Karnataka Times
Trending Stories, Viral News, Gossips & Everything in Kannada

SSY: ಮಹಿಳೆಯರಿಗಾಗಿಯೇ ಇರುವ ಈ ಯೋಜನೆಗೆ ಹೆಸರು ಸೇರಿಸಿದವರಿಗೆ ಮಹತ್ವದ ಸೂಚನೆ ಕೊಟ್ಟ ಕೇಂದ್ರ ಸರಕಾರ!

advertisement

ಇಂದು ಮಹಿಳೆಯರು ಶಿಕ್ಷಣವಂತರಾಗುತ್ತಿದ್ದಾರೆ. ಆರ್ಥಿಕವಾಗಿಯು ಯಾರಿಗೂ ಕೂಡ ಅವಲಂಬಿತರಾಗದೇ ತಾವೇ ದುಡಿದು ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ. ತಾವೇ ದುಡಿದು ಶಿಕ್ಷಣವಂತರು ಕೂಡ ಆಗುತ್ತಿದ್ದಾರೆ. ಇದಕ್ಕಾಗಿ ಹೆಣ್ಣು ಮಕ್ಕಳ ಹೂಡಿಕೆ ಮೊತ್ತ ಕೂಡ ಬಹಳ ಮುಖ್ಯವಾಗುತ್ತದೆ. ಹೆಣ್ಣುಮಕ್ಕಳ ಅಭಿವೃದ್ಧಿ ಗಾಗಿಯೇ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojane) ಯನ್ನು ಜಾರಿಗೆ ತಂದಿದೆ.

ಏನು ಈ SSY ಯೋಜನೆ?

ಈ SSY ಯೋಜನೆಯನ್ನು 2015ರಲ್ಲಿ ಜಾರಿಗೆ ತಂದಿದ್ದು ಹೆಚ್ಚಿನ ಬಡ್ಡಿಯು ಸಿಗಲಿದೆ. ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಇರುವ ಕಾರಣದಿಂದ ಇದು ಲಾಭಕರ ಎಂದೇ ಹೇಳಬಹುದು‌. ಈ ಉಳಿತಾಯ ಯೋಜನೆ ಹೆಣ್ಣು ಮಗುವಿನ ವಿದ್ಯಾಭ್ಯಾಸ, ಮದುವೆ ಖರ್ಚು, ಇತ್ಯಾದಿ ಗಳಿಗೆ ಬಳಕೆ ಮಾಡಬಹುದಾಗಿದ್ದು ಕನಿಷ್ಟ ಮೊತ್ತ ಮಾತ್ರ ಇದರಲ್ಲಿ ಇರಲೇಬೇಕು.

Image Source: India Map

ಬಡ್ಡಿಯೊಂದಿಗೆ ಹಣ ಹಿಂಪಡೆಯುವಿಕೆ

SSY ಯೋಜನೆಯಲ್ಲಿ ಖಾತೆ ತೆರೆದ ದಿನಾಂಕದಿಂದ 15 ವರ್ಷಗಳು ಪೂರ್ಣ ಆಗುವ ವರೆಗೆ ಖಾತೆಯಲ್ಲಿ ಹಣ ಠೇವಣಿ ಮಾಡಲಾಗುತ್ತದೆ. ಈ ಯೋಜನೆಯ ಖಾತೆಯ ಅವಧಿ ಮುಗಿದ ನಂತರ ಇರುವ ಸಂಪೂರ್ಣ ಮೊತ್ತವನ್ನು ಬಡ್ಡಿಯೊಂದಿಗೆ ನೀವು ಹಿಂಪಡೆಯಬಹುದಾಗಿದೆ.

advertisement

ಈ ಕೆಲಸ ಮಾಡಿ

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನಿಮ್ಮ‌ ಖಾತೆಗೆ ವರ್ಷಕ್ಕೆ ಕನಿಷ್ಠ 250 ರೂ. ಹಾಕಲೇ ಬೇಕು ಇಲ್ಲದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುವುದು ಪಕ್ಕಾ. ಒಂದು ವೇಳೆ ಈ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಇಲ್ಲದೆ ಇದ್ದಲ್ಲಿ ನಿಷ್ಕ್ರಿಯ ಮಾಡಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣಕಾಸು ವರ್ಷವನ್ನು ಒಂದು ವರ್ಷವೆಂದು ಪರಿಗಣನೆ ಮಾಡಲಾಗುತ್ತದೆ. ಹಾಗಾಗಿ ನೀವು ಮಾರ್ಚ್ 31 ರೊಳಗೆ ಕನಿಷ್ಠ 250 ರೂ.ಗಳನ್ನು ಪಾವತಿಸಬೇಕು ಇಲ್ಲದಿದ್ದರೆ ಮಾರ್ಚ್ 31 ರ ನಂತರ ನಿಮ್ಮ ಖಾತೆ ನಿಷ್ಕ್ರಿಯ ಆಗಲಿದೆ.

Image Source: Zee Business

SSY ಯೋಜನೆಗೆ ಈ ದಾಖಲೆ ಬೇಕು

  • ಮಗು ಮತ್ತು ತಾಯಿಯ ಭಾಚಿತ್ರಗಳು
  • ರೇಷನ್ ಕಾರ್ಡ್ (Ration Card)
  • ಆಧಾರ್ ಕಾರ್ಡ್  (Aadhaar Card) ಕಡ್ಡಾಯ
  • ಜನನ ಪ್ರಮಾಣ ಪತ್ರ (Birth Certificate)

ಈ ನಿಯಮ ಇದೆ

  • ಈ ಯೋಜನೆಯ ಮೂಲಕ ಹೆಣ್ಣು ಮಕ್ಕಳು ಮಾತ್ರ ಖಾತೆ ತೆರೆಯಬಹುದಾಗಿದ್ದು, ಖಾತೆ ತೆರೆಯುವ ಸಮಯದಲ್ಲಿ ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬೇಕಾಗುತ್ತದೆ.
  • ಒಂದು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು
  • ಈ ಯೋಜನೆಗೆ ಮಗುವಿನ ಜನನ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಇದಕ್ಕೆ ಬೇಕಾದ ಅಗತ್