Karnataka Times
Trending Stories, Viral News, Gossips & Everything in Kannada

Agriculture in India: ಅಡಿಕೆಯಲ್ಲ! ಈ ಬೆಲೆ ಬೆಳೆದು ಭರ್ಜರಿ ಇಳುವರಿ ಕಂಡ ರೈತ ಕೆಜಿಗೆ 750 ರೂ

advertisement

Agriculture in India: ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಬೇಕು ಎಂದು ಅಂದುಕೊಂಡವರು ಅದಕ್ಕೆ ಅಧಿಕ ಪ್ರಾತಿನಿಧ್ಯ ನೀಡುತ್ತಾರೆ ಹಾಗಿದ್ದರೂ ಲಾಭದ ಪ್ರಮಾಣ ಅಷ್ಟೆ ಇರುವುದನ್ನು ಕಾಣಬಹುದು. ಅಡಿಕೆ, ತೆಂಗು ಇತರ ಕೃಷಿ ಮಾಡುವಾಗ ಅಧಿಕ ಪೋಷಣೆ ವಿಶೇಷ ಕೆಲ ಕಾಳಜಿ ಮಾಡಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ನೀವು ಚಕ್ಕೆ ಕೃಷಿ ಒಮ್ಮೆ ಮಾಡಿದರೆ ನಿಮಗೆ ಅರಿವಾಗದಂತೆ ವರ್ಷಗಟ್ಟಲೆ ಅಧಿಕ ಇಳುವರಿಯ ಜೊತೆಗೆ ಅಧಿಕ ಲಾಭ ಕೂಡ ಪಡೆಯಬಹುದು.

ಚಕ್ಕೆ ಸಾಂಬಾರು ಪದಾರ್ಥಗಳ ಮಹಾರಾಜನೆನೆಸಿದ್ದು ಅದಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ.ಇದೇ ಕಾರಣಕ್ಕೆ ಬಹಳ ಹಿಂದಿನಿಂದಲು ಕಾಳು ಮೆಣಸು, ಲವಂಗ, ಚಕ್ಕೆಗಳು ವಿದೇಶಕ್ಕೆ ರಫ್ತಾಗುತ್ತಲೇ ಇದೆ. ಅದರಲ್ಲೂ ಮಾಂಸಹಾರಿ ಪ್ರಿಯರಿಗೆ ಇದರ ಸ್ವಾದ ಇಲ್ಲದೆ ಅಡುಗೆ ರುಚಿ ಹತ್ತೊಲ್ಲ ಎಂದು ಹೇಳಬಹುದು. ಹಾಗಾಗಿಯೇ ಸಹಜ ಎಂಬಂತೆ ಮಾರುಕಟ್ಟೆಯಲ್ಲಿ ಈ ಒಂದು ಚಕ್ಕೆಗೆ ಅಧಿಕ ಬೇಡಿಕೆ ಇದೆ.

ಬಹುಪಯೋಗಿ ಬೆಳೆ
ಮರಾಟ್ ಮೊಗ್ಗು, ಪಲಾವು ಎಲೆ ಮತ್ತು ಚಕ್ಕೆ ಇವು ಮೂರು ಒಂದರಲ್ಲೆ ಸಿಗಲಿದೆ. ಹಾಗಾಗಿ ಬೆಳೆ ಒಂದೇ ಆದರೂ ಅದರಲ್ಲಿ ಪ್ರತ್ಯೇಕ ವಿಧಾನದಿಂದ ಲಾಭ ಪಡೆಯಬಹುದು. ಇದರಲ್ಲಿನ  ಪ್ರತಿ ಅಂಶವು ನಿಮಗೆ ಲಾಭವನ್ನೇ ನೀಡಲಿದ್ದು ಸುಲಭಕ್ಕೆ ಗಿಡನೆಟ್ಟರೆ ಹೆಚ್ಚಿನ ಆರೈಕೆ ಇಲ್ಲದೆ ಬೆಳೆ ಸಿಗಲಿದೆ.  30% ನೆರಳಿನ ಅವಶ್ಯಕತೆ ಇದ್ದು  ಇದರಲ್ಲಿ ಅನೇಕ ತಳಿ ಬೆಳೆಯಬಹುದು.  ಶಲೋನ್ ತಳಿ ಬೆಳೆಗೆ 1kg ಬೆಳೆದರೆ 4,500 ರೂಪಾಯಿ ಇರಲಿದೆ. ಹಾಗಾಗಿ ನೀವು ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು. ಈಗ ಕೆಜಿ ಚಕ್ಕೆಗೆ 750-850 ರೂಪಾಯಿ ತನಕ ಕೂಡ ಬೆಲೆ ಇದ್ದು ಲಾಭ ಕೂಡ ಅಧಿಕವಾಗೆ ಇರಲಿದೆ.

