Karnataka Times
Trending Stories, Viral News, Gossips & Everything in Kannada

Agricultural Land: ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಬಹುದೇ? ಮತ್ತೆ ಬದಲಾಯ್ತು ನಿಯಮ

advertisement

ಇತ್ತೀಚಿನ ದಿನದಲ್ಲಿ ಕೃಷಿ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ‌. ಕೃಷಿ ನಮ್ಮ ದೇಶದ ಬೆನ್ನೆಲುಬಾಗಿದ್ದು ಇದನ್ನೇ ನಂಬಿಕೊಂಡ ಅನೇಕ ವರ್ಗದ ರೈತರನ್ನು ನಾವು ಕಾಣಬಹುದು. ಆದರೆ ಕೃಷಿಕರ ಸಂಖ್ಯೆ ಪ್ರಸ್ತುತ ಅವಧಿಯಲ್ಲಿ ಬಹಳ ಇಳಿಮುಖವಾಗಿದೆ.ಸರಕಾರ ರೈತರ ಕೃಷಿ ಚಟುವಟಿಕೆಗೆ ಸಾಲ ಸೌಲಭ್ಯ ನೀಡುತ್ತಿದ್ದು ಇದನ್ನು ಸರಿಯಾಗಿ ಬಳಕೆ ಮಾಡಿ ಬೆಳೆ, ಫಸಲು ತೆಗೆಯುವುದು ಒಂದು ವರ್ಗವಾದರೆ ಬೆಳೆ ನಾಶ ಮಾಡಿ ಕಂಗೆಟ್ಟುಹೋಗುವುವಂತೆ ಮಾಡುವುದು ಇನ್ನೊಂದು ವರ್ಗವಾಗಿದೆ. ಈ ನಡುವೆ ಕೃಷಿ ಭೂಮಿ (Agricultural Land) ಯಲ್ಲೇ ಮನೆ, ಕಟ್ಟಡ ನಿರ್ಮಾಣ ಮಾಡುವವರು ಕೂಡ ಇದ್ದಾರೆ.

ತೊಂದರೆ ಉಂಟಾಗಲಿದೆ:

 

Image Source: Business Kashmir

 

ನೀವು ನಿಮ್ಮ ಅಗತ್ಯಕ್ಕೆ ಎಂದು ಕೃಷಿ ಭೂಮಿ (Agricultural Land) ಯಲ್ಲಿ ಕಟ್ಟಡ ಅಥವಾ ಮನೆ ನಿರ್ಮಾಣ ಮಾಡಿದರೆ ಅದರಿಂದಾಗಿ ನಿಜವಾಗಿ ತೊಂದರೆ ಉಂಟಾಗುವುದು ರೈತ ವರ್ಗಕ್ಕೆ ಎಂದು ಹೇಳಬಹುದು. ಹಾಗಾಗಿ ಕೃಷಿ ಭೂಮಿಯಲ್ಲಿ ಮನೆ (House) ಅಥವಾ ಇತರ ಕಟ್ಟಡ ನಿರ್ಮಾಣ (Building Construction) ಮಾಡುವವರಿಗೆಂದೆ ಸರಕಾರ ಹೊಸದಾದ ಕ್ರಮ ಒಂದನ್ನು ಜಾರಿಗೆ ತಂದಿದ್ದು ಈ ಕಾನೂನು ನಿಯಮ ನೀವು ಉಲ್ಲಂಘನೆ ಮಾಡಿದರೆ ತೊಂದರೆ ಉಂಟಾಗಲಿದೆ. ಹಾಗಾಗಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಲು ಕೂಡ ಅನೇಕ ಪ್ರಕ್ರಿಯೆ ಇದ್ದು ಇದನ್ನು ನೀವು ಕೂಡ ಅಗತ್ಯವಾಗಿ ಪಾಲಿಸಲೇ ಬೇಕಾಗಿದೆ.

