Karnataka Times
Trending Stories, Viral News, Gossips & Everything in Kannada

2024 Voter List: 2024ರ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಬಿಡುಗಡೆ! ಈ ರೀತಿ ಚೆಕ್ ಮಾಡಿ

advertisement

ಇನ್ನೇನು 2024ರ ಲೋಕಸಭಾ ಚುನಾವಣೆಯ ಸಿದ್ಧತೆಗಳು ಬಾರಿ ಬಿರುಸಿನಿಂದ ಸಾಗಿದೆ. ಮತ್ತು ಈ ಬಾರಿ ಯಾರು ಆಡಳಿತದಲ್ಲಿ ನಿಲ್ಲುತ್ತಾರೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಜೊತೆಗೆ ಈಗಾಗಲೇ ಅಭ್ಯರ್ಥಿಗಳು ತಮಗೆ ಬೇಕಾದಂತಹ ಎಲ್ಲಾ ಸಿದ್ಧತೆಗಳನ್ನು ಮತ್ತು ಮತ ಯಾಚಿಸಲು ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಕೂಡ ಮಾಡಿಕೊಂಡಿದ್ದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯು ಜರುಗಲಿದೆ. ಇನ್ನು ಅದಕ್ಕೆ ಅನೇಕರು ಮತ್ತು ಪಕ್ಷದ ನಾಯಕರುಗಳು ಬಹಳಷ್ಟು ಶ್ರಮಿಸುತ್ತ ಇದ್ದಾರೆ. ಇನ್ನು ವಿವಿಧ ರೀತಿಯಾದಂತಹ ಅಶ್ವಾಸನೆಗಳಿಂದ ಮತದಾರರನ್ನು ಸೆಳೆಯಲು ನಾಯಕರುಗಳು ಮುಂದಾಗಿದ್ದಾರೆ.

2024 Voter List ಮೊಬೈಲ್ ನಲ್ಲಿಯೇ ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ:

 

Image Source: The Indian Express

 

advertisement

ಇನ್ನೇನು ಲೋಕಸಭಾ ಚುನಾವಣೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಇದೀಗ ಸರ್ಕಾರ ಮತದಾರರ ಪಟ್ಟಿ (Voter List) ಯನ್ನು ಬಿಡುಗಡೆ ಮಾಡಿದೆ. ಇನ್ನು ಹಲವರು ಹೊಸ ಮತದಾರರ ಪಟ್ಟಿಗೆ ದಾಖಲಾಗಿದ್ದಾರೆ, ಇನ್ನು ಕೆಲವರು ವೋಟರ್ ಐಡಿ (Voter ID) ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಸಿದರು. ಇನ್ನು ಈ ಬಾರಿ ಮತದಾರ ಪಟ್ಟಿಯನ್ನು ನಾವು ಮೊಬೈಲ್ ಮೂಲಕವೇ ಹೆಸರು ಇದೆಯೋ? ಇಲ್ಲವೋ? ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಚುನಾವಣಾ ಆಯೋಗವು ಅದಕ್ಕೆಂದು ವೆಬ್ ಸೈಟ್ ಬಿಡುಗಡೆ ಮಾಡಿದ್ದು, ಅದರಲ್ಲಿ ನಮ್ಮ ನೋಂದಣಿಯ ದಾಖಲೆಗಳನ್ನು ದಾಖಲು ಮಾಡುವ ಮೂಲಕ ಮತದಾರರ ಪಟ್ಟಿಯನ್ನು ನೋಡಬಹುದಾಗಿದೆ.

ಇನ್ನು https://ceo.karnataka.gov.in ಎಂಬ ವೆಬ್ ಸೈಟ್ ನಲ್ಲಿ ಕಂಡುಬರುವ 2024ರ ಮತದಾರರ ಪಟ್ಟಿ (2024 Voter List) ಅಥವಾ 2024ರ ಸಾರ್ವತ್ರಿಕ ಚುನಾವಣೆ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ ನಂತರ ಅಲ್ಲಿ ಕೇಳುವಂತಹ ಮಾಹಿತಿಯನ್ನು ದಾಖಲಿಸಿ ಅಂದರೆ ತಾಲೂಕು, ಜಿಲ್ಲೆ ಮತ್ತು ಹೋಬಳಿ ಇನ್ನು ಗ್ರಾಮಕ್ಕೆ ಸೇರಿದವರಾಗಿದ್ದಾರೆ ಗ್ರಾಮ ಮತ್ತು ವೋಟರ್ ಐಡಿ (Voter ID) ನಂಬರ್ ಇವುಗಳನ್ನು ದಾಖಲಿಸಿ ನಂತರ ಯಾವ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಮತ ಸೇರುತ್ತದೆ ಅದನ್ನು ಕೂಡ ದಾಖಲಿಸಿ, ನೋಂದಣಿ ಆಗಿರುವಂತಹ ಮೊಬೈಲ್ ನಂಬರ್ ಅನ್ನು ನಮೂದಿಸಿದರೆ ಅಲ್ಲಿ ನಮಗೆ ಓಟಿಪಿ ಸಿಗುತ್ತದೆ. ಆ ಒಟಿಪಿಯನ್ನು ವೆಬ್ ಸೈಟ್ ನಲ್ಲಿ ದಾಖಲು ಮಾಡಿ ನಂತರ ನಮ್ಮ ಹೆಸರು ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಲ್ಲಿ ಪರಿಶೀಲಿಸಿ ತಿಳಿದುಕೊಳ್ಳಬಹುದಾಗಿದೆ. ಇನ್ನು ಈ ವೆಬ್ ಸೈಟ್ ನಲ್ಲಿ ಹೊಸದಾಗಿ ಮತದಾರರ ಗುರುತಿನ ಚೀಟಿ ಪಡೆಯಲು ಕೂಡ ಅರ್ಜಿಯನ್ನು ಸಲ್ಲಿಸಬಹುದಾದ ಅವಕಾಶವನ್ನು ಕೂಡ ಚುನಾವಣಾ ಆಯೋಗವು ಮಾಡಿಕೊಟ್ಟಿದೆ.

ಇನ್ನು ಹೊಸದಾಗಿ ಅರ್ಜಿ ಹಾಕಲು ಬೇಕಾದ ದಾಖಲೆಗಳು ಯಾವುದೆಂದರೆ ಆಧಾರ್ ಕಾರ್ಡ್ (Aadhaar Card), ರೇಷನ್ ಕಾರ್ಡ್ (Ration Card), ಪಾಸ್ಪೋರ್ಟ್ ಸೈಜ್ ನ ಫೋಟೋ, ರಿಜಿಸ್ಟರ್ ಮಾಡಿಸಿಕೊಳ್ಳಬೇಕಾದಂತಹ ಮೊಬೈಲ್ ನಂಬರ್, ಅಡ್ರೆಸ್ ಪ್ರೂಫ್ ಇಷ್ಟು ದಾಖಲೆಗಳನ್ನು ಅರ್ಜಿದಾರರು ಅರ್ಜಿಯನ್ನು ಸಲ್ಲಿಸಬೇಕಾದರೆ ನೀಡಬೇಕಾಗುತ್ತದೆ. ಇದರ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಈಗಾಗಲೇ ಅರ್ಜಿ ಸಲ್ಲಿಸಿದವರು ಈ ವೆಬ್ ಸೈಟ್ ಮೂಲಕವೇ ಮತದಾರರ ಚೀಟಿಯನ್ನು ಪರಿಶೀಲಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.