Karnataka Times
Trending Stories, Viral News, Gossips & Everything in Kannada

Anna Bhagya Money: ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಜಮಾ, ಈ ರೀತಿ ಖಾತೆ ಚೆಕ್ ಮಾಡಬಹುದು

advertisement

ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ವರ್ಗದ ಜನತೆಗೆ ಬಹಳಷ್ಟು ಸಹಾಯಕವಾಗುತ್ತಿದ್ದು ಅದರಲ್ಲಿ ಅನ್ನಭಾಗ್ಯ ಯೋಜನೆ (Anna Bhagya Yojana) ಯು ಬಹಳಷ್ಟು ಸಹಾಯಕವಾಗುತ್ತಿದೆ. ಇದೀಗ ಹೆಚ್ಚುವರಿ ಅಕ್ಕಿಯ ಕೊರತೆಯಿಂದಾಗಿ ರಾಜ್ಯಸರಕಾರ ಹಣವನ್ನು ಕೂಡ ಖಾತೆಗೆ ಜಮೆ ಮಾಡುತ್ತಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಒಬ್ಬ ವ್ಯಕ್ತಿಗೆ ತಲಾ 170 ರೂಪಾಯಿಯಂತೆ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ನೇರವಾಗಿ DBT ಮೂಲಕ ವರ್ಗಾವಣೆ ಮಾಡುತ್ತಿದೆ. ಬಿಪಿಎಲ್ ಕುಟುಂಬದ ಮುಖ್ಯಸ್ಥನ ಆಧಾರ್ ಸಂಖ್ಯೆಗಳಿಗೆ ಲಿಂಕ್ ಆಗಿದ್ದ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

ಮಾರ್ಚ್ ತಿಂಗಳ ಹಣ ಜಮೆ?

 

 

ಈಗಾಗಲೇ ನೊಂದಣಿ ಮಾಡಿದ ಹೆಚ್ಚಿನ ಫಲಾನುಭವಿಗಳಿಗೆ ಪೆಬ್ರವರಿ ತಿಂಗಳ ವರೆಗೆ ಹಣ ಜಮೆ ಯಾಗಿದ್ದು ಮಾರ್ಚ್ ತಿಂಗಳ ಹಣ ಕೂಡ ಖಾತೆಗೆ ಬರಬೇಕಿದೆ. ಈಗಾಗಲೇ ಮಾರ್ಚ್ ತಿಂಗಳ ಅನ್ನಭಾಗ್ಯ ಹಣ (Anna Bhagya Money) ಬಿಡುಗಡೆ ಯಾಗಿದ್ದು ಕೆಲವರ ಖಾತೆಗೆ ಈ ಹಣ ಜಮೆಯಾಗಿದೆ. ಪಡಿತರ ವಿತರಣೆಯ ಜೊತೆಗೆ ಅಕ್ಕಿಯ ಹಣವನ್ನು ಕೂಡ ಸರ್ಕಾರ ಜಮಾ ಮಾಡಿದೆ. ಒಟ್ಟಿನಲ್ಲಿ ಮಾರ್ಚ್ ಹದಿನೈದರ ಒಳಗೆ ಎಲ್ಲರ ಖಾತೆಗೂ ಹಣ ಬರಲಿದೆ.

advertisement

ಯಾಕೆ ಹಣ ಬಂದಿಲ್ಲ?

ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿಸದೆ ಇರುವ ಕಾರಣದಿಂದ ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ (Anna Bhagya Money) ಬಂದಿಲ್ಲ. ಖಾತೆಯಲ್ಲಿನ ಸಮಸ್ಯೆ ಬಗೆಹರಿಸಿಕೊಂಡರೆ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಆಧಾರ್ ಇಕೆವೈಸಿ ಸಮಸ್ಯೆ ಬಗೆಹರಿಸಿಕೊಂಡರೆ ಹಣ ಬರಲಿದೆ. ಅದೇ ರೀತಿ ಮುಖ್ಯಸ್ಥರಿಗೆ ತಾಂತ್ರಿಕ ದೋಷದಿಂದ ಹಣ ಜಮೆಯಾಗದಿದ್ದರೆ ಸರ್ಕಾರದ ಅನುಮತಿ ಪಡೆದು ಆಹಾರ ಇಲಾಖೆಯು ಮನೆಯ 2ನೇ ಯಜಮಾನರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುವ ಅವಕಾಶ ಕೂಡ ನೀಡಿದೆ.

ಚೆಕ್ ಮಾಡಿ:

ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ಬಂದಿದೆಯಾ ಎಂದು ತಿಳಿದು ಕೊಳ್ಳಲು ಮೊದಲಿಗೆ https://www.karnataka.gov.in/ ಈ ಲಿಂಕ್ ಗೆ ಭೇಟಿ ನೀಡಿ. E -Services ಟ್ಯಾಬ್ ಮೇಲೆ ಮೊದಲು ಕ್ಲಿಕ್ ಮಾಡಿ, ನಂತದಲ್ಲಿ ಪರದೆಯ ಮೇಲೆ DBT Status ಲಿಂಕ್ ಎಂಬ ಆಪ್ಚನ್ ಇರಲಿದ್ದು ನೀವು ನಿಮ್ಮ ಪಡಿತರ ಚೀಟಿ ಸಂಖ್ಯೆ ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ, ಇಲ್ಲಿ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಸಿಗಲಿದೆ.

advertisement

Leave A Reply

Your email address will not be published.