Karnataka Times
Trending Stories, Viral News, Gossips & Everything in Kannada

Farm Road: ಅಕ್ಕಪಕ್ಕದವರು ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ವಾ! ಬಂತು ಹೊಸ ರೂಲ್ಸ್

advertisement

ನಾವು ಹೊಲ ಜಮೀನು (Field Land) ಇತ್ಯಾದಿ ಮಾಡಿಕೊಂಡಿದ್ದಾಗ ಅದಕ್ಕೆ ದಾರಿ ವ್ಯವಸ್ಥೆ ಸರಿ ಇದೆ ಅಥವಾ ಇಲ್ಲ ಎಂಬುದನ್ನು ಸಹ ತಿಳಿದಿರಬೇಕು. ಎಷ್ಟೋ ಸಲ ದಾರಿ ಸರಿ ಇಲ್ಲದೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ರೈತರು ಪರದಾಟ ಪಡಬೇಕಾಗಿತ್ತು ಆದರೆ ನಮ್ಮ ಹೊಲ ಅಥವಾ ಗದ್ದೆಗೆ ಓಡಾಡಲು ದಾರಿ ಇಲ್ಲದೆ ಇದ್ದರೆ ಅದನ್ನು ಹೇಗೆ ಪಡೆಯಬಹುದು, ಕಾನೂನಾತ್ಮಕ ಕ್ರಮ ಹೇಗೆ ಕೈಗೊಳ್ಳಬಹುದು ಎಂದು ಇಂದು ನಾವು ತಿಳಿಸಲಿದ್ದೇವೆ.

ನಮ್ಮ ಜಮೀನಿಗೆ ನಾವು ಹೋಗಲು ಅಥವಾ ಕೃಷಿ‌ಯ ಪರಿಕರವನ್ನು ಕೊಂಡೊಯ್ಯಲು ಸರಿಯಾದ ವ್ಯವಸ್ಥೆ ಇಲ್ಲದೆ ಇದ್ದರೆ ತುಂಬಾ ತೊಂದರೆ ಎಂದು ಅನಿಸಲಿದೆ. ಪಕ್ಕದ ಜಮೀನಿನವರ ಬಳಿ ಒಂದೆರೆಡು ಸಲ ಮನವಿ ಮಾಡಿದ್ದರು ಅವರು ದಾರಿಗೆ ಜಾಗ ಕೊಡುತ್ತಿಲ್ಲ ಎಂದಾದರೆ ನೀವು ಕಾನೂನಾತ್ಮಕ ರೀತಿಯಲ್ಲಿ ಜಮೀನಿಗೆ ಹೋಗಲು ದಾರಿ (Farm Road) ಪಡೆಯಬಹುದು ಅದನ್ನು ಹೇಗೆ ಪಡೆಯುವುದು ಎನ್ನುವುದನ್ನು ತಿಳಿಯಲು ಈ ಲೇಖನ ಪೂರ್ತಿ ಓದಿ.

ಕಾಯ್ದೆ ಇದೆ:

 

Image Source: KhetiVyapar

 

ಜಮೀನಿಗೆ ಹೋಗಲು ದಾರಿ (Farm Road) ಇಲ್ಲ ಅನ್ನುವವರು Easement Act ಪ್ರಕಾರ ತಮ್ಮ ಹಕ್ಕನ್ನು ತಾವು ಪಡೆಯಬಹುದು. ಈ ಎಸೆಸ್ ಮೆಂಟ್ ಆ್ಯಕ್ಟ್ ನಲ್ಲಿ  Easement of Necessity (ಎಸೆಸ್ ಮೆಂಟ್ ಆಫ್ ನೆಸೆಸಿಟಿ) ಅಂದರೆ ಮುಂಭಾಗದ ಜಮೀನಿನ ರೈತ ಹಿಂಭಾಗದ ಜಮೀನಿನ ರೈತರಿಗೆ ಜಮೀನು ಹೋಗಲು ದಾರಿ ಮಾಡಿ ಕೊಡಬೇಕು ಎಂಬುದನ್ನು ವಿವರಿಸಲಿದೆ. ಇದರಲ್ಲಿ ಕೇಸ್ ದಾಖಲಿಸಿದರೆ ನಿಮ್ಮ ಜಮೀನಿಗೆ ಹೋಗಲು ದಾರಿ ಸಿಗಲಿದೆ.

advertisement

Easement of Prescription:

 

Image Source: Down To Earth

 

ಇದರಲ್ಲಿ ಇನ್ನೊಂದು ಇದೆ ಅದು ಎಸೆಸ್ ಮೆಂಟ್ ಆಫ್ ಪ್ರಿಸ್ಕ್ರಿಪ್ಶನ್ Easement of Prescription ಅಂದರೆ ಸುಮಾರು 15-20ವರ್ಷದಿಂದ ಇದ್ದ ದಾರಿ ಮುಚ್ಚಿ ಅದರಲ್ಲಿ ನಾಟಿ ಮಾಡಿದರೆ ಜಮೀನಿಗೆ ಹೋಗಲು ದಾರಿಯೇ ನೀಡದಿದ್ದರೆ ಆಗ ಅಪ್ಲೇ ಆಗುವ ಕಾಯ್ದೆ Easement of Prescription ಎಂದು ಆಗಿದೆ. ಇದರ ಮೂಲಕ ಕೇಸ್ ದಾಖಲಿಸಿ ಪರಿಹಾರವನ್ನು ಪಡೆಯಬಹುದು. ಹಾಗಾಗಿ ಈ ವಿಧಾನದಿಂದ ಹಳೆ ದಾರಿ ವಾಪಾಸ್ಸು ಪಡೆಯಬಹುದಾಗಿದೆ.

Easement of Custom:

ಈ ಒಂದು ಎಸೆಸ್ ಮೆಂಟ್ ಆಫ್ ಕಸ್ಟಮ್ ನಲ್ಲಿ ಸಂಪ್ರದಾಯ ಬದ್ಧವಾಗಿ ಅನೇಕ ವರ್ಷದಿಂದ ಬಂದ ದಾರಿ ವಶಕ್ಕೆ ಪಡೆದಿದ್ದರೆ ಆಗ ಆ ದಾರಿ ಹಾಗೆ ಬಿಟ್ಟು ಬಿಡಬೇಕು ಎಂಬ ನಿಯಮ ಇದೆ. ಅನೇಕ ವರ್ಷದಿಂದ ಅಂದರೆ ತಾತ ಮುತ್ತಾತನ ಕಾಲದಲ್ಲಿ ಜಮೀನು ಹೋಗುವ ದಾರಿ ಆಗಿದ್ದರೆ ಅದನ್ನು ಬಂದ್ ಮಾಡುವಂತಿಲ್ಲ ಹಿಂದಿನ ಜಮೀನು ಹೋಗಲು ದಾರಿ ನೀಡಬೇಕು ಎಂಬ ನಿಯಮ ಇದೆ.

advertisement

Leave A Reply

Your email address will not be published.