Karnataka Times
Trending Stories, Viral News, Gossips & Everything in Kannada

Electric Scooter: ಮಾರ್ಚ್ ಒಂದೇ ತಿಂಗಳಲ್ಲಿ 53 ಸಾವಿರ ಜನ ಖರೀದಿಸಿದ್ದಾರೆ ಈ ಎಲೆಕ್ಟ್ರಿಕ್ ಸ್ಕೂಟರನ್ನು! ಕಡಿಮೆ ಬೆಲೆ ಲಾಂಗ್ ರೇಂಜ್

advertisement

ಇತ್ತೀಚಿನ ದಿನದಲ್ಲಿ ಎಲೆಕ್ಟ್ರಾನಿಕ್ ವಾಹನಗಳನ್ನು (Electric Vehicles)  ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲೆಕ್ಟ್ರಾನಿಕ್ ಮಾರಾಟ ಕಂಪೆನಿಯಾಗಿರುವ ಓಲಾ (OLA) ಕಂಪೆನಿಯು ದೈತ್ಯ ಸ್ಥಾನ ಪಡೆಯುತ್ತಿದೆ. ಓಲಾ ಕಂಪೆನಿಯು ವರ್ಷದಿಂದ ವರ್ಷಕ್ಕೆ ಅಧಿಕವಾಗಿ ತನ್ನ ವಾಹನವನ್ನು ಮಾರಾಟ ಮಾಡುತ್ತಿದ್ದು, ತಿಂಗಳ ಅಂತರದಲ್ಲಿಯೇ ಓಲಾ ವಾಹನದ ಸೇಲ್ ಮಟ್ಟ ಅಧಿಕವಾಗಿದ್ದರ ಬಗ್ಗೆ ಇತ್ತೀಚೆಗಷ್ಟೇ ಕಂಪೆನಿಯೂ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಎಷ್ಟು ಸೇಲ್ ಹೆಚ್ಚಾಗಿದೆ?

ಓಲಾ ಎಲೆಕ್ಟ್ರಾನಿಕ್ (Ola Electric) ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ತನ್ನ ಈ ವರ್ಷದ Electric Scooter ಸೇಲ್ ಬಗ್ಗೆ ಅಧಿಕೃತ ಮಾಹಿತಿಯನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದೆ. ಕಳೆದ ವರ್ಷ FY23 ಓಲಾ ವಾಹನವು 1,52,741ಯುನಿಟ್ ಮಾರಾಟವಾಗಿದೆ. ಅದಕ್ಕೆ ಹೋಲಿಸಿದರೆ FY 24ನಲ್ಲಿ ಕಂಪೆನಿಯು 3,28,285 ಯುನಿಟ್ ಅನ್ನು ನೋಂದಣಿ ಮಾಡಿಕೊಂಡಿದೆ. ಹೀಗಾಗಿ ಕಂಪೆನಿಯ ವರ್ಷದಿಂದ ವರ್ಷಕ್ಕೆ 115% ನಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹಾಗಾಗಿ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಿಗರೆಲ್ಲ ವಿಚಾರ ತಿಳಿದು ಅಚ್ಚರಿಗೊಂಡಿದ್ದಾರೆ.

ಮಾರ್ಚ್ ನಲ್ಲಿ ಅಧಿಕ ಮಾರಾಟ:

ಓಲಾ ಕಂಪೆನಿಯ ವಾಹನವು ಮಾರ್ಚ್ ತಿಂಗಳಲ್ಲಿ ಅಧಿಕ ಮಾರಾಟವಾಗಿ Electric Scooter ಮಾರುಕಟ್ಟೆಯ ಬಹುಪಾಲನ್ನೇ ಪಡೆದಿದೆ. ತ್ರೈಮಾಸಿಕ ಅವಧಿಯಲ್ಲಿ 42% ನಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಈ ಮೂಲಕ ಬರೀ ಮಾರ್ಚ್ ಒಂದೇ ತಿಂಗಳಿಗೆ 53,000 ನೋಂದಣಿ ಮಾಡಿದ್ದು ದಾಖಲೆ ನಿರ್ಮಿಸಿದೆ. ಈ ಮೂಲಕ Q4FY24ನಲ್ಲಿ 1,19,310 ಯುನಿಟ್ ನೋಂದಾಯಿಸಲಾಗಿದೆ. ಈ ಸಾಧನೆಯನ್ನು ಸ್ವತಃ ಕಂಪೆನಿಯೂ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

advertisement

Image Source: Ola Electric

OLA Electric Scooter ಉಪಕ್ರಮ ಸರಣಿ ಪರಿಚಯ:

