Karnataka Times
Trending Stories, Viral News, Gossips & Everything in Kannada

Bank Employees: ಬ್ಯಾಂಕ್ ನೌಕರರಿಗೆ ಹೊಸ ರೂಲ್ಸ್! ಕೇಂದ್ರ ಸರ್ಕಾರ ಘೋಷಣೆ

advertisement

ಇಷ್ಟು ದಿನಗಳಿಂದ ಕಾಯುತ್ತಿದ್ದ ಸರ್ಕಾರಿ ಬ್ಯಾಂಕ್ ಉದ್ಯೋಗಿಗಳಿಗೆ (Bank Employees) ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ (Central Govt) ಸಾಕಷ್ಟು ಉತ್ತಮ ಯೋಜನೆಗಳನ್ನು ಪರಿಚಯಿಸಿದೆ. ಅದರ ಜೊತೆಗೆ ಸರ್ಕಾರಿ ಬ್ಯಾಂಕ್ ಗಳಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಬೆನಿಫಿಟ್ ನೀಡುವಂತಹ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಷಿಕವಾಗಿ 17% ನಷ್ಟು ಉದ್ಯೋಗಿಗಳ ಸಂಬಳ ಹೆಚ್ಚಾಗುವ ನಿರೀಕ್ಷೆ ಇದೆ.

ಬ್ಯಾಂಕ್ ಮತ್ತು ಇತರ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ:

 

 

ಸುಮಾರು ಎಂಟು ಲಕ್ಷ ಸರ್ಕಾರಿ ಬ್ಯಾಂಕ್ ಗಳ ಅಧಿಕಾರಿಗಳು ಮತ್ತು ನೌಕರರ ಸಂಬಳ (Bank Employees Salary) ಹೆಚ್ಚಿಸುವ ಬಗ್ಗೆ ಹಾಗೂ ಒಂದು ದಿನದ ಹೆಚ್ಚುವರಿ ರಜೆಯನ್ನು ನೀಡುವ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಶುಕ್ರವಾರ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (Indian Bank Association) ಮತ್ತು ಬ್ಯಾಂಕ್ ಉದ್ಯೋಗಿ ಸಂಸ್ಥೆಗಳ ನಡುವೆ 17% ನಷ್ಟು ವಾರ್ಷಿಕ ವೇತನ ಹೆಚ್ಚಳ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಪ್ರತಿವರ್ಷ ಸುಮಾರು 8,285 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.

ತಿಂಗಳ ಎಲ್ಲಾ ಶನಿವಾರ ಸರ್ಕಾರಿ ರಜೆ:

advertisement

ಇಲ್ಲಿಯವರೆಗೆ ಬ್ಯಾಂಕ್ ಗಳು ಎರಡು ಶನಿವಾರ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಎರಡು ಶನಿವಾರ ರಜೆ ಇತ್ತು ಅಂದರೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಘೋಷಿಸಲಾಗಿತ್ತು. ಆದರೆ ಈಗ ಅಖಿಲ ಭಾರತ ಬ್ಯಾಂಕ್ ಅಧಿಕಾರಗಳ ಒಕ್ಕೂಟ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತಿಂಗಳ ಎಲ್ಲಾ ಶನಿವಾರ ಅಂದರೆ ನಾಲ್ಕು ಶನಿವಾರಗಳು ಕೂಡ ರಜೆ ಕೊಡಲು ಅನುಮೋದನೆ ನೀಡಿದೆ. ಅಂದರೆ ಬ್ಯಾಂಕುಗಳು ಇನ್ನು ಮುಂದೆ ವಾರದಲ್ಲಿ ಐದು ದಿನಗಳ ಕೆಲಸ ನಿರ್ವಹಿಸಲಿದೆ ವಾರದ ಕೊನೆಯ ಎರಡು ದಿನಗಳು ರಜೆ ಎಂದು ನಿರ್ಣಯಕ್ಕೆ ಬರಲಾಗಿದೆ.

ಮಹಿಳೆಯರಿಗೆ ಹೆಚ್ಚುವರಿ ಅನಾರೋಗ್ಯ ರಜೆ:

ಬ್ಯಾಂಕ್ ಅಧಿಕಾರಿಗಳ ಸಂಸ್ಥೆ ತಿಳಿಸಿರುವ ಪ್ರಕಾರ 8088 ಅಂಕಗಳ ತುಟ್ಟಿ ಭತ್ಯೆ ಹೆಚ್ಚುವರಿ ಹೊರೆಯನ್ನ ಬ್ಯಾಂಕ್ ಗಳು ಹೊರಬೇಕಿದೆ. ಇದರ ಜೊತೆಗೆ ಮಹಿಳಾ ಉದ್ಯೋಗಿಗಳಿಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡುವ ಮೂಲಕ ಪ್ರತಿ ತಿಂಗಳು ಒಂದು ದಿನ ಅನಾರೋಗ್ಯ ರಜೆಯನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು.

ವೇತನ ಸಹಿತ ರಜೆ:

ಇನ್ನು ಮುಂದಿನ 255 ದಿನಗಳ ವರೆಗೆ ನಿವೃತ್ತಿಯ ಸಮಯದಲ್ಲಿ, ಅಥವಾ ಕಚೇರಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಮರಣ ಹೊಂದಿದರೆ ಅಂತಹ ನೌಕರರಿಗೆ (ಕುಟುಂಬಕ್ಕೆ) ವೇತನ ಸಹಿತ ರಜೆ ಪಡೆಯುವ ಹಕ್ಕನ್ನು ನೀಡಲಾಗಿದೆ ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು ನಿರ್ಧಾರವಾಗಿದೆ ಎಂದು ಐಬಿಎ ಸಿಇಓ ಸುನಿಲ್ ಮೆಹ್ತಾ ತಿಳಿಸಿದ್ದಾರೆ.

advertisement

Leave A Reply

Your email address will not be published.