Karnataka Times
Trending Stories, Viral News, Gossips & Everything in Kannada

New Govt Scheme: ಪುರುಷ ಮಹಿಳೆ ಎನ್ನದೆ ಎಲ್ಲರಿಗೂ ಪ್ರತಿ ತಿಂಗಳು 3000ರೂ ಸಿಗುವ ಕೇಂದ್ರದ ಹೊಸ ಯೋಜನೆ! ಇಲ್ಲಿದೆ ಡೈರೆಕ್ಟ್ ಲಿಂಕ್

advertisement

ಕೇಂದ್ರದಲ್ಲಿ ಬಿಜೆಪಿ ಸರಕಾರ ಜಾರಿಗೆ ಬಂದಾಗಿನಿಂದಲೂ ಸದಾ ಒಂದಲ್ಲ ಒಂದು ಅಭಿವೃದ್ಧಿ ಕಾರ್ಯ ಮಾಡುತ್ತಲೇ ಬಂದಿದೆ. ಮಹಿಳೆಯರಿಗೆ, ಮಕ್ಕಳಿಗೆ, ರೈತರಿಗೆ ಹೀಗೆ ಪ್ರತ್ಯೇಕ ಸಮುದಾಯಗಳನ್ನು ಉದ್ದೇಶಿಸಿ ಕೂಡ ಅನೇಕ ಯೋಜನೆ ಜಾರಿಗೆ ತಂದಿರುವುದನ್ನು ನಾವು ಕಾಣಬಹುದು. ಇದೀಗ ರೈತರಿಗೆ ನೆರವಾಗಬೇಕು ಎಂಬ ನೆಲೆಯಲ್ಲಿ ವಿನೂತನ ಯೋಜನೆ (New Govt Scheme)ಯೊಂದು ಆರಂಭ ಮಾಡಲಾಗಿದ್ದು ವೃದ್ಧಾಪ್ಯದಲ್ಲಿ ಇರುವ ರೈತರಿಗೆ ಈ ಯೋಜನೆಯಿಂದ ಆರ್ಥಿಕ ನೆರವು ಸಿಗಲಿದೆ ಎನ್ನಬಹುದು.

ಯಾವುದು ಈ ಯೋಜನೆ:

 

Image Source: aatmnirbhar sena

 

ಈ ಯೋಜನೆ ಹೆಸರು ಕಿಸಾನ್ ಮನ್ ಧನ್ (Kisan Man Dhan) ಎಂದಾಗಿದ್ದು, ರೈತರಿಗೆ ವೃದ್ಧಾಪ್ಯದ ಅವಧಿಯಲ್ಲಿ ನೆರವಾಗಬೇಕು ಎಂಬ ಉದ್ದೇಶಕ್ಕೆ ಈ ಯೋಜನೆ ಆರಂಭ ಮಾಡಲಾಗಿದೆ. ರೈತ ಸಮುದಾಯಕ್ಕೆ ತಮ್ಮ ವೃದ್ಧಾಪ್ಯದ ಅವಧಿಯಲ್ಲಿ ಪಿಂಚಣಿ (Pension) ರೂಪದಲ್ಲಿ ಹಣಕಾಸಿನ ನೆರವು ನೀಡಲು ಈ ಯೋಜನೆ ಬಹಳ ಅನುಕೂಲಕರವಾಗಲಿದೆ. ಈ ಯೋಜನೆ ಅಡಿಯಲ್ಲಿ ಮೊದಲು ರೈತರು ಪ್ರಿಮಿಯಂ ಮೊತ್ತ ಕಟ್ಟಬೇಕಿದ್ದು 60ವರ್ಷದ ಬಳಿಕ ಪಿಂಚಣಿ ರೂಪದಲ್ಲಿ ಹಣ ಮಂಜೂರಾಗಲಿದೆ.

ಯಾರೆಲ್ಲ ಅರ್ಹರು:

advertisement

ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ (PM Kisan Mandhan Yojana) ಯು ಹೆಸರೇ ಸೂಚಿಸುವಂತೆ ಎಲ್ಲ ಬಡವರ್ಗದ ರೈತರ ನೆರವಿಗಾಗಿ ಹುಟ್ಟಿಕೊಂಡ ಯೋಜನೆಯಾಗಿದೆ. 18 ರಿಂದ 40 ವರ್ಷದ ಒಳಗಿನ ರೈತರು ಯೋಜನೆಗೆ ಅರ್ಜಿ ಸಲ್ಲಿಸಬೇಕು. ಬಳಿಕ ಅವರಿಂದ ಮಾಸಿಕ ಮೊತ್ತ ಪಡೆಯಲಾಗುವುದು. 18 ವರ್ಷಕ್ಕೆ ಆರಂಭ ಮಾಡಿದವರಿಗೆ 55 ರೂಪಾಯಿ ಮೊತ್ತವನ್ನು ಪಾವತಿಯಾಗಿ ಪಡೆಯಲಾಗುವುದು. ಹೀಗೆ 60 ವರ್ಷದ ಹೂಡಿಕೆ ಬಳಿಕ ತಿಂಗಳಿಗೆ 3,000 ದಂತೆ ಹಣ ಜಮೆ ಆಗಲಿದೆ.

ಹೂಡಿಕೆ ಮೊತ್ತ ಭಿನ್ನ:

 

Image Source: News Nation

 

ಇಲ್ಲಿ ಮಾಡುವ ಹೂಡಿಕೆಯ ಮೊತ್ತವು ರೈತರ ವಯಸ್ಸಿನ ಆಧಾರದ ಮೇಲೆ ಭಿನ್ನವಾಗಿರಲಿದೆ.18 ವರ್ಷಕ್ಕೆ ಈ ಯೋಜನೆಯಲ್ಲಿ ತೊಡಗಿಕೊಂಡರೆ 55ರೂಪಾಯಿ, 30 ವರ್ಷಕ್ಕೆ ಮಾಸಿಕ 110 ಹಾಗೂ 40 ವರ್ಷದಿಂದ ಆರಂಭ ಮಾಡಿದರೆ 220 ಮಾಸಿಕದಂತೆ ಪಾವತಿ ಮಾಡಬೇಕು. ಹೀಗೆ 60ವರ್ಷ ಆದ ಬಳಿಕ ಮಾಸಿಕ 3000 ರೂಪಾಯಿ ನಿಮಗೆ ಸಿಗಲಿದೆ. ಒಂದು ವೇಳೆ ವ್ಯಕ್ತಿ ಅವಧಿ ಪೂರ್ಣ ಗೊಳ್ಳುವ ಮೊದಲೇ ಮರಣ ಹೊಂದಿದರೆ ನಾಮಿನಿ ಇದ್ದವರಿಗೆ ಹಣ ವರ್ಗಾವಣೆ ಆಗಲಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಕಿಸಾನ್ ಮನ್ ಧನ್ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ನಾಮಿನಿಯ ವಿವರ, ವಿಳಾಸದ ಪುರಾವೆ, ಬ್ಯಾಂಕಿನ ಖಾತೆ ವಿವರ ಹೊಂದಿರಬೇಕು. ಆನ್ಲೈನ್ ಮೂಲಕ https://maandhan.in/ ಈ ಲಿಂಕ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ.

advertisement

Leave A Reply

Your email address will not be published.