Karnataka Times
Trending Stories, Viral News, Gossips & Everything in Kannada

Gruha Lakshmi: 7ನೇ ಕಂತಿನ ಗೃಹಲಕ್ಷ್ಮಿ ಹಣದ ಜೊತೆ 8ನೇ ಕಂತಿನ ಹಣದ ಬಗ್ಗೆಯೂ ಬೆಳ್ಳಂಬೆಳಗ್ಗೆ ಗುಡ್ ನ್ಯೂಸ್

advertisement

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದಾಗಿನಿಂದ ಹಲವಾರು ಯೋಜನೆಗಳ ಮೂಲಕ ಹಲವು ರೀತಿಯಾದಂತಹ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಇನ್ನು ಅದರಲ್ಲಿ ಒಂದಾದಂತಹ ಗೃಹಲಕ್ಷ್ಮಿ(Gruha Lakshmi) ಯೋಜನೆಯ ಮೂಲಕ ಈಗಾಗಲೇ ಸರ್ಕಾರವು ಮನೆಯ ಒಡತಿ ಅಂದರೆ ಗೃಹಿಣಿಯರಿಗೆ ಪ್ರತಿ ತಿಂಗಳು 2000 ಹಣವನ್ನು ನೀಡುವ ಮೂಲಕ ಅವರಿಗೆ ಆರ್ಥಿಕ ಸಬಲತೆಯನ್ನು ಒದಗಿಸಲು ಮುಂದಾಗಿದೆ. ಇನ್ನು ಈಗಾಗಲೇ ಹಲವರು ಆರನೇ ಮತ್ತು 7ನೇ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ.

ಇನ್ನು ಕೆಲವರು 7ನೇ ಕಂತಿನ ಹಣ ಮತ್ತು 6ನೇ ಕಂತಿನ ಹಣ ಪಡೆಯದೆ ಇರುವವರಿಗೆ ಸರ್ಕಾರದಿಂದ ಕೆಲವು ದಾಖಲಾತಿಗಳನ್ನು ಅಪ್ಡೇಟ್ ಮಾಡುವಂತೆ ತಿಳಿಸಲಾಗಿತ್ತು. ಇನ್ನು ಅಪ್ಡೇಟ್ ಆದವರಿಗೆ ಹಣದ ಜಮೆ ಆಗಿದ್ದು ಇನ್ನು ಯಾರ ಖಾತೆಗೆ ಹಣ ಜಮೆ ಆಗಿಲ್ಲವೋ ಅವರಿಗೆ ಸರ್ಕಾರವು ಆರನೇ ಮತ್ತು ಏಳನೇ ಕಂತಿನ ಹಣವನ್ನು ಒಟ್ಟಾಗಿ ಜಮೆ ಮಾಡುವುದಕ್ಕೆ ಯೋಚನೆ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಗೃಹಿಣೀಯರಿಗೆ ಗೃಹಲಕ್ಷ್ಮಿ ಯೋಜನೆಯ ಸಿಹಿ ಸುದ್ದಿಯು ಸಿಗಲಿದ್ದು.

Image Source: Fisdom

advertisement

ಮಾರ್ಚ್ ತಿಂಗಳ ಅಂತ್ಯದ ಒಳಗಾಗಿ ಗೃಹಲಕ್ಷ್ಮಿ(Gruha Lakshmi) ಯೋಜನೆಯ ಹಣವು ಖಾತೆಗೆ ಜಮೆ ಆಗಲಿದೆ.

ಈಗಾಗಲೇ ಕೆಲವೊಬ್ಬರಿಗೆ ಐದನೇ ಆರನೇ ಮತ್ತು 7ನೇ ಕಂತಿನ ಹಣವು ಒಟ್ಟಾಗಿ 6,000ಗಳ ಪೂರ್ತಿ ಮೊತ್ತವು ಖಾತೆಗೆ ಜಮೆ ಆಗಿದೆ. ಇನ್ನು ಕೆಲವೊಬ್ಬರಿಗೆ ಐದನೇ ಆರನೇ ಮತ್ತು 7ನೇ ಕಂತಿನ ಹಣವು ಕೂಡ ಜಮೆ ಆಗಿಲ್ಲ. ಅಂತವರು ಒಮ್ಮೆ ಅವರ ದಾಖಲೆಗಳನ್ನು ಪರಿಶೀಲಿಸುವಂತೆ ಸರ್ಕಾರವು ಸೂಚನೆ ನೀಡಿದೆ. ಇದರ ಜೊತೆಗೆ ದಾಖಲೆಗಳು ಸರಿಯಾಗಿದ್ದಲ್ಲಿ ಈ ತಿಂಗಳ ಅಂತ್ಯದ ಒಳಗಾಗಿ ಹಣವು ಜಮೆ ಆಗಲಿದೆ ಎಂದು ಕೂಡ ಸರ್ಕಾರ ತಿಳಿಸಿದೆ.

ಮಾರ್ಚ್ 23-2024ರಂದು ಸರ್ಕಾರವು ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣವನ್ನು ಪೂರ್ತಿಯಾಗಿ ಬಿಡುಗಡೆ ಮಾಡಿದ್ದು ಅದು 7ನೇ ಕಂತಿನ ಹಣವಾಗಿದೆ. ಹಾಗಾಗಿ ಇನ್ನು ಯಾರಿಗೆ ಗೃಹಲಕ್ಷ್ಮಿ ಯೋಜನೆಯ ಹಣದ ಬಾಕಿ ಇದೆಯೋ ಅವರಿಗೆಲ್ಲ ಒಟ್ಟಾಗಿ ಹಣವು ಸಿಗುತ್ತದೆ ಎಂದು ಕೂಡ ಸೂಚನೆ ಸಿಕ್ಕಿದೆ. ಇನ್ನು ಎಂಟನೇ ಕಂತಿನ ಹಣವನ್ನು ಮುಂದಿನ ತಿಂಗಳ 20ರ ಒಳಗಾಗಿ ಎಲ್ಲರ ಖಾತೆಗೆ ಜಮೆ ಮಾಡಲು ಸರ್ಕಾರವು ಎಲ್ಲ ಸಿದ್ಧತೆಗಳನ್ನು ನಡೆಸಿದೆ. ಅಷ್ಟರ ಒಳಗಾಗಿ ಎಲ್ಲ ದಾಖಲಾತಿಗಳನ್ನು ಅಪ್ಡೇಟ್ ಮಾಡಿ ಖಾತೆಯನ್ನು ಸರಿಪಡಿಸಿಕೊಳ್ಳುವಂತೆ ಸರ್ಕಾರವು ಸೂಚನೆ ತಿಳಿಸಿದೆ.

advertisement

Leave A Reply

Your email address will not be published.