advertisement

Flakes growing India
Image Source: India Today

ಮೂರು ವರ್ಷಕ್ಕೆ ಇಳುವರಿ ಆರಂಭ
ಈ ಒಂದು ಚಕ್ಕೆ ಗಿಡ ನೀವು ನೆಟ್ಟರೆ ಮೂರು ವರ್ಷಕ್ಕೆ ಇಳುವರಿ‌ ನಿಮಗೆ ಸಿಗಲಿದೆ. ಅಡಿಕೆ ಸಸಿಗೆ ಸಿಗುವ ಲಾಭದಷ್ಟೆ ಇಲ್ಲಿ ಲಾಭ ಪಡೆಯಬಹುದು ಆದರೆ ಅಡಿಕೆಗೆ ಸಿಗುವಷ್ಟು ಅಥವಾ ನೀಡುವಷ್ಟು ಪೋಷಕಾಂಶ ಇಲ್ಲಿ ಅಗತ್ಯ ಇರಲಾರದು. ಹಾಗಾಗಿ ಮೂರು ವರ್ಷಕ್ಕೆ ಇಳುವರಿ ಆರಂಭ ವಾದ ನಂತರ ಹೆಚ್ಚಿನ ನೀರಿನ ಪೋಷಣೆ ಕೂಡ ಇಲ್ಲದೆ ಬರೀ ಜೀವಾಮೃತ ಬಳಸಿ ಅತ್ಯಧಿಕ ಇಳುವರಿ ಪಡೆದು ಲಾಭ ಹೆಚ್ಚಿಸಕೊಳ್ಳಬಹುದು.ಗಿಡ ಒಣಗಲಾರದು ಬಿಸಿಲಿದ್ದರೂ ಹಸಿರಾಗೆ ಇರುತ್ತದೆ. ಇದಕ್ಕೆ ರೋಗ ಬಾಧೆ ಇರಲಾರದು. ಇದರ ಜೊತೆಗೆ ನೆಲಗೆಣಸು, ಹುರುಳಿ, ಮೆಣಸು ಇತರ ಸಮಗ್ರ ಕೃಷಿ ಮಾಡಿ ಕೂಡ ಲಾಭ ಪಡೆಯಬಹುದು.

ಕಂಪೆನಿಯಿಂದಲೂ ಬೇಡಿಕೆ
ನೀವು ಚಕ್ಕೆ ಬೆಳೆದರೆ ಅದನ್ನು ಮಾರಲು ಮಾರುಕಟ್ಟೆ ಅಲೆಯಬೇಕಿಲ್ಲ ಅಥವಾ ದಲ್ಲಾಳಿಗಳಿಗೂ ಅಧಿಕ ಖರ್ಚು ನೀಡುವ ಅಗತ್ಯ ಇಲ್ಲ. ಅದರ ಬದಲು ದೊಡ್ಡ ಕಂಪೆನಿಗಳು ಕೂಡ ನಿಮ್ಮ ಬೆಳೆಗೆ ಟೈ ಅಪ್ ಆಗಲಿದ್ದಾರೆ. ಇತ್ತೀಚೆಗಷ್ಟೇ ಶಿವಮೊಗ್ಗದ ರೈತರೊಬ್ಬರ ಒಂದು ಎಕರೆ ಚಕ್ಕೆ ಕೃಷಿಗೆ MTR ಕಂಪೆನಿ ಟೈ ಅಪ್ ಮಾಡಿ ಕೊಂಡು ಅವರಿಂದ ಲಕ್ಷ ಗಟ್ಟಲೆ ಲಾಭ ಆ ರೈತರಿಗೆ ದೊರೆತಿದ್ದನ್ನು ನಾವು ಕಾಣಬಹುದು. ಹೀಗೆ ಈ ಬೆಳೆ ನಿಮಗೆ ಅಧಿಕ ವರ್ಷದ ವರೆಗೂ ಲಾಭ ನೀಡಲಿದೆ.

Flakes growing India
Image Source: India Today

advertisement

Leave A Reply

Your email address will not be published.