Karnataka Times
Trending Stories, Viral News, Gossips & Everything in Kannada

SIM Card: ಸಿಮ್ ಕಾರ್ಡ್ ಪೋರ್ಟ್ ಮಾಡಿಸುವವರಿಗೆ ತಕ್ಷಣವೇ ಜಾರಿ ಬರುವಂತೆ ಹೊಸ ರೂಲ್ಸ್!

advertisement

ಭಾರತದ ಟೆಲಿಕಾಂ ಸಂಸ್ಥೆಯು ಹೊಸ ರೀತಿಯಾದಂತಹ ತಿದ್ದುಪಡಿ ಒಂದನ್ನು ತೆಗೆದುಕೊಂಡು ಬಂದಿದ್ದು ಇದರ ಪ್ರಕಾರ ನಾವು ಈಗಾಗಲೇ ಸ್ವಾಪ್ ಮಾಡಿಕೊಂಡ ಸಿಮ್ ಕಾರ್ಡ್ (SIM Card) ಅನ್ನು ತಕ್ಷಣವೇ ಪೋರ್ಟ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾರಣ ಇತ್ತೀಚಿಗೆ ನಡೆದಂತಹ ಹಲವು ಘಟನೆಗಳ ನಿಮಿತವಾಗಿ ಈ ರೀತಿಯಾದಂತಹ ತೀರ್ಮಾನವೊಂದನ್ನು TRAI (Telecom Regulatory Authority of India) ತೆಗೆದು ಕೊಂಡಿದೆ. SIM Swapping ಮತ್ತು ಪೋರ್ಟ್ ಮಾಡುವುದರ ಮೂಲಕ ಹಲವಾರು ರೀತಿಯ ತೊಂದರೆಗಳು ಮತ್ತು ವಂಚನೆಯ ನಡವಳಿಕೆಗಳು ಹೆಚ್ಚಾಗಿದ್ದು ಇದನ್ನು ತಪ್ಪಿಸುವುದರ ಸಲುವಾಗಿ ಇದೀಗ ಹೊಸ ತಿದ್ದುಪಡಿ  ಜಾರಿಯಾಗಿದೆ.

ಹೊಸ ತಿದ್ದುಪಡಿಯಾದರು ಏನು:

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNC) ನಿಯಮಗಳನ್ನು ತಿದ್ದುಪಡಿ ಮಾಡಿದೆ. ಇನ್ನು ಇದಕ್ಕೆ ಸಂಬಂಧಪಟ್ಟಂತ ನಿಯಮಾವಳಿಗಳನ್ನು 2009 ರಲ್ಲಿ ಅನುಷ್ಠಾನಗೊಳಿಸಲಾಯಿತು, ಮತ್ತು ಅದರಂತೆ 9 ಹೊಸ ತಿದ್ದುಪಡಿಗಳನ್ನು ಕೂಡ ತೆಗೆದುಕೊಂಡು ಬರಲಾಯಿತು. ಇನ್ನು ಈ ನಿಯಮಕ್ಕೇ ಸಂಬಂಧಿಸಿದ ತಿದ್ದುಪಡಿಯ ಪ್ರಕಾರ, ಟೆಲಿಕಾಂ ಚಂದಾದಾರರು ಇತ್ತೀಚೆಗೆ ತಮ್ಮ ಸಿಮ್ ಕಾರ್ಡ್‌ (SIM Card) ಗಳನ್ನು ವಿನಿಮಯ ಮಾಡಿಕೊಂಡಿದ್ದರೆ ಅವರ ಪ್ರಸ್ತುತ ನೆಟ್‌ವರ್ಕ್ ಆಪರೇಟರ್‌ನಿಂದ ಪೋರ್ಟ್ (Port) ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಕನಿಷ್ಟ 7 ದಿನಗಳವರೆಗೆ ನೆಟ್‌ವರ್ಕ್‌ನಿಂದ ಪೋರ್ಟ್ ಮಾಡಲು ಸಾಧ್ಯವಿಲ್ಲ ಎಂದು TRAI ಹೇಳಿದೆ.

Image Source: Mint

advertisement

 ಸಂಬಂಧಿತ ಚಂದಾದಾರರ ಸಿಮ್  ವಿನಿಮಯ ಮಾಡಿಕೊಂಡರೆ ಟೆಲಿಕಾಂ ಸೇವಾ ಪೂರೈಕೆದಾರರು (TSPs) ಯುಪಿಸಿ (Unique Porting Code) ಅನ್ನು ರಚಿಸಲು ಸಾಧ್ಯವಿಲ್ಲ. ಇದರಿಂದ ಹಲವು ರೀತಿಯಾದಂತಹ ತೊಂದರೆಗಳು ಉಂಟಾಗಬಹುದು ಆದಕಾರಣ ತಮ್ಮ ನೆಟ್ವರ್ಕ್ ಅನ್ನು ಪೋರ್ಟ್ ಮಾಡಿಕೊಳ್ಳಲು ಅದಕ್ಕೆ ಸಂಬಂಧಿಸಿದಂತೆ ಬಂದಿರುವ ಹೊಸ ನಿಯಮಗಳ ಆಧಾರ ಇನ್ನು ಮುಂದೆ ಸಿಮ್ ಕಾರ್ಡ್ (SIM Card) ಸ್ವಾಪಿಂಗ್ ಮಾಡುವುದು ಕಷ್ಟಕರ ಆಗಲಿದೆ.

 

Image Source: Airtel

 

ಇದರ ಜೊತೆಗೆ UPC ಯನ್ನು ಅಥವಾ ಮೊಬೈಲ್ ನಂಬರನ್ನು ಸ್ವಾಪ್ ಮಾಡಿಕೊಳ್ಳಲು ಹಾಕಲಾಗುವ ಮನವಿಯನ್ನು ಏಳು ದಿನಗಳ ಮುಂಚಿತವಾಗಿಯೇ ನೀಡಿದ್ದಲ್ಲಿ ಅದನ್ನು ರದ್ದುಗೊಳಿಸುವಂತಹ ಅಧಿಕಾರವನ್ನು ಕೂಡ ಇದೀಗ ಅನುಷ್ಠಾನಗೊಳಿಸಲಾಗಿದೆ. ಆದ್ದರಿಂದ ಯಾವುದೇ ರೀತಿಯಾದಂತಹ ಮೊಬೈಲ್ ನಂಬರನ್ನು ಕನಿಷ್ಠ ಏಳು ದಿನಗಳ ಒಳಗಾಗಿ ಸಿಮ್ ಕಾರ್ಡ್ ನ ನೆಟ್ವರ್ಕ್ ಅನ್ನು ಸ್ವಾಪ್ ಮಾಡಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ.

ಇನ್ನು ಟೆಲಿಕಾಂ ಸಂಸ್ಥೆಯು ಈ ರೀತಿಯಾಗಿ ಹೇಳಿಕೆ ನೀಡಿದ್ದು, ತಮ್ಮ ಚಂದದಾರರು ಮತ್ತು ಸೇವೆಯನ್ನು ಪಡೆಯುತ್ತಿರುವ ಯಾವುದೇ ವ್ಯಕ್ತಿಗೂ ಕೂಡ ತೊಂದರೆ ಆಗಬಾರದು ಹಾಗೂ ಯಾವುದೇ ರೀತಿಯ ವಂಚನೆ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ತಿದ್ದುಪಡಿಯನ್ನು ಅನುಷ್ಠಾನಗೊಳಿಸಲಾಗಿದೆ.

advertisement

Leave A Reply

Your email address will not be published.