Karnataka Times
Trending Stories, Viral News, Gossips & Everything in Kannada

Agri Machinery: ಕೃಷಿ, ಹೈನುಗಾರಿಕೆ ಮಾಡುವ ರೈತರಿಗೆ ಇಲ್ಲಿದೆ ಸಿಹಿ ಸುದ್ದಿ! ಕಟಾವು ಯಂತ್ರ ಬಹುತೇಕ ಉಚಿತ

advertisement

ಕೃಷಿ ನಮ್ಮ ದೇಶದಲ್ಲಿ ಬಹು ಅಮೂಲ್ಯ ಸ್ಥಾನವನ್ನು ಪಡೆದಿದೆ. ಕೃಷಿಗೆ ಸಂಬಂಧ ಪಟ್ಟಂತೆ ಅನೇಕ ಕೆಲಸ ಕಾರ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಥೇಚ್ಛವಾಗಿ ಉತ್ತೇಜನೆಯನ್ನು ನೀಡುತ್ತಿದ್ದು
ಅದಪತನ ವಾದ ಕೃಷಿ ಚಟುವಟಿಕೆಗೆ ಈಗ ಮತ್ತೆ ಭರವಸೆ ಆಶಾ ಕಿರಣ ಮೂಡುತ್ತಿದೆ‌. ಕೃಷಿ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ಯೋಜನೆ, ಸಹಾಯಧನ, ಕೊಡುಗೆ ವಿತರಣೆ ಮಾಡುತ್ತಿದ್ದು ಅಂತಹ ಕೊಡುಗೆಯಲ್ಲಿ ಹೊಸತೊಂದು ಸೇರ್ಪಡೆ ಆದ ಬಗ್ಗೆ ಇಲ್ಲಿದೆ ಮಾಹಿತಿ

ಕೃಷಿಗೆ ಉತ್ತೇಜನೆ

ಹಳ್ಳಿಗಳೆಲ್ಲ ಮಾಯವಾಗಿ ಪಟ್ಟಣವಾಗಿ ಬೆಳೆಯುತ್ತಿದೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದ ಕುಟುಂಬ ಪಟ್ಟಣದ ಶೈಲಿಯ ಬದುಕಿಗೆ ಒಗ್ಗಿಕೊಂಡಿದ್ದು ಕೃಷಿ ಚಟುವಟಿಕೆ ಮೂಲೆ ಗುಂಪಾಗುತ್ತಿದೆ ಹಾಗಾಗಿ ಸೂಕ್ತ ಪ್ರೋತ್ಸಾಹ ತುಂಬಾ ಅಗತ್ಯವಾಗಿದೆ. ಈಗಾಗಲೇ ಕೃಷಿ ಬಗ್ಗೆ ಜನರಿಗೆ ಅರಿವು ಮೂಡಿಸುವ ಪರಿಕಲ್ಪನೆ ಮಾಡಲಾಗಿದ್ದು ಕೃಷಿ ಮಾಡುವವರಿಗೆ ಸಾಲ ಸೌಲಭ್ಯ, ಯಂತ್ರೋಪಕರಣ (Agri Machinery) ವಿತರಣೆ ಇತರ ಸೌಲಭ್ಯ ಸಹ ನೀಡಲಾಗುತ್ತಿದೆ ಅಂತಹ ವಿಚಾರದ ಸಲುವಾಗಿ ಜನರಿಗೆ ಕೂಡ ಸರಕಾರದ ಯೋಜನೆ ಬಹಳ ಉಪಯೋಗವಾಗುತ್ತಿದೆ.

