Karnataka Times
Trending Stories, Viral News, Gossips & Everything in Kannada

ಅಡಿಕೆ ಗಿಡವನ್ನು ಟ್ರೆಂಚ್ ಪದ್ಧತಿಯಲ್ಲಿ ನೆಟ್ಟರೆ ಏನಾಗುತ್ತದೆ ಗೊತ್ತಾ? ಈ 3 ತಪ್ಪುಗಳನ್ನು ಮಾಡಲೇಬೇಡಿ

advertisement

Arecanut Cultivation Practices: ಇಂದು ಅಡಿಕೆಗೆ ಮಾರುಕಟ್ಟೆಯಲ್ಲಿ(Arecanut price)  ಉತ್ತಮ ಬೆಲೆ ಸಿಗುತ್ತಿದೆ. ಹಾಗಾಗಿ ಅಡಿಕೆ ತೋಟ ಮಾಡಬೇಕು ಉತ್ತಮ ಇಳುವರಿ ಪಡೆದು ಅಧಿಕ ಲಾಭಗಳಿಸಬೇಕು ಎಂಬ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ರೈತರು ಅಧಿಕ ಲಾಭ ಬೇಗ ಸಿಗಬೇಕು ಎಂಬ ಕಾರಣಕ್ಕೆ ಅಡಿಕೆ ಸಸಿಗಳಿಗೆ ಸರಿಯಾದ ಪೋಷಣೆ ಮಾಡಿ ಅಧಿಕ ರಾಸಾಯನಿಕ ಹಾಗೂ ಅಧಿಕ ನೀರಿನ ಪೋಷಣೆ ಮಾಡಲು ಮುಂದಾಗುತ್ತಾರೆ ಈ ವಿಧಾನ ಸರಿಯೇ?, ಅಡಿಕೆ ಗಿಡವನ್ನು ಟ್ರೆಂಚ್ ವಿಧಾನದಲ್ಲಿ(trench method)  ನೆಡಬಹುದೇ ಎಂಬ ಅನೇಕ ಪ್ರಶ್ನೆಗೆ ಇಲ್ಲಿದೆ ಸೂಕ್ತ ಉತ್ತರ.

ಮಣ್ಣಿನ ಪೋಷಣೆ
ಅನೇಕ ಸಲ ತೋಟದ ಮಣ್ಣು ಗಟ್ಟಿ ಯುಕ್ತವಾಗಿ ಕಲ್ಲು ಗಳಂತೆ ಇರಲಿದೆ ಆದರೆ ಇದು ಮಣ್ಣಿನ ಫಲವತ್ತತೆ ನಾಶ ವಾಗಿದ್ದನ್ನು ಸೂಚಿಸಲಿದೆ. ಮಣ್ಣು ಫಲವತ್ತಾಗಿದ್ದರೆ ಮಣ್ಣು ಹತ್ತಿಯಂತೆ ಮೃದುವಾಗಿ ಕೂಡಿರಲಿದೆ ಅದರಲ್ಲಿ ಸಾಕಷ್ಟು ಮಣ್ಣಿನ ಪೋಷಕಾಂಶ ಬೆಂಬಲಿಸುವ ಎರೆಹುಳು ಇತರ ಕ್ರಿಮಿಗಳು ಇರಲಿದೆ. ಮಣ್ಣು ನಾವೇ ನಡೆದು ಹೋಗುವಾಗಲು ಚುಚ್ಚುವ ಅನುಭವ ನೀಡಬಾರದು. ಅಡಿಕೆ ಸಸಿ ಬಳಿ ಪೋಷಕಾಂಶ ಹಾಕಲು ಆರು ಇಂಚು ಮಣ್ಣು ಅಗೆಯಬೇಕಾದರೆ ಕೈ ನಿಂದ ತೆಗೆಯುವುದು ಒಳ್ಳೆಯದ್ದು ಗುದ್ದಲಿ ಇತರ ಉಪಕರಣ ಬೆಳೆಗೆ ಹಾನಿ ಆಗಲಿದೆ.

