Karnataka Times
Trending Stories, Viral News, Gossips & Everything in Kannada

SBI Wecare: ಸ್ಟೇಟ್ ಬ್ಯಾಂಕ್ ನ ಈ ಯೋಜನೆಯಲ್ಲಿ ಹಣ ಹಾಕಿದ್ರೆ ಡಬಲ್ ಗ್ಯಾರಂಟಿ!

advertisement

ಹಣ ಡಬಲ್ ಆಗುತ್ತದೆ ಅಥವಾ ದ್ವಿಗುಣವಾಗುತ್ತದೆ ಎಂಬ ಸ್ಕೀಮ್ ಗಳ ಬಗ್ಗೆ ಯಾವಾಗಲೂ ಆಕರ್ಷಣೆ ಹೆಚ್ಚಾಗಿರುತ್ತದೆ. ಇಂತಹ ಸಾಲುಗಳನ್ನು ನಾವು ಚಿತ್ರಗಳಲ್ಲೂ ನೋಡಿರುತ್ತೇವೆ. ನಿಜವಾದ ಜೀವನದಲ್ಲಿ ಈ ತರಹ ಆದರೆ ಖಂಡಿತ ಎಲ್ಲರಿಗೂ ಖುಷಿಯಾಗುತ್ತದೆ.

ಆದರೆ ಹಣ ಡಬಲ್ ಮಾಡುವುದಕ್ಕೆ ಹೋಗಿ ಇರುವ ಹಣವನ್ನು ಕೂಡ ಕಳೆದುಕೊಳ್ಳಬಾರದು. ಹೀಗಾಗಿ ಭರವಸೆ ಇರುವ ನಂಬಿಕಸ್ಥ ಸಂಸ್ಥೆಗಳ ಜೊತೆಗೆ ಮಾತ್ರ ಹೂಡಿಕೆ ಮಾಡುವುದು ಉತ್ತಮ. ಯಾವುದೇ ಹೂಡಿಕೆಯಲ್ಲಿ ಒಂದೋ ಎರಡೋ ವರ್ಷಗಳಲ್ಲಿ ಹಣ ದ್ವಿಗುಣವಾಗುವುದು ಸಾಧ್ಯವಿಲ್ಲ. ಆದರೆ ಸ್ವಲ್ಪ ಹೆಚ್ಚಿನ ವರ್ಷಗಳನ್ನು ತೆಗೆದುಕೊಂಡಾಗ ನಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುವುದು ಸಾಧ್ಯ.

ಈಗ ಎಸ್ಬಿಐ ಫಿಕ್ಸೆಡ್ ಡೆಪಾಸಿಟ್ (SBI FD) ನ ಹೊಸ ಸ್ಕಿನ್ ಇದೇ ರೀತಿ ನಿಮ್ಮ ಹಣವನ್ನು ದ್ವಿಗುಣ ಮಾಡಿಕೊಡುತ್ತದೆ. ಆದರೆ ಹೆದರಬೇಡಿ ಇದು ಯಾವುದೇ ರೀತಿಯ ಮಾರ್ಕೆಟ್ ಲಿಂಕ್ಡ್ ಹೂಡಿಕೆ ವಿಧಾನ ಅಲ್ಲ. ಇದು ತುಂಬಾ ಸುರಕ್ಷಿತವಾದ ಹೂಡಿಕೆಯ ವಿಧಾನ ಆಗಿದೆ. ಇಲ್ಲಿ ನೀವು ಹೂಡಿಕೆ ಮಾಡಿರುವ ಹಣ ನಿಗದಿತ ಸಮಯದಲ್ಲಿ ದ್ವಿಗುಣವಾಗಿ ನಿಮ್ಮ ಕೈ ಸೇರಲಿದೆ.

ಈ ಸ್ಕೀಮ್ ನ ಹೆಸರೇನು ? ಎಷ್ಟು ವರ್ಷಗಳು ಇದರಲ್ಲಿ ಹೂಡಿಕೆ ಮಾಡಬೇಕು ? ಬಡ್ಡಿದರ ಎಷ್ಟು ? ಹಾಗೂ ಗರಿಷ್ಠ ಎಷ್ಟು ಹೂಡಿಕೆ ಮಾಡಬಹುದು ? ಈ ಎಲ್ಲ ವಿವರಗಳು ನಿಮಗೆ ಬೇಕು ಎಂಬುದು ನಮಗೆ ಗೊತ್ತು. ಹೀಗಾಗಿ ಈಗಲೇ ಇಂತಹ ವಿವರಗಳನ್ನು ನಿಮಗೆ ನೀಡಲಿದ್ದೇವೆ.

advertisement

SBI Wecare:

 

 

SBI ತನ್ನ ನಿಯಮಿತ ಹೂಡಿಕೆಯ ಆಯ್ಕೆಗಳನ್ನು ಬಿಟ್ಟು ಹೊಸದಾದ ಎಸ್‌ಬಿಐ ವಿ ಕೇರ್ (SBI Wecare) ಎಂಬ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ನೀವು ನಿಗದಿತ ಅವಧಿಗೆ ಹಣ ಹೂಡಿಕೆ ಮಾಡಿದಾಗ ನಿಮ್ಮ ಹಣ ದುಪ್ಪಟ್ಟಾಗಿ ನಿಮ್ಮ ಕೈ ಸೇರಲಿದೆ. ಈ ಯೋಜನೆಯಲ್ಲಿ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಿಗೆ ನೀವು ಹೂಡಿಕೆಯನ್ನು ಮಾಡಬಹುದು.

ಈ ಎಸ್ ಬಿ ಐ ವಿ ಕೇರ್ ಯೋಜನೆ (SBI Wecare Scheme) ಯಲ್ಲಿ ನೀವು 10 ವರ್ಷಗಳ ಹೂಡಿಕೆ ಮಾಡಿದರೆ ನಿಮ್ಮ ಹಣ ದುಪ್ಪಟ್ಟಾಗಿ ನಿಮ್ಮ ಕೈಗೆ ಸೇರಲಿದೆ. ಅಂದರೆ ಈ ಯೋಜನೆಯಲ್ಲಿ ನೀವು 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 20 ಲಕ್ಷ ರೂಪಾಯಿಗಳಾಗಿ ನಿಮ್ಮ ಕೈ ಸೇರಲಿದೆ. ಇಲ್ಲಿ ಹಿರಿಯ ನಾಗರಿಕರಿಗೆ 7.5% ಬಡ್ಡಿ ದರ ಸಿಗಲಿದೆ ಇದರಿಂದಾಗಿ ಹಣ 10 ವರ್ಷಗಳಲ್ಲಿ ದುಪ್ಪಟ್ಟು ಆಗಲಿದೆ.

ನೀವು ಕೂಡ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿ ಇದ್ದೀರಿ ಎಂದಾದಲ್ಲಿ 31 ಮಾರ್ಚ್ 2024 ಕೊನೆಯ ದಿನಾಂಕ ಆಗಿರಲಿದೆ. ಹೀಗಾಗಿ ಕೂಡಲೇ ನಿಮ್ಮ ಸಮೀಪದ SBI ಶಾಖೆಗೆ ಭೇಟಿ ನೀಡಿ ಹೂಡಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ.

advertisement

Leave A Reply

Your email address will not be published.