Image Source: Discover Agriculture

ಕೃಷಿ ಯಂತ್ರೋಪಕರಣ (Agri Machinery) ಖರೀದಿ ಮಾಡಲು ಸಹಾಯಧನ:

advertisement

ಕೃಷಿ ಚಟುವಟಿಕೆಯ ಕ್ಲಿಷ್ಟ ಪರಿಸ್ಥಿತಿಯನ್ನು ಸರಿಪಡಿಸಿ ಸರಿಯಾದ ವ್ಯವಸ್ಥೆ ಜಾರಿಗೊಳಿಸಬೇಕಾದರೆ ರೈತರ ಶ್ರಮ ಕಡಿಮೆ ಆಗಿ ಸ್ಮಾರ್ಟ್ ಕೆಲಸಗಳು ನಡೆಯಬೇಕಿದೆ‌. ಈ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು (Agri Machinery) ಖರೀದಿ ಮಾಡಲು ಉತ್ತೇಜಿಸುವ ಸಲುವಾಗಿ ನೂತನ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ರೈತರ ಕೆಲಸ ಕಾರ್ಯಕ್ಕೆ ಕೂಲಿ ಆಳುಗಳು ಅಧಿಕ ಸಂಖ್ಯೆಯಲ್ಲಿ ಬೇಕಾಗಿದ್ದು ಸರಕಾರವು ರೈತರಿಗೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಹಾಯಧನ ನೀಡಲು ಮುಂದಾಗಿದೆ. ಈ ಮೂಲಕ ಕೃಷಿ ಪರಿಕರದ ಯಂತ್ರ ಖರೀದಿ ಮಾಡುವವರಿಗೆ ಸಬ್ಸಿಡಿ ಸಹಾಯಧನ ಸಿಗಲಿದೆ.

ಕಟಾವು ಯಂತ್ರಕ್ಕೆ ಅಸ್ತು

ಅನೇಕ ಕೃಷಿಕರು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ ಕೂಡ ನಡೆಸುತ್ತಿದ್ದಾರೆ ಅಂತಹ ರೈತರಿಗೆ ತಮ್ಮ ಜಾನುವಾರುಗಳನ್ನು ಪೋಷಣೆ ಮಾಡಲು ಮೇವಿನ ಅಗತ್ಯವಿದ್ದು ಈ ಮೇವನ್ನು ಕಟಾವು ಮಾಡಲು ಕೂಡ ಯಂತ್ರ ಬಂದಿದ್ದು ಅದರ ಖರೀದಿಗೆ ಕೂಡ ಸರಕಾರ ನೆರವಾಗಲಿದೆ. ಇಂತಹ ಮೇವು ಕಟಾವಿನ ಯಂತ್ರವು (Chaff Cutter Machine) ಎಲ್ಲರಿಗೂ ಸಿಗಲಾರದು ಅದಕ್ಕೆಕೂಡ ಕೆಲವು ಅರ್ಹತೆಗಳು ಕೂಡ ಅಗತ್ಯವಾಗಿವೆ.

Image Source: Linkedin

ಸಹಾಯಧನ ವಿತರಣೆ

ಕೃಷಿಯ ಜೊತೆಗೆ ಹೈನುಗಾರಿಕೆ (Dairy Farming) ಮಾಡುವವರಿಗಾಗಿ ಅವರ ಕೆಲಸದ ಪರಿಶ್ರಮ ಕಡಿಮೆ ಮಾಡುವ ಸಲುವಾಗಿ ಈ ಕಟಾವಿನ ಯಂತ್ರಗಳಿಗೆ ಉತ್ತೇಜನೆ ನೀಡಲಾಗುತ್ತಿದೆ. ಯಂತ್ರ ಖರೀದಿ ಮಾಡಲು ಸಾಲ ಪಡೆದರೆ ಅದರಲ್ಲಿ ಸರಕಾರದ ಸಬ್ಸಿಡಿ ನಿಮಗೆ ಸಿಗಲಿದೆ. ಈ ಕಟಾವು ಯಂತ್ರದ ಖರೀದಿಯ ಮೇಲೆ 50% ನಷ್ಟನ್ನು ಸರಕಾರ ಸಹಾಯ ನೀಡಲಿದೆ. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯ ಈ ವರ್ಷದ ಅಡಿಯಲ್ಲಿ ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆ ರೈತ ಬಾಂಧವರಿಗೆ ಸಿಗಲಿದೆ.

advertisement

Leave A Reply

Your email address will not be published.