Karnataka Times
Trending Stories, Viral News, Gossips & Everything in Kannada

WhatsApp Chat: ವಾಟ್ಸಾಪ್ ಚಾಟ್ ಸಾಕ್ಷಿ ಕೋರ್ಟಿನಲ್ಲಿ ನಡೆಯುತ್ತಾ? ಹೀಗೆ ಆದ್ರೆ ಮಾತ್ರ ಕೋರ್ಟ್ ಹೊಸ ಆದೇಶ

advertisement

ನಮ್ಮ ಭಾರತ ದೇಶದಲ್ಲಿ ಪ್ರತಿಯೊಂದು ವಿಚಾರಗಳಿಗಾಗಿ ಕೂಡ ಕಾನೂನು ನಿಯಮಗಳನ್ನು ರಚಿಸಲಾಗಿದೆ. ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ದೇಶ ಆಗಿದ್ರು ಕೂಡ ನಮ್ಮ ಭಾರತ ದೇಶದಲ್ಲಿ 140 ಕೋಟಿಗೂ ಅಧಿಕ ಜನಸಂಖ್ಯೆಯನ್ನು ನಿಯಂತ್ರಣ ಮಾಡುವಂತಹ ಕಾನೂನು ವ್ಯವಸ್ಥೆ ಇದೆ ಅನ್ನೋದನ್ನ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಯಾಕೆಂದ್ರೆ ಇಷ್ಟೊಂದು ಜನಸಂಖ್ಯೆಯನ್ನು ಹೊಂದಿದರು ಕೂಡ ಬೇರೆ ದೇಶಗಳಲ್ಲಿ ಹಾಗೂ ವೆಸ್ಟರ್ನ್ ದೇಶಗಳಲ್ಲಿ ನಡೆಯುತ್ತಿರುವ ರೀತಿಯಲ್ಲಿ ದಂಗೆಗಳು ನಮ್ಮ ದೇಶದಲ್ಲಿ ನಡೆಯುತ್ತಿಲ್ಲ.

ಇನ್ನು ಇವತ್ತಿನ ಲೇಖನದಲ್ಲಿ ನಾವು ಮಾತನಾಡೋಕೆ ಹೊರಟಿರೋದು ಇಂದಿನ ದಿನಗಳಲ್ಲಿ ಸಾಕಷ್ಟು ಜನರ ಮನಸ್ಸಿನಲ್ಲಿ ಇರುವಂತಹ ಒಂದು ಅನುಮಾನದ ಬಗ್ಗೆ. ಅದೇನೆಂದರೆ ಸಾಕಷ್ಟು ಸಮಯಗಳಲ್ಲಿ ನಮ್ಮ ಹಾಗೂ ಇನ್ನೊಬ್ಬರ ನಡುವೆ ಜಗಳವಾಗುತ್ತದೆ ಹಾಗೂ ಅದು ಕೋರ್ಟಿಗೆ ಹೋಗಿರುತ್ತದೆ.

ಆ ಸಂದರ್ಭದಲ್ಲಿ ಒಂದು ವೇಳೆ ಸಾಕ್ಷಿಯ ರೂಪದಲ್ಲಿ ಯಾವುದೇ ರೀತಿಯ ವಸ್ತುಗಳು ಅಥವಾ ವಿಚಾರಗಳು ದೊರಕಿದ್ರೂ ಕೂಡ ಅದನ್ನ ಕೋರ್ಟಿಗೆ ಒಪ್ಪಿಸಬಹುದಾ ಎನ್ನುವ ಅನುಮಾನ ಸಾಕಷ್ಟ್ ಜನರ ಬಳಿ ಇರುತ್ತದೆ ಅದರಲ್ಲಿ ಇವತ್ತು ನಾವು ಚರ್ಚೆ ಮಾಡಲು ಹೊರಟಿರುವಂತಹ ಸುದ್ದಿ ಕೂಡ ಒಂದು.

ವಾಟ್ಸಾಪ್ ಚಾಟ್ ಅನ್ನು ಪ್ರೂಫ್ ರೂಪದಲ್ಲಿ ಕೋರ್ಟ್ ಒಪ್ಪಿಕೊಳ್ಳುತ್ತಾ?

