗಲಿದೆ.‌ ಅದೇ ರೀತಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇಕಡ 25ರಷ್ಟು ನಿಮಗೆ ಸಾಲ ಸೌಲಭ್ಯ ದೊರಕಲಿದೆ.

Image Source: NewsClick

ಈ ದಾಖಲೆಗಳು ಬೇಕು

  • ಆಧಾರ್ ಕಾರ್ಡ್ (Aadhaar Card)
  • ಗುರುತಿನ ಚೀಟಿ
  • ಆರ್‌ಟಿಸಿ (RTC)
  • ರೇಷನ್ ಕಾರ್ಡ್ (Ration Card)
  • ಜಮೀನಿನ ಪಹಣಿ ಪತ್ರ (Pahani)
  • ಪ್ಯಾನ್ ಕಾರ್ಡ್ (Pan card)
  • ಮೊಬೈಲ್ ಸಂಖ್ಯೆ
  • ಪೋಟೋ
  • ಬ್ಯಾಂಕ್ ಖಾತೆ ಪುಸ್ತಕ

ಈ ಅರ್ಹತೆ ಇರಬೇಕು

  • ಅರ್ಜಿದಾರ ಭಾರತೀಯ ಪ್ರಜೆಯಾಗಿದ್ದು ಇಲ್ಲಿ ವಾಸ ಮಾಡುವಂತಿರಬೇಕು.
  • ವ್ಯಕ್ತಿಯು ಜಮೀನು ಹೊಂದಿದ್ದರೆ ಅಥವಾ ಬೇರೆಯವರ ಜಮೀನಿನಲ್ಲಿ ಕೃಷಿ ಮಾಡುವ ವ್ಯಕ್ತಿಗೂ ಈ ಕಾರ್ಡ್ ಮಾಡಿಸಲು ಅವಕಾಶ ಇದೆ.
  • ಈ ಸೌಲಭ್ಯ ಪಡೆಯಲು ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕಾಗುತ್ತದೆ.
  • ಸಾಲ ಪಡೆಯಲು ‌ಖಾತೆ ಹೊಂದಿರುವ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ‌ ಅರ್ಜಿ ನಮೂನೆ ಪಡೆದು ಅದಕ್ಕೆ ಬೇಕಾದ ದಾಖಲೆ ನೀಡಿ ಅರ್ಜಿ ಹಾಕಬಹುದು.

advertisement

Leave A Reply

Your email address will not be published.