rench Farming Technique | Areca nut Planting Method
Image Source: Deccan Herald

advertisement

ಬೇರಿನ ಅಭಿವೃದ್ಧಿಗೆ ಆದ್ಯತೆ ನೀಡಿ
ಅಡಿಕೆ ಕೃಷಿ ಮಾಡುವವರು ಎಲೆಗಳಿಗೆ ಆರೈಕೆ ಮಾಡುವಂತೆ ಬೇರುಗಳಿಗೆ ಕೂಡ ವಿಶೇಷ ಆರೈಕೆ ಮಾಡಬೇಕು.ಗಟ್ಟಿ ಮಣ್ಣಿನಲ್ಲಿ ಬೇರು ಹೆಚ್ಚು ಉದ್ದಕ್ಕೆ ಹರಡಿ ಬೆಳೆಯಲಾರದು. ಮಣ್ಣಿನಲ್ಲಿ ಗೊಬ್ಬರ ಹೇರಳವಾಗಿ ಮಣ್ಣು ಮೃದುವಾಗಬೇಕಾದರೆ ಎರೆಹುಳು ಸಂಖ್ಯೆ ಅಧಿಕವಾಗಿ ಇರಬೇಕು. ಒಂದು ಚದರ ಅಡಿಯಲ್ಲಿ 10-14 ಎರೆಹುಳು ಅಗತ್ಯವಾಗಿದೆ.

ಟ್ರೆಂಚ್ ಮಾಡುವ ಕ್ರಮ ಉತ್ತಮವೇ?
ಅಡಿಕೆ ಸಸಿಯನ್ನು ನೀವು ಎಲ್ಲಿ ನೆಟ್ಟು ಬಿಡುತ್ತಿದ್ದೀರಿ ಎಂಬುದು ಬಹಳ ಮುಖ್ಯ ನೀವು ಅಡಿಕೆ ಸಸಿಯನ್ನು ಪೋಷಕಾಂಶ ಇಲ್ಲದ ಗಟ್ಟಿ ಮಣ್ಣಿನಲ್ಲಿ ಟ್ರೆಂಚ್ ಮಾಡಿ ಗಿಡ ನಾಟಿ ಮಾಡುವುದರಿಂದ ಗಿಡ ಬೆಳವಣಿಗೆ ಆಗಲಾರದು. ಎರಡು ಅಡಿ ಟ್ರೆಂಚ್ ಮಾಡಿ ಗಿಡ ನೆಟ್ಟು ಅಧಿಕ ನೀರು ಹಾಕಿದ್ದರೂ ಮಣ್ಣು ನೀರನ್ನು ಇಂಗಿಸಿ ಬಿಡುತ್ತದೆ ವಿನಃ ನೀರನ್ನು ಹಿಡಿದಿಟ್ಟುಕೊಂಡು ಇತರ ಗಿಡಕ್ಕೆ ಪೋಷಣೆ ಎಂದು ನೀಡಲಾರದು ಹಾಗಾಗಿ ಈ ವಿಚಾರವಾಗಿ ಗಮನಿಸಬೇಕು. ಈ ತರ ಟ್ರೆಂಚ್ ಮಾಡುವುದು ಸರಿಯಾದ ಕ್ರಮ ಅಲ್ಲ ಎನ್ನಬಹುದು.

rench Farming Technique | Areca nut Planting Method
Image Source: Deccan Herald

ರಾಸಾಯನಿಕ ಬಳಸಬಹುದೇ?
ರಾಸಾಯನಿಕ ಕೆಮಿಕಲ್ ಮಣ್ಣಿನ ಫಲವತ್ತತೆಗೆ ಮಾರಕ ಆಗಲಿದೆ.ಅದಕ್ಕಿಂತಲೂ ಜೈವಿಕ ನೈಸರ್ಗಿಕ ವಿಧಾನ ಅನುಸರಿಸುವುದು ಅತ್ಯಗತ್ಯ. ನೀವು ರಾಸಾಯನಿಕ ಅಧಿಕ ಬಳಸಿದರೆ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಸಾಯಲಿವೆ. ಹಾಗಾಗಿ ಮಣ್ಣಿನ ಪೋಷಕಾಂಶ ಮಟ್ಟ ಕಡಿಮೆ ಆಗುತ್ತದೆ. ಹಾಗಾಗಿ ಟ್ರೆಂಚ್ ಮಾಡುವುದು, ನೀರು ಅತಿಯಾಗಿ ಕೊಡುವುದು ಮತ್ತು ರಾಸಾಯನಿಕ ಪೋಷಕಾಂಶ ಬಳಸುವುದು ಅಡಿಕೆ ಫಲವತ್ತತೆಗೆ ಉತ್ತಮ ವಿಧಾನ ಅಲ್ಲ ಎಂಬುದು ಇತ್ತೀಚೆಗೆ ಮಾಧ್ಯಮದ ಮೂಲಗಳಿಂದ ತಿಳಿದುಬಂದ ವಿಚಾರವಾಗಿದೆ.

advertisement

Leave A Reply

Your email address will not be published.