 

Image Source: La Vanguardia

 

advertisement

ಹೌದು ನೀವು ಸರಿಯಾಗಿ ಕೇಳಿದ್ದೀರಾ. ವಾಟ್ಸಾಪ್ ಚಾಟ್ (WhatsApp Chat) ನಲ್ಲಿ ಕೆಲವೊಮ್ಮೆ ಮಾಡಿರುವಂತಹ ಚಾಟಿಂಗ್, ನೀವು ಕೋರ್ಟಿ (Court) ನಲ್ಲಿ ಹೋರಾಡುತ್ತಿರುವಂತಹ ಪ್ರಕರಣಕ್ಕೆ ಸಂಬಂಧಪಟ್ಟ ಆಗಿರುತ್ತದೆ ಹಾಗೂ ಅತ್ಯಂತ ಪ್ರಮುಖವಾದ ಸಾಕ್ಷಿ ರೂಪದಲ್ಲಿ ಕೂಡ ಅದನ್ನು ನೀವು ಪ್ರಸ್ತುತಪಡಿಸಿದರೆ ಕೆಲವೊಮ್ಮೆ ಗೆಲುವು ನಿಮ್ಮದಾಗುವ ಸಾಧ್ಯತೆ ಇದೆ ಎನ್ನುವ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಆ ಸಂದರ್ಭದಲ್ಲಿ ನೀವು ಕೋರ್ಟಿಗೆ ನಿಮ್ಮ ವಾಟ್ಸಪ್ ಚಾಟ್ (WhatsApp Chat) ಅನ್ನು ಪ್ರಸ್ತುತಪಡಿಸಬಹುದಾ ಎನ್ನುವುದೇ ಸಾಕಷ್ಟು ಜನರ ಗೊಂದಲವಾಗಿದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ನಿಮ್ಮ ಗೊಂದಲವನ್ನು ಪರಿಹರಿಸುವಂತಹ ಪ್ರಯತ್ನವನ್ನು ಮಾಡೋಣ.

 

Image Source: LatestLaws.com

 

ಈ ಸಂದರ್ಭದಲ್ಲಿ ಕೋರ್ಟ್ ನಿಮ್ಮ ವಾಟ್ಸಪ್ ಚಾಟ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಆದರೆ ಅದು ಸಾಕ್ಷಿಯ ಒರಿಜಿನಲ್ ಸಂಪನ್ಮೂಲ ಆಗಿರಬೇಕು ಅನ್ನೋದನ್ನ ಖಾತ್ರಿಪಡಿಸಿಕೊಳ್ಳುತ್ತದೆ. ನಿಜವಾಗಿಯೂ ಆ ವಾಟ್ಸಪ್ ಚಾಟ್ ನಿಂದಲೇ ಈ ಸಾಕ್ಷಿ ನಿಜಕ್ಕೂ ಪ್ರಾರಂಭ ಆಗಿರೋದ ಅನ್ನೋದನ್ನ ಕೋರ್ಟ್ ಖಚಿತಪಡಿಸಿಕೊಳ್ಳುತ್ತದೆ.

ಇದಕ್ಕಾಗಿ ಪ್ರಮುಖವಾಗಿ ಕೋರ್ಟ್ Forensic ರಿಪೋರ್ಟ್ ಅನ್ನು ಪಡೆದುಕೊಂಡು ಈ ವಾಟ್ಸಪ್ ಚಾಟ್ ನಿಜಕ್ಕೂ ಸಾಕ್ಷಿಯ ಮೂಲ ಆಗಿರುತ್ತದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರ ನಿಮ್ಮ ವಾಟ್ಸಪ್ ಚಾಟ್ ಅನ್ನು ಸಾಕ್ಷರ ರೂಪದಲ್ಲಿ ಕೋರ್ಟ್ ನಲ್ಲಿ ಪ್ರಸ್ತುತ ಪಡಿಸಬಹುದಾ ಇಲ್ಲವಾ ಎನ್ನುವುದನ್ನು ನಿರ್ಧರಿಸುತ್ತದೆ. ಇದಕ್ಕಾಗಿ ನಿಮಗೆ ಬಂದಿರುವಂತಹ ಚಾಟ್ ಸುರಕ್ಷಿತವಾಗಿರುವುದು ಅಗತ್ಯವಾಗಿದೆ. ಹಾಗೂ ಎಲ್ಲದಕ್ಕಿಂತ ಪ್ರಮುಖವಾಗಿ ಆ ಮೊಬೈಲ್ ನಿಮ್ಮ ಬಳಿ ಯಾವುದೇ ರೀತಿ ಹಾನಿಗೆ ಒಳಗಾಗದಂತೆ ಇರಬೇಕು.

advertisement

Leave A Reply

Your email address will not be published.