Karnataka Times
Trending Stories, Viral News, Gossips & Everything in Kannada

G Parameshwar: ಯಾವುದೇ ಬ್ಯಾಂಕ್ ನಲ್ಲಿ ಸಾಲ ಇದ್ದವರಿಗೆ ಸಿಹಿಸುದ್ದಿ ಕೊಟ್ಟ ಗೃಹ ಸಚಿವ ಜಿ‌ ಪರಮೇಶ್ವರ್!

advertisement

ಇನ್ನೇನು ಕೆಲವೇ ದಿನದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದರ ಪೂರ್ವ ಹಿನ್ನೆಲೆಗೆ ಸರಕಾರ ಗೆಲುವಿಗಾಗಿ ಸರ್ವ ಪ್ರಯತ್ನ ಮಾಡುತಲಿದೆ. ರಾಜ್ಯದ ರಾಜಕೀಯ ಪಕ್ಷದಲ್ಲಿ ಈಗಾಗಲೇ ಒಂದೊಂದೇ ವ್ಯಾಪ್ತಿಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದ್ದು ಇನ್ನೊಂದೆಡೆ ಪಕ್ಷದಿಂದ ಸೀಟ್ ಸಿಗುತ್ತಿಲ್ಲ ಎಂದು ಕೆಲ ನಾಯಕರು ಪಕ್ಷೇತರರಾಗಿ ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಕೂಡ ಇದೆ. ಈ ನಡುವೆ ಕೆಲ ಆಯ್ಕೆ ಆದ ಅಭ್ಯರ್ಥಿಗಳು ಪಕ್ಷದಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಚುನಾವಣೆ ಪ್ರಚಾರ

ಚುನಾವಣೆ ಬರುವ ಮೊದಲೇ ಪಕ್ಷದ ಪರವಾಗಿ ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದು ಬಹಳ ಅಗತ್ಯವಾಗಿದೆ. ಈ ನಡುವೆ ನೀತಿ ಸಂಹಿತೆ ಕೂಡ ಜಾರಿಯಲ್ಲಿದ್ದು ಎಲ್ಲೂ ಎಡವದಂತೆ ನೋಡಿಕೊಳ್ಳಬೇಕಾಗಿದೆ. ಈ ನಡುವೆಯೇ ಪಕ್ಷ ಅಧಿಕಾರಕ್ಕೆ ಬಂದರೆ ಯಾವೆಲ್ಲ ಸೌಕರ್ಯ ನೀಡುತ್ತೇವೆ ಏನೆಲ್ಲ ಅಭಿವೃದ್ಧಿ ಕಾರ್ಯ ಮಾಡ್ತೆವೆ ಎಂಬ ಬಗ್ಗೆ ಕೂಡ ಪ್ರಚಾರ ಕಾರ್ಯ ನಡೆಯುತ್ತಿದೆ.

ಪಂಚ ಗ್ಯಾರೆಂಟಿ

ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರೆಂಟಿ ಯೋಜನೆ ಯಶಸ್ವಿ ಆದಂತೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಸರಕಾರದ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ 5 ಗ್ಯಾರೆಂಟಿ ಈಡೇರಿಸುವುದಾಗಿ ಹೇಳಿದ್ದಾರೆ. ಶಕ್ತಿಕಾ ಸಮ್ಮಾನ್ ಯೋಜನೆ, ಮಹಾಲಕ್ಷ್ಮೀ ಯೋಜನೆ, ಆದಿ ಅಬಾದಿ ಪೂರ ಹಕ್ ಯೋಜನೆ, ಸಾವಿತ್ರಿ ಭಾಪುಲೆ ಹಾಸ್ಟೆಲ್ ಯೋಜನೆ, ಅಧಿಕಾರ ಮೈತ್ರಿ ಎಂದು 5 ಅಭಿವೃದ್ಧಿ ಯೋಜನೆ ಮುಂದಿಟ್ಟು ಚುನಾವಣೆ ಪ್ರಚಾರ ಕಾರ್ಯ ಮಾಡಲಾಗುತ್ತಿದೆ.

advertisement

Image Source: Public Tv english

ಗೃಹ ಸಚಿವರಿಂದ (G Parameshwar)ಸ್ಪಷ್ಟನೆ

ಗೃಹ ಸಚಿವರಾದ ಜಿ. ಪರಮೇಶ್ವರ್ (G Parameshwar) ಅವರು ಈ ಬಾರಿ ಇಂಡಿಯಾ ಮೈತ್ರಿಕೂಟ ಅಧಿಕಾರ ಪಡೆದರೆ ಏನೆಲ್ಲ ಆಡಳಿತ ಸುಧಾರಣೆ ಜಾರಿಗೆ ತರಲಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಆಡಳಿತ ಅಧಿಕಾರ ಬಂದರೆ ರೈತರಿಗೆ ವಿಶೇಷ ಕೊಡುಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ರೈತರ ಸಾಲ ಮನ್ನ ಮಾಡುವ ಜೊತೆಗೆ ವಿವಿಧ ಸೇವೆಗಳನ್ನು ಜನರಿಗೆ ನೀಡುವುದಾಗಿ ಹೇಳಿದ್ದಾರೆ. ಅದರ ಜೊತೆಗೆ ಯುವಕ ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಚಟುವಟಿಕೆಗೆ ಒತ್ತುನೀಡುವುದಾಗಿ ಕೂಡ ಅವರು ತಿಳಿಸಿದ್ದಾರೆ.

ಮಹಿಳೆಯರಿಗೆ ಮಹಾಲಕ್ಷ್ಮೀ ಯೋಜನೆ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಈಗಾಗಲೇ ಅನೇಕ ಸೇವೆಗಳು ಮಹಿಳೆಯರಿಗೆ ಸಿಕ್ಕಿದೆ. ರಾಜ್ಯದಲ್ಲಿ ಗೃಹಲಕ್ಷ್ಮೀ (GruhaLakshmi) ಯೋಜನೆ ಜಾರಿಗೆ ಬಂದ ಕಾರಣ ಅನೇಕ ಅಶಕ್ತ ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನೆರವು ಸಿಕ್ಕಂತೆ ಆಗಿದೆ. ಈ ನಡುವೆ ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಮನೆಯ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಹಣ ನೀಡುವುದಾಗಿ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

advertisement

Leave A Reply

Your email address will not be published.