Karnataka Times
Trending Stories, Viral News, Gossips & Everything in Kannada

Sim Card: ಜಿಯೋ, ಏರ್ಟೆಲ್ ಸಿಮ್ ಇದ್ದವರಿಗೆ ಬೆಳ್ಳಂಬೆಳಗ್ಗೆ ಕಹಿಸುದ್ದಿ!

advertisement

ಈಗಂತೂ ಬಹುತೇಕ ಕೆಲಸ ಕಾರ್ಯಗಳು ಮೊಬೈಲ್ ನಿಂದಲೇ ನಡೆಯಬೇಕು. ಹಾಗಾಗಿ ದಿನನಿತ್ಯ ಬಳಕೆಯಾಗುವ ಅಗತ್ಯ ವಸ್ತುಗಳ ಪಟ್ಟಿಗೆ ಮೊಬೈಲ್ ಫೋನ್ ಕೂಡ ಸೇರಿ ಬಿಟ್ಟಿದೆ. ಹೀಗಾಗಿ ಮೊಬೈಲ್ ಬಳಕೆದಾರರ ಸಂಖ್ಯೆ ಅಧಿಕ ಆದಂತೆ ಮೊಬೈಲ್ ನೆಟ್ ವರ್ಕ್ ಕಂಪೆನಿಗಳ ಪ್ರಾಧಿನ್ಯತೆ ಕೂಡ ಅಧಿಕ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ನೆಟ್ವರ್ಕ್ ಕಂಪೆನಿ ಇದ್ದರೂ ಹೆಚ್ಚು ಜನಪ್ರಿಯ ಹೊಂದಿದ್ದು ಏರ್ಟೆಲ್ ಹಾಗೂ ಜಿಯೋ ಸಿಮ್ (Sim Card) ಆಗಿದೆ.

ಅಧಿಕ ದರ

ಹಿಂದೆ ಹೋಲಿಸಿದೆ ಈಗ ಮೊಬೈಲ್ ಬಿಲ್ ಕೂಡ ಅಧಿಕ ಆಗಿದೆ ಎನ್ನಬಹುದು. ಕರೆ ಹೋಗಲು ಕರೆ ಸ್ವೀಕಾರ ಮಾಡಲು ಮೊತ್ತ ನಿಗದಿ ಮಾಡುವ ಜೊತೆಗೆ ಅಂತರ್ಜಾಲ ಬಳಕೆಗೂ ಕೂಡ ರಿಚಾರ್ಜ್ ಮೊತ್ತ ವನ್ನು ದುಬಾರಿ ಮಾಡಲಾಗಿದೆ. ಅನೇಕ ವರ್ಷಗಳ ತನಕ BSNL, Vadafone ಹಾಗೂ idea ಕಂಪೆನಿಗಳ ಆಡಳಿತಕ್ಕೆ ಪ್ರಬಲ ಪೈ ಪೋಟಿ ನೀಡಿದ್ದ ಏರ್ಟೆಲ್ ಕಂಪೆನಿಗೆ ಜಿಯೋ ಸಡ್ಡು ಹೊಡೆದಿತ್ತು. ಜಿಯೋ ಮತ್ತು ಏರ್ಟೆಲ್ ಕಂಪೆನಿ ನಡುವೆ ಉತ್ತಮ ಸ್ಪರ್ಧೆ ಏರ್ಪಡುತ್ತಿದೆ ಎನ್ನಬಹುದು. ಹೀಗಾಗಿ ಮತ್ತೆ ಪುನಃ ಈ ಎರಡು ಕಂಪೆನಿಗಳು ರಿಚಾರ್ಜ್ ಮೊತ್ತ ಏರಿಸಲು ತೀರ್ಮಾನ ಕೈಗೊಂಡಿದೆ.

