Karnataka Times
Trending Stories, Viral News, Gossips & Everything in Kannada

Sim Card: ನಿಮ್ಮ ಆಧಾರ್ ಗೆ ಎಷ್ಟು ಸಿಮ್ ಕಾರ್ಡ್ ಲಿಂಕ್ ಆಗಿದೆ? ನೀವು ಬಳಸದ ಸಿಮ್ ಯಾವುದಾದರೂ ಇದೆಯೇ? ಇಲ್ಲಿ ಪರೀಕ್ಷಿಸಿ.

advertisement

ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಆರಂಭವಾದಾಗಿನಿಂದ ಸರ್ಕಾರಿ ಅಥವಾ ಸರ್ಕಾರೇತರ ಸೇವೆಗಳಿಗೆ ಬಹಳ ಮುಖ್ಯ ದಾಖಲೆಯಾಗಿ ಪರಿಣಮಿಸಿದೆ. ಆಧಾರ್ (Aadhaar) ಮತ್ತು ಪಾನ್ (PAN) ಸಾಮಾನ್ಯವಾಗಿ ಎಲ್ಲಾ ಕಡೆ ಕೇಳಲಾಗುವ ಎರಡು ದಾಖಲೆಗಳಾಗಿವೆ. ಈ ಎರಡು ದಾಖಲೆಗಳಿದ್ದರೆ ಸಾಮಾನ್ಯವಾಗಿ ಎಲ್ಲಾ ಕಡೆ ಕೆಲಸಗಳು ಸಾಂಗವಾಗಿ ನಡೆಯುತ್ತವೆ.

ಆಧಾರ್ ಕಾರ್ಡ್ (Aadhaar Card) ನಮಗೆ ಹೊಸ ಸಿಮ್ (New SIM Card) ತೆಗೆದುಕೊಳ್ಳುವಾಗಲೂ ಬಹಳ ಮುಖ್ಯ ದಾಖಲೆಯಾಗಿದೆ. ಈಗ ಹೊಸ ಸಿಮ್ ಪಡೆಯಬೇಕಾದರೆ ಆಧಾರ್ ವೆರಿಫಿಕೇಷನ್ ಆಗದೇ ಸಿಗುವುದಿಲ್ಲ ಇದರಿಂದ ಬೇರೆ ಯಾರದೋ ಹೆಸರಲ್ಲಿ ಸಿಮ್ ತೆಗೆದುಕೊಳ್ಳುವ ಅಪಾಯ ತಪ್ಪುತ್ತಿದೆ.

ಆದರೆ ಈಗಾಗಲೇ ನಿಮ್ಮ ಆಧಾರ್ ನ ದಾಖಲೆಯೊಂದಿಗೆ ನೀವು ತೆಗೆದುಕೊಂಡ ಸಿಮ್ ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ ಅಥವಾ ನೀವೇ ಸಿಮ್ ತೆಗೆದುಕೊಂಡು ನಿರ್ಲಕ್ಷದಿಂದ ಕಳೆದು ಹೋದಾಗ ಅದೇ ಸಿಮ್ಮನ್ನು ಯಾರಾದರೂ ಬಳಸಿಕೊಂಡು ಈಗಲೂ ಆ ಸಿಮ್ ಆಕ್ಟಿವ್ ಇದೆಯೇ ಎಂದು ತಿಳಿದುಕೊಳ್ಳಬೇಕಾಗುತ್ತದೆ.

ನಮ್ಮ ಆಧಾರ್ ನ ದಾಖಲೆಯೊಂದಿಗೆ ರಿಜಿಸ್ಟರ್ ಆಗಿರುವ ಸಿಮ್ ಕಾರ್ಡ್ (SIM Card) ನ ಮೂಲಕ ಯಾವುದೇ ತರಹದ ಕ್ರೈಮ್ ನಡೆದಾಗ ಅಥವಾ ಕಾನೂನುಬಾಹಿರ ಚಟುವಟಿಕೆಗಳು ನಡೆದಾಗ ಸಿಮ್ ಕಾರ್ಡ್ (SIM Card) ಯಾರ ಹೆಸರಲ್ಲಿದೆ ಎನ್ನುವುದು ಬಹಳ ಮುಖ್ಯ ಆಗುತ್ತದೆ. ಒಂದು ವೇಳೆ ನಮ್ಮ ಆಧಾರ್ ನ ದಾಖಲೆಯೊಂದಿಗೆ ರಿಜಿಸ್ಟರ್ ಆಗಿರುವ ಸಿಮ್ ನ ಮೂಲಕ ಕಾನೂನುಬಾಹಿರ ಚಟುವಟಿಕೆಗಳು ನಡೆದಿದ್ದೆ ಆದಲ್ಲಿ ಅದರ ಜವಾಬ್ದಾರಿ ನಾವು ಹೊರಬೇಕಾಗುತ್ತದೆ.

ಇದಕ್ಕೆ ಈಗ ಸರ್ಕಾರ ಒಂದು ಹೊಸ ಪೋರ್ಟಲ್ (Portal) ಅನು ಆರಂಭಿಸಿ ನಮ್ಮ ಹೆಸರಿನಲ್ಲಿ ಅಂದರೆ ನಮ್ಮ ಆಧಾರ್ ನ ದಾಖಲೆಯೊಂದಿಗೆ ರಿಜಿಸ್ಟರ್ ಆಗಿರುವ ಸಿಮ್ ಕಾರ್ಡ್ (SIM Card) ಗಳು ಎಷ್ಟು ಎನ್ನುವುದನ್ನು ನಾವೇ ಗುರುತಿಸಿಕೊಳ್ಳಬಹುದು. ಒಂದು ವೇಳೆ ನಮ್ಮ ಆಧಾರ್ ಗೆ ಲಿಂಕ್ (Aadhaar Link) ಆಗಿರುವ ಸಿಮ್ ಕಾರ್ಡ್ ನಮ್ಮ ಬಳಿ ಇಲ್ಲದೆ ಇದ್ದಲ್ಲಿ ಅಥವಾ ನಮ್ಮ ಕುಟುಂಬದಲ್ಲಿ ನಮಗೆ ತಿಳಿದಂತೆ ಯಾರೂ ಬಳಸದೇ ಇದ್ದಲ್ಲಿ ಅಂತಹ ಸಿಮ್ ಗಳನ್ನು ರದ್ದುಗೊಳಿಸಬಹುದು.

ಸಂಚಾರ ಸಾಥಿ ಪೋರ್ಟಲ್:

advertisement

ಸಂಚಾರ ಸಾಥಿ ಎನ್ನುವ ಪೋರ್ಟಲ್ ಅನ್ನು ಸರ್ಕಾರ ಈಗ ಆರಂಭಿಸಿದೆ ಈ ಪೋರ್ಟಲ್ ನಲ್ಲಿ ಹೋಗಿ ಲಾಗಿನ್ ಆದಾಗ ನಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಗಳು ಎಷ್ಟು ಎಂದು ತಿಳಿಯುತ್ತದೆ. ಹಾಗಾದರೆ ಲಾಗಿನ್ ಆಗುವುದು ಹೇಗೆ ಈಗ ನೋಡೋಣ.

 

 

  • ಸಂಚಾರ ಸಾಥಿ ಪೋರ್ಟಲ್ ಗೆ ಹೋಗಿ tafcop.sancharsaathi.gov.in ಓಪನ್ ಮಾಡಿ.
  • ಇದಾದ ಮೇಲೆ ಇಲ್ಲಿ ನಿಮ್ಮ ಮೊಬೈಲ್ ನಂಬರ್ ನ ಮಾಹಿತಿಯನ್ನು ನೀಡಬೇಕಾಗುತ್ತದೆ.
  • ಕ್ಯಾಪ್ಚ ಕೋಡ್ ಹಾಕಿದ ಮೇಲೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿದಾಗ ಲಾಗಿನ್ ಆಗುತ್ತದೆ.

ಇಲ್ಲಿ ಮೊಬೈಲ್ ನಂಬರ್ ರಿಜಿಸ್ಟರ್ಡ್ ಇನ್ ಯುವರ್ ನೇಮ್ ಅಂದರೆ ನಿಮ್ಮ ಹೆಸರಿನಲ್ಲಿ ನಮೂದಾಗಿರುವ ಮೊಬೈಲ್ ನಂಬರ್ ಗಳು ಎಂಬ ಮಾಹಿತಿಯ ಕೆಳಗೆ ನಿಮ್ಮ ಹೆಸರಿನಲ್ಲಿ ಒಂದೋ ಎರಡೋ ಮೂರೋ ಎಷ್ಟು ಸಿಮ್ ಕಾರ್ಡ್ ಗಳಿವೆ ಅದರ ಮಾಹಿತಿ ಬರುತ್ತದೆ.

ನಿಮ್ಮ ಬಳಿ ಇರದ ಸಿಮ್ ಗಳನ್ನು ರಿಪೋರ್ಟ್ ಮಾಡಿ:

ಒಂದು ವೇಳೆ ಈ ಪಟ್ಟಿಯಲ್ಲಿರುವ ಯಾವುದಾದರೂ ನಂಬರ್ ನಾವು ಅಥವಾ ನಮಗೆ ಗೊತ್ತಿರುವ ಹಾಗೆ ನಮ್ಮ ಕುಟುಂಬದವರು ಯಾರು ಬಳಸುತ್ತಿಲ್ಲ ಎಂದಾದಲ್ಲಿ ಅಂತಹ ನಂಬರನ್ನು ಸೆಲೆಕ್ಟ್ ಮಾಡಿ ನಾಟ್ ಮೈ ನಂಬರ್ ಅಥವಾ ನಾಟ್ ರಿಕ್ವಾಯರ್ಡ್ ಎಂದು ರಿಪೋರ್ಟ್ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.