ಓಲಾ ಕಂಪೆನಿಯು ಇತ್ತೀಚೆಗೆ ಉಪಕ್ರಮ ಸರಣಿ ವಾಹನಗಳನ್ನು ಪರಿಚಯಿಸಿದೆ. ಈ ಮೂಲಕ ಓಲಾ ಕಂಪೆನಿಯ ವಾಹನಗಳ ಸೇವೆ, ಸೌಲಭ್ಯ, ವೈಶಿಷ್ಟ್ಯ ದ ದೋಷ ನಿವಾರಿಸಿ ಉತ್ತಮ ಸೇವೆ ನೀಡಲು ಚಿಂತನೆ ನಡೆಸಿದೆ. ಇದೀಗ ತನ್ನ ಹೊಸ ಉಪಕ್ರಮ ಸರಣಿ ವಾಹನಗಳನ್ನು ಪರಿಚಯಿಸಿದ್ದು ಫೀಚರ್ಸ್ ಮೇಲೆ ಬೆಲೆ ಸಹ ಇಲ್ಲಿ ಬದಲಾಗಲಿದೆ. ಗ್ರಾಹಕರ ಅಗತ್ಯ ಪೂರೈಸುವ ಜೊತೆಗೆ ಉತ್ತಮ ಫೀಚರ್ಸ್ ವಾಹನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಬಹಳ ಪ್ರಸಿದ್ಧವಾಗುತ್ತಿವೆ. ಇದರ ಜೊತೆಗೆ ಕಂಪನಿಯ ಸೇವಾ ಕೇಂದ್ರಗಳ ಸಂಖ್ಯೆ ಸಹ ಹೆಚ್ಚಾಗಿದ್ದು ಇತ್ತೀಚೆಗಷ್ಟೇ 450 ನೇ ಸೇವಾ ಕೇಂದ್ರವನ್ನು ಪ್ರಯಾಗ್ ರಾಜ್ ನಲ್ಲಿ ಆರಂಭ ಮಾಡಿದೆ.

ಅಧಿಕಾರಿಗಳಿಂದ ಪ್ರಶಂಸೆ

ಓಲಾ ಕಂಪೆನಿಯ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಮಾರ್ಕೆಟಿಂಗ್ ಆಫೀಸರ್ ಕೂಡ ಈ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 2023ರ ಪೂರ್ಣ ಹಣಕಾಸು ವರ್ಷದಲ್ಲಿ ನಮ್ಮ ಕಂಪೆನಿ ಸಾಧನೆ ಮಾಡಿದೆ ಈ ವರ್ಷದ ಮೂರನೇ ತಿಂಗಳಿಗೆ 53,000 ನೋಂದಣಿ ಮಾಡಿದ್ದು, ಇದರ ಮತ್ತೊಂದು ಸಾಧನೆ ಎನ್ನಬಹುದು. ಕಳೆದ ವರ್ಷದ ಸಾಧನೆಯಿಂದ ಮಾರುಕಟ್ಟೆಯಲ್ಲಿ ಬಹುಪಾಲು ಪಡೆದು ಮಾರುಕಟ್ಟೆಯ ನಾಯಕರು ಎಂಬ ಪಟ್ಟವನ್ನು ನಮ್ಮ ಕಂಪೆನಿ ಪಡೆದಿದೆ ಈ ವರ್ಷವೂ ಇಂತಹ ಸಾಧನೆ ನಿರಂತರವಾಗಿ ಆಗಲಿದೆ ಎಂದು ಅವರು ಹೇಳಿದರು.

advertisement

Leave A Reply

Your email address will not be published.