Image Source: Airtel

ಚುನಾವಣೆ ಬಳಿಕ ಸಾಧ್ಯತೆ

advertisement

ಲೋಕಸಭೆಯ ಚುನಾವಣೆ ಇನ್ನೇನು ಸಮೀಪದಲ್ಲೇ ಇದೆ ಹೀಗಾಗಿ ಲೋಕಸಭೆ ಚುನಾವಣೆ ಆದ ಬಳಿಕ ಟೆಲಿಕಾಂ ದೈತ್ಯ ಕಂಪೆನಿ ಆದ ಏರ್ಟೆಲ್ (Airtel) ಹಾಗೂ ಜಿಯೋ (Jio) ಕಂಪೆನಿಗಳು ದರ ಏರಿಕೆ ಮಾಡಲು ಮುಂದಾಗಿದೆ ಎಂಬ ಮಹತ್ವದ ಮಾಹಿತಿಯೊಂದು ತಿಳಿದು ಬಂದಿದೆ. ಟೆಲಿಕಾಂ ಮೂಲ ಮಾಹಿತಿ ಪ್ರಕಾರ ಭಾರತೀಯ ಏರ್ಟೆಲ್ ಕಂಪೆನಿ ಮುಖ್ಯ ಸುಂಕ ಹೆಚ್ಚಳ ಮಾಡಲು ತೀರ್ಮಾನ ಮಾಡಿದರೆ ಜಿಯೋ ಕಂಪೆನಿ ಹೊಸ ಕ್ರಮ ಜಾರಿಗೆ ತರಲು ಮುಂದಾಗಿದೆ.

ಜಿಯೋ ಕ್ರಮ ಏನು?

ಹೆಚ್ಚುವರಿ ಸುಂಕ ವಿಧಿಸುವ ಬದಲು ಡೇಟಾ ಅಧಿಕವಾಗಿ ಬಳಸುವ ಉಪಕ್ರಮಗಳತ್ತ ಚಿಂತನೆ ನಡೆಸಲು ಮುಂದಾಗಿದೆ. ಅಂದರೆ ಜಿಯೋ ತನ್ನ ಪ್ಯಾಕೇಜ್ ಅನ್ನು ಉನ್ನತ ಮಟ್ಟಕ್ಕೆ ವಿಸ್ತರಿಸುವ ಮೂಲಕ ದರ ಏರಿಸಲಿದೆ. ಪ್ರತಿ ಬಳಕೆದಾರರಿಗೆ ಜಿಯೋದ ಸರಾಸರಿ ಆದಾಯವನ್ನು ಹೆಚ್ಚಳ ಮಾಡಲಿದೆ. ಈ ಎಲ್ಲ ಕ್ರಮವನ್ನು ಕೂಡ ಲೋಕಸಭೆ ಚುನಾವಣೆ ನಡೆದ ಬಳಿಕ ಜಾರಿಗೆ ತರಲು ಮುಂದಾಗಲಾಗಿದೆ.

Image Source: Business League

IPL ನಿಂದಲೂ ಅಧಿಕ ಲಾಭ

ಈಗಂತೂ ಎಲ್ಲಿ ನೋಡಿದರೂ ಐಪಿಎಲ್ ನದ್ದೆ ಮಾತುಕತೆ. IPL ಆರಂಭ ಆದ ಹಿನ್ನೆಲೆಯಲ್ಲಿ ಭಾರತೀಯ ಜಿಯೋ ಹಾಗೂ ಏರ್ಟೆಲ್ ಕಂಪೆನಿಗಳಿಗೆ ಅಧಿಕ ಉತ್ತಮ ಲಾಭವಾಗುತ್ತಿದೆ. ಮನೆಯಲ್ಲಿ ಟಿವಿ ನೋಡಲು ಸಾಧ್ಯ ಇಲ್ಲದವರು ಮತ್ತು ದೂರದೂರಿನಲ್ಲಿ ವಾಸ ಮಾಡುವವರು ಜಿಯೋ ಆ್ಯಪ್ ಮೂಲಕ ಐಪಿಎಲ್ ವೀಕ್ಷಣೆ ಮಾಡುತ್ತಿದ್ದು ಇದಕ್ಕೆ ಡಾಟಾ ಕೂಡ ಅಧಿಕ ಬೇಕಾಗಿದೆ.

advertisement

Leave A Reply

Your email address will not be published.