Karnataka Times
Trending Stories, Viral News, Gossips & Everything in Kannada

Kisan Ashirwad Scheme: ರೈತರಿಗೆ ಈ ಯೋಜನೆಯಲ್ಲಿ ಸಿಗಲಿದೆ 25,000 ರೂಪಾಯಿ ಸಹಾಯಧನ, ಈ ದಾಖಲೆಗಳು ಅಗತ್ಯ!

advertisement

ರಾಜ್ಯದಲ್ಲಿ ಅನೇಕ ರೈತರಿಗೆ ಸರಕಾರಿ ಪ್ರಯೋಜನಗಳು ಇದ್ದರೂ ಕೂಡ ಅದರ ಲಭ್ಯತೆ ಉಪಯೋಗ ಅರ್ಜಿ ಸಲ್ಲಿಕೆ ಇತ್ಯಾದಿ ಪ್ರಕ್ರಿಯೆಯ ಬಗ್ಗೆ ಸೂಕ್ತ ಮಾಹಿತಿ ಇಲ್ಲದಾಗಿ ಸೌಲಭ್ಯದಿಂದ ವಂಚಿತರಾಗುತ್ತಲೇ ಇದ್ದಾರೆ. ಕೃಷಿ ಮಾಡುವವರ ಸಂಖ್ಯೆ ತೀರ ಕಡಿಮೆ ಇರುವ ಈ ಕಾಲದಲ್ಲಿ ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಯೋಜನೆ ಪ್ರಸ್ತುತ ಪಡಿಸುತ್ತಲಿದ್ದು ಅದರಲ್ಲಿ ಒಂದು ಯೋಜನೆಯಾದ ಕಿಸಾನ್ ಆಶೀರ್ವಾದ ಯೋಜನೆ (Kisan Ashirwad Scheme) ಕೂಡ ಒಂದಾಗಿದೆ

Kisan Ashirwad Scheme:

 

 

ರೈತರನ್ನು ಆರ್ಥಿಕವಾಗಿ ಸದೃಢವಾಗಿ ಮಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದ ಮೂಲಕ ಕಿಸಾನ್ ಆಶೀರ್ವಾದ್ ಯೋಜನೆ (Kisan Ashirwad Scheme) ಪರಿಚಯಿಸಲಾಗಿದೆ. ಕಿಸಾನ್ ಆಶೀರ್ವಾದ ಯೋಜನೆಯು ರೈತರಿಗೆ ತಮ್ಮ ಕೃಷಿ ಭೂಮಿ ಮೇಲೆ ಸರಕಾರದಿಂದ ಸಿಗುವ ಹಣಕಾಸಿನ ಸೌಲಭ್ಯ ಪಡೆಯಬಹುದಾಗಿದೆ. ಪ್ರತೀ ಎಕರೆಗೆ 5000 ರೂಪಾಯಿ ನಂತೆ 5ಎಕರೆ ಮತ್ತು ಅದಕ್ಕಿಂತ ಕಡಿಮೆ ಹೊಂದಿರುವ ಕೃಷಿ ಭೂಮಿ ಹೊಂದಿದ್ದ ರೈತರ ಖಾತೆಗೆ ಈ ಮೊತ್ತ ಜಮೆ ಮಾಡಲಾಗುತ್ತದೆ.

ಡಬಲ್ ಧಮಾಕ:

advertisement

ಈ ಒಂದು ಕಿಸಾನ್ ಆಶೀರ್ವಾದ್ ಯೋಜನೆ ಜಾರ್ಖಂಡ್ ನಲ್ಲಿ ಬಹಳ ಪ್ರಾಮುಖ್ಯ ಸ್ಥಾನ ಪಡೆದಿದೆ. ಒಂದು ಎಕರೆಗೆ 5000, 2ಎಕರೆಗೆ 10,000, 3 ಎಕರೆಗೆ 15,000, 4ಎಕರೆಗೆ 20,000, 5ಎಕರೆಗೆ 25,000 ರೂಪಾಯಿನಂತೆ ರೈತರಿಗೆ ಸಹಾಯಧನವಾಗಿ ರಾಜ್ಯದಿಂದ ಸಿಗಲಿದೆ. ಅದೇ ರೀತಿ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 6000ರೂಪಾಯಿ ಸಿಗಲಿದೆ. ಹಾಗಾಗಿ ಒಟ್ಟು ಮೊತ್ತ 31000 ರೂಪಾಯಿ ರೈತರಿಗೆ ಸಿಗಲಿದೆ. ಹಾಗಾಗಿ ಇದೊಂದು ಡಬಲ್ ಧಮಾಕಾ ಆಫರ್ ಎನ್ನಬಹುದು.

ಈ ನಿಯಮ ಅನ್ವಯ:

ಈ ಒಂದು ಯೋಜನೆಯೂ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯುವಂತೆ ಮಾಡಲಾಗುವುದು. 5ಎಕರೆ ಮತ್ತು ಅದಕ್ಕಿಂತ ಕಡಿಮೆ ವ್ಯಾಪ್ತಿಯ ಭೂ ಪ್ರದೇಶ ಹೊಂದಿರುವವರಿಗೆ ಮೊದಲ ಆದ್ಯತೆ. ಈ ಯೋಜನೆಗೆ ಕೆಲ ಕಡ್ಡಾಯ ದಾಖಲೆಗಳನ್ನು ಸಲ್ಲಿಸಬೇಕಿದ್ದು ಸಲ್ಲಿಸದಿದ್ದರೆ ಅಂತವರು ಸಹ ಅನರ್ಹರ ಸಾಲಿಗೆ ಸೇರುತ್ತಾರೆ. ಅನ್ಯ ರಾಜ್ಯದವರು ಭೂಮಿ ಖರೀದಿ ಮಾಡಿದರೆ ಈ ಯೋಜನೆ ಫಲ ಸಿಗಲಾರದು. ಜಾರ್ಖಂಡ್ ಒಂದರಲ್ಲೇ 35 ಲಕ್ಷಕ್ಕೂ ಅಧಿಕ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಮುಂದಿನ ದಿನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ಸ್ಥಾನ ಪಡೆಯಲಿದೆ.

ಈ ದಾಖಲೆಗಳು ಅಗತ್ಯ:

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಲಿಂಕ್ ಇರುವ ಬ್ಯಾಂಕಿನ ಪಾಸ್ ಬುಕ್ (Bank Pass Bokk), ಪಡಿತರ ಚೀಟಿ (Ration Card), ಆಧಾರ್ ಕಾರ್ಡ್ (Aadhaar Card), ಪಾರ್ಸ್ ಪೋರ್ಟ್ ಸೈಜಿನ ಫೋಟೋ (Passport Size Photo), ಕಿಸಾನ್ ಕಾರ್ಡ್ (Kisan Card), ಮೊಬೈಲ್ ಸಂಖ್ಯೆ (Mobile Number) ಹೊಂದಿರಬೇಕು. ಅರ್ಜಿ ಸಲ್ಲಿಸಲು ಕೃಷಿ ಇಲಾಖೆಯಲ್ಲಿ ಫಾರ್ಮ್ ಸಿಗಲಿದೆ. ಅದನ್ನು ಭರ್ತಿ ಮಾಡಿ ಅದರ ಜೊತೆಗೆ ಅಗತ್ಯ ದಾಖಲೆಗಳ ಪ್ರತಿ ನೀಡಬೇಕು.ಈ ಮೂಲಕ ಪರಿಶೀಲನೆ ಮಾಡಿ ಅರ್ಹರಿಗೆ ಈ ಯೋಜನೆ ಅಡಿಯಲ್ಲಿ ಹಣ ಕಾಸಿನ ಸಹಾಯಧನ ನೀಡಲಾಗುತ್ತದೆ.

advertisement

Leave A Reply

Your email address will not be published.