Karnataka Times
Trending Stories, Viral News, Gossips & Everything in Kannada

New Bank Rules: ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯುವವರಿಗೆ ಹೊಸ ರೂಲ್ಸ್! ಬ್ಯಾಂಕುಗಳ ಆದೇಶ

advertisement

ನೀವು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (Saving Account) ಯನ್ನು ಹೊಂದಿದ್ದೀರಾ ಅಥವಾ ಇತರ ಯಾವುದೇ ರೀತಿಯಲ್ಲಿ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದೀರಾ ಹಾಗಾದ್ರೆ ನೀವು ಹಿಂಪಡೆಯುವ ಹಣ ತೆರಿಗೆ ನಿಯಮಗಳ ವ್ಯಾಪ್ತಿಗೆ ಬರುತ್ತದೆ ಎನ್ನುವುದು ನಿಮಗೆ ಗೊತ್ತಾ? ಒಂದು ವೇಳೆ ತಿಳಿಯದೆ ಇದ್ದರೆ ತಕ್ಷಣ ಈ ಲೇಖನ ಓದಿ. ನೀವು ಬ್ಯಾಂಕ್ ನಲ್ಲಿ ಇಟ್ಟ ಹಣವನ್ನು ಹಿಂಪಡೆಯುವುದಕ್ಕೂ ಮೊದಲು ಬ್ಯಾಂಕ್ ನ ಈ ನಿಯಮಗಳ (New Bank Rules) ಬಗ್ಗೆ ತಿಳಿದುಕೊಳ್ಳಿ.

ಬ್ಯಾಂಕ್ನಿಂದ ಎಷ್ಟು ನಗದು ಹಿಂಪಡೆಯಬಹುದು?

 

 

ನೀವು ನಿಗದಿತ ಮಿತಿಗಿಂತ ಹೆಚ್ಚು ಹಣವನ್ನು ಹಿಂಪಡೆಯುವುದಾದರೆ, ಶುಲ್ಕ ಪಾವತಿಸಬೇಕಾಗುತ್ತದೆ. ಈ ನಿಯಮ ಎ ಟಿ ಎಂ ವಹಿವಾಟಿಕೆ ಮಾತ್ರ ಅನ್ವಯವಾಗುವಂಥದ್ದು ಅಲ್ಲ ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡುವುದಿದ್ದರೂ ಕೂಡ ಈ ತೆರಿಗೆ ನಿಯಮಗಳು (Tax Rules) ಅನ್ವಯವಾಗುತ್ತವೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 194 N ಅಡಿಯಲ್ಲಿ ಒಬ್ಬ ವ್ಯಕ್ತಿ ಒಂದು ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಆಗ ಟಿಡಿಎಸ್ (TDS)  ಪಾವತಿಸಬೇಕಾಗುತ್ತದೆ.

ಹಾಗಾದ್ರೆ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಸದೆ ಇರುವ ಜನರಿಗೆ ಮಾತ್ರ ಅನ್ವಯವಾಗುತ್ತದೆ. ಇಂಥವರು ಯಾವುದೇ ಬ್ಯಾಂಕ್ ಸಹಕಾರಿ ಸಂಸ್ಥೆ ಅಥವಾ ಅಂಚೆ ಕಚೇರಿಯಿಂದ ವಾರ್ಷಿಕ ಹಣಕಾಸು ಅವಧಿಯಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ವಿಥ್ ಡ್ರಾ ಮಾಡಿದರೆ ಟಿಡಿಎಸ್ ಕಡಿತಗೊಳ್ಳುತ್ತದೆ.

advertisement

ಆದಾಯ ತೆರಿಗೆ ಪಾವತಿಸುವವರಿಗೆ ಇಲ್ಲ ಈ ನಿಯಮ!

ITR ಸಲ್ಲಿಸುವವರು ಈ ನಿಯಮದಿಂದ ತುಸು ಪರಿಹಾರ ಪಡೆದುಕೊಳ್ಳಬಹುದು. ಅಂದರೆ ಒಂದು ಆರ್ಥಿಕ ವರ್ಷದಲ್ಲಿ ಯಾವುದೇ ಬ್ಯಾಂಕ್ ಅಂಚೆ ಕಚೇರಿ (Post Office) ಅಥವಾ ಸಹಕಾರಿ ಬ್ಯಾಂಕ್ ಗಳಿಂದ ಒಂದು ಕೋಟಿ ರೂಪಾಯಿಗಳ ವರೆಗೆ ಹಣ ಹಿಂಪಡೆಯಬಹುದು. ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆದಾಗ ಟಿಡಿಎಸ್ ಪಾವತಿಸಬೇಕು.

ಎಷ್ಟಾಗುತ್ತೆ ಟಿಡಿಎಸ್ ಮೊತ್ತ?

ITR ಪಾವತಿ ಮಾಡುವವರು ಬ್ಯಾಂಕ ಖಾತೆಯಿಂದ ಒಂದು ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಶೇಕಡ 2 ನಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ. ಅದೇ ರೀತಿ ಮೂರು ವರ್ಷಗಳಿಂದ ಐ ಟಿ ಆರ್ ಸಲ್ಲಿಸದೆ ಇರುವವರು ಒಂದು ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದುಕೊಂಡಾಗ 2% ನಷ್ಟು ಟಿಡಿಎಸ್ ಪಾವತಿಸಬೇಕು.

ಎಟಿಎಂ ವಹಿವಾಟಿನ ಮೇಲೆ ಶುಲ್ಕ ವಿಧಿಸುತ್ತೆ ಬ್ಯಾಂಕ್!

ನೀವು ನಿಮ್ಮ ಡೆಬಿಟ್ ಕಾರ್ಡ್ (Debit Card) ಅನ್ನು ಬಳಸಿ ಎಟಿಎಂನಿಂದ ಹಣ ಮಾಡಿದ್ರೆ ಅದಕ್ಕೂ ಶುಲ್ಕ ವಿಧಿಸಲಾಗುತ್ತದೆ. ಜನವರಿ 1, 2022 ರಿಂದ ಎಟಿಎಂ ನಿಂದ ನಗದು ಹಣ ಹಿಂಪಡೆಯುವುದಕ್ಕೆ ಸೇವಾ ಶುಲ್ಕ ನ್ನು ಆರ್‌ಪಿಐ ನಿಗದಿಪಡಿಸಿದೆ. ಬ್ಯಾಂಕುಗಳಲ್ಲಿ ನಿಯಮಿತ ಮಿತಿಯನ್ನು ಮೀರಿದ ಎಟಿಎಂ ವಹಿವಾಟಿಗೆ 21 ರೂಪಾಯಿಗಳ ಶುಲ್ಕ ಪಾವತಿಸಬೇಕು ಇದಕ್ಕೆ ಮೊದಲು 20 ರೂಪಾಯಿಗಳು ಇತ್ತು. ಈಗ ಒಂದು ರೂಪಾಯಿಗಳಷ್ಟು ಮಾತ್ರ ಹೆಚ್ಚಿಸಲಾಗಿದೆ. ಇನ್ನು ಇತರ ಬ್ಯಾಂಕುಗಳ ಎಟಿಎಂನಿಂದ 3 ವಹಿವಾಟಿನವರೆಗೆ ಉಚಿತವಾಗಿ ಹಣ ಹಿಂಪಡೆಯಬಹುದು. ಮೂರು ವಹಿವಾಟಿನ ನಂತರ ಶುಲ್ಕ ವಿಧಿಸಲಾಗುವುದು.

advertisement

Leave A Reply

Your email address will not be published.