Karnataka Times
Trending Stories, Viral News, Gossips & Everything in Kannada

Land: ಜಮೀನಿಗೆ ಹಲವಾರು ವರ್ಷಗಳಿಂದ ರಸ್ತೆ ಇಲ್ಲದ ಎಲ್ಲರಿಗೂ ಬೆಳ್ಳಂಬೆಳಗ್ಗೆ ರಾಜ್ಯ ಸರಕಾರದ ಹೊಸ ಘೋಷಣೆ!

advertisement

ರಸ್ತೆ ಸಂಚಾರ ಇಂದು ಪ್ರತೀ ಕ್ಷೇತ್ರಕ್ಕೆ ಅತ್ಯವಶ್ಯಕವಾಗಿದೆ. ಇಂದು ಕೃಷಿ ಕಾರ್ಯ ಮಾಡುವ ಅನೇಕ ರೈತರಿಗೆ ಸರಿಯಾದ ಸಾರಿಗೆ ಮಾರ್ಗವಿಲ್ಲದೇ ಸಂಚಾರವೇ ಕಷ್ಟವೆನಿಸುತ್ತದೆ‌. ತಮ್ಮ ತಮ್ಮ ಜಮೀನು (Land) ಗಳಿಗೆ ಹೋಗಬೇಕಾದರೆ ಬೇರೆ ಅವರ ಹೊಲ ಗದ್ದೆ ದಾಟಬೇಕು. ಅವರ ವ್ಯಾಜ್ಯ ಇದ್ದರಂತೂ ಕೃಷಿ ಕಾರ್ಯ ಮಾಡುವುದು ದೊಡ್ಡ ಸಮಸ್ಯೆ ಆಗುತ್ತದೆ. ಹೀಗಾಗಿ ಹೊಲ ಗದ್ದೆಗಳಿಗೆ ಹೋಗಲು ತಮ್ಮ ಕೃಷಿ ಪರಿಕರ, ಬೆಳೆಕಾಳು ಸಾಗಿಸಲು ನೆರವಾಗುವ ಉದ್ದೇಶದಿಂದಾಗಿ ರಾಜ್ಯ ಸರಕಾರವು ನೂತನ ಯೋಜನೆ ಒಂದನ್ನು ಜಾರಿಗೆ ತಂದಿದೆ.

ಈ ಯೋಜನೆ ಹೆಸರೇನು?

ನಮ್ಮ ಹೊಲ ನಮ್ಮ ರಸ್ತೆ (Namma Hola Namma Raste) ಯೋಜನೆಯ ಅಡಿಯಲ್ಲಿ ರೈತರಿಗೆ ತಮ್ಮ ಜಮೀನು (Land), ಗದ್ದೆಗಳಿಗೆ ಯಾರ ಹಂಗು ಇಲ್ಲದೇ ಹೋಗಲು ಕೃಷಿ ಕಾರ್ಯ ಮಾಡಲು ಸಹಕಾರ ನೀಡುವಂತೆ ರಾಜ್ಯ ಸರಕಾರ ತೀರ್ಮಾನಿಸಿದೆ. ಅನೇಕ ರೈತರು ರಸ್ತೆ ಇಲ್ಲದೆ ಅಕ್ಕ ಪಕ್ಕದ ಜಮೀನು ಕೃಷಿ ಭೂಮಿಯನ್ನು ಹಾದು ಹೋಗಬೇಕಿತ್ತು ಆದರೆ ಇನ್ನು ಮುಂದೆ ಈ ರೀತಿ ಯಾವುದೇ ಹಂಗು ಇರಲಾರದು. ಜಮೀನುಗಳಿಗೆ ಹೋಗಲು ರೈತರಿಗೆ 23ಫೀಟ್ ರಸ್ತೆ ಒದಗಿಸಲು ರಾಜ್ಯ ಸರಕಾರವು ತಿಳಿಸಿದೆ.

Image Source: Wikimedia Commons

ಜಮೀನಿಗೆ (Land) ರಸ್ತೆ ನೀವು ಬಳಸಿಕೊಳ್ಳಬಹುದು:

advertisement

ನಿಮ್ಮ ಜಮೀನಿಗೆ ಕೂಡ ರಸ್ತೆ ಸೌಲಭ್ಯ ಬಳಸಿಕೊಳ್ಳಬಹುದು. ಹಳ್ಳ, ದಿಬ್ಬ, ಕಾಲುದಾರಿ, ಬಂಡಿದಾರಿ ಇದ್ದರೆ ಅಂತಹ ದಾರಿಯಲ್ಲಿ ಸಮಸ್ಯೆ ಬಗೆಹರಿಸಲು ಈ ಸೌಲಭ್ಯ ಪಡೆಯಬಹುದು. ಈ ಸೌಲಭ್ಯ ಪಡೆಯಲು ಏನು ಮಾಡಬೇಕು, ಯಾವೆಲ್ಲ ದಾಖಲಾತಿ ಅಗತ್ಯ ಎಂಬ ಬಗ್ಗೆ ನೀವಿಂದು ಈ ಲೇಖನದ ಮೂಲಕ ತಿಳಿಯಬಹುದು. ಸಾಕಷ್ಟು ಬಾರಿ ಈ ರಸ್ತೆ ಕಾರಣಕ್ಕೆ ಅನೇಕ ಜಗಳ ಏರ್ಪಟ್ಟಿದ್ದು ಕಾಣಬಹುದು ಹೀಗಾಗಿ ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಬಹಳ ಉಪಯೋಗ ಆಗಲಿದೆ.