ಪರವಾನಿಗೆ ಅಗತ್ಯ:

 

advertisement

Image Source: Real Estate India

 

ನೀವು ಸರಕಾರದ ನಿಯಮಾನುಸಾರ ನಡೆಯದೆ ಹೋದರೆ ಅಂತಹ ಮನೆ ಅಥವಾ ಕಟ್ಟಡವನ್ನು ಕೆಡವಿ ಬಿಡುವ ಸಾಧ್ಯತೆ ಸಹ ಇದೆ. ಕೃಷಿ ಭೂಮಿ (Agricultural Land) ಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಅದಕ್ಕೆ ಪರವಾನಿಗೆ ಪಡೆಯುವುದು ಅತ್ಯವಶ್ಯಕವಾಗಿದೆ. ಭೂಮಿ ಫಲವತ್ತಾಗಿದ್ದು ಪ್ರತಿ ವರ್ಷವೂ ಉತ್ತಮ ಫಸಲನ್ನು ನೀಡುತ್ತಿದ್ದರೆ ಅದು ಕೃಷಿಗೆ ಯೋಗ್ಯವಾದ ಭೂಮಿ ಎಂದು ಕರೆಸಿಕೊಳ್ಳಲಿದೆ ಹಾಗಾಗಿ ಅಂತಹ ಭೂಮಿಯಲ್ಲಿ ಕೃಷಿ ಮಾಡುವಂತಿಲ್ಲ. ಜಮೀನು ಮಾಲೀಕನ ಸ್ವಂತದ್ದೇ ಆಗಿದ್ದರೂ ಕೂಡ ಸರಕಾರದಿಂದ ಫಸಲು ಯುಕ್ತ ಭೂಮಿಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರಲಾರದು.

ಅಗತ್ಯವಿದ್ದಾಗ ಹೀಗೆ ಮಾಡಬಹುದು:

ಎಷ್ಟೋ ಬಾರಿ ಮನೆ ನಿರ್ಮಾಣ ಮಾಡಲು ಬೇರೆ ಸ್ಥಳವೇ ಇರಲಾರದು ಅಂತಹ ಅನಿವಾರ್ಯ ಸಂದರ್ಭದಲ್ಲಿ ಮನೆ ನಿರ್ಮಾಣ ಮಾಡಲು ನಿಮಗೆ ಒಂದು ಸರಳ ಉಪಾಯ ಇರಲಿದೆ. ಅನೇಕ ರಾಜ್ಯದಲ್ಲಿ ಲ್ಯಾಂಡ್ ಕನ್ವರ್ಷನ್ ನಿಯಮ ಜಾರಿಯಲ್ಲಿ ಇರಲಿದೆ ಅದರ ಪ್ರಕಾರ ನೀವು ಶುಲ್ಕ ಪಾವತಿ ಮಾಡಿ ಅನಂತರ ಮುನ್ಸಿಪಾಲಿಟಿ ಅಥವಾ ಗ್ರಾಮ ಪಂಚಾಯತ್ ನಲ್ಲಿ NOC ಸರ್ಟಿಫಿಕೇಟ್ ಪಡೆಯಬಹುದಾಗಿದೆ.

ಈ ದಾಖಲೆ ಅಗತ್ಯ:

ಕೃಷಿ ಭೂಮಿಯನ್ನು ಮನೆ ಕಟ್ಟುವ ಯೋಗ್ಯ ಭೂಮಿಯನ್ನಾಗಿ ಮಾಡಲು ಕನ್ವರ್ಷನ್ ಅನ್ನು ಮಾಡಬೇಕು.ಜಮೀನಿಗೆ ಸಂಬಂಧಿಸಿದ ಸರ್ವೆ ನಕ್ಷೆ ಮತ್ತು ರೆಕಾರ್ಡ್ ಮೂಲಕ ಈ ಜಮೀನು ಅಷ್ಟಾಗಿ ಫಸಲು ನೀಡದು ಸಮಸ್ಯೆ ಇದೆ ಎಂಬಂತೆ ಸಾಬೀತು ಮಾಡಿದರೆ ನೀವು ಅದೇ ಜಾಗದಲ್ಲಿ ಮನೆ ಅಥವಾ ಕಟ್ಟಡ ಕಟ್ಟಬಹುದು. ಈ ಮೂಲಕ ಕೃಷಿ ಭೂಮಿ ವಾಸ್ತವ್ಯ ಯೋಗ್ಯ ಭೂಮಿಯಾಗಿ ಬದಲಾಯಿಸ ಬಹುದು.

advertisement

Leave A Reply

Your email address will not be published.