ಯೋಜನೆ ಅಡಿಯಲ್ಲಿ ಸೇವೆ

ನರೇಗಾ (MGNREGA) ಅಥವಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೈತರು ಸರಕಾರಿ ಸೌಲಭ್ಯ ಪಡೆದು ರಸ್ತೆ ಮಾಡಿಕೊಳ್ಳಬಹುದು ಅದಕ್ಕಾಗಿ ನೀವು ಒಂದು ಸರಿಯಾದ ಅರ್ಜಿ ಬರೆದು ಗ್ರಾಮ ಪಂಚಾಯತ್ (Gram Panchayat) ಗೆ ಸಲ್ಲಿಕೆ ಮಾಡಬೇಕು. ಅದನ್ನು ಪರಿಶೀಲನೆ ಮಾಡಿ ನಿಮ್ಮ ಹೊಲಕ್ಕೆ ಹೋಗಲು ದಾರಿಯ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಹಾಗಾಗಿ ಈ ವ್ಯವಸ್ಥೆ ನೀವು ಬಳಸಿಕೊಳ್ಳಬಹುದು.

Image Source: Civil Society Magzine

ಈ ಮಾಹಿತಿ ಅಗತ್ಯ

ನಮ್ಮ ಹೊಲ ನಮ್ಮ ರಸ್ತೆ ಯೋಜನೆಯ ಅಡಿಯಲ್ಲಿ ಸೇವೆ ಪಡೆಯಲು ನಿಮ್ಮ ಜಮೀನಿನ ಸರ್ವೇ ನಂಬರ್, ಜಮೀನಿನ ವಿಸ್ತೀರ್ಣ ಎಲ್ಲ ಜಮೀನಿನ ಹಾಗೂ ವೈಯಕ್ತಿಕ ವಿವರ , ವಾಸ್ತವ್ಯ ಆಧಾರಗಳನ್ನು ನೀಡಬೇಕು. ಬಳಿಕ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿಮ್ಮ ಅರ್ಜಿ ಪರಿಶೀಲನೆ ಆಗಿ ಅನುಮೋದನೆ ನೀಡಲಾಗುತ್ತದೆ. ಗ್ರಾಮ ಪಂಚಾಯತ್ ಅನುಮೋದನೆ ಸಿಕ್ಕ ಬಳಿಕ ನಿಮಗೆ ರಸ್ತೆ ನಿರ್ಮಾಣಕ್ಕೆ ಎಷ್ಟು ಅನುದಾನ ಅವಶ್ಯಕ ಎಂಬುದು ಸಹ ತಿಳಿಸಲಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ಪಂಚಾಯತ್ ನ ಓರ್ವ ವ್ಯಕ್ತಿಯು ನಿಮ್ಮ ಜಮೀನಿನ ಸುತ್ತಳತೆ ಮಾಡಿ ಅದಕ್ಕೆ ಎಷ್ಟು ಕೆಲಸಗಾರರು ಬೇಕೆಂಬುದು ಸಹ ತಿಳಿಸಲಾಗುತ್ತದೆ ಹಾಗೇ ಜಾಬ್ ಕಾರ್ಡ್ ಇರುವ ಕೂಲಿ ಕಾರ್ಮಿಕರನ್ನು ಬಳಸಿಕೊಂಡು 60% ಯಂತ್ರ ಸಹಾಯ ಹಾಗೂ 40% ಕಾರ್ಮಿಕ ಸಹಾಯ ಅಗತ್ಯ, ಈ ರಸ್ತೆ ಸಮುದಾಯ ಮಾಡಿಸಲು ಸುತ್ತಮುತ್ತಲಿನ ರೈತರ ಒಪ್ಪಿಗೆ ಕೂಡ ಅಗತ್ಯ. ಈ ಬಗ್ಗೆ ಗೊಂದಲ ಇದ್ದರೆ ಗ್ರಾಮ ಪಂಚಾಯತ್ ನ ಸದಸ್ಯರನ್ನು ಭೇಟಿ ಮಾಡಿ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಪಡೆಯಬಹುದು.

advertisement

Leave A Reply

Your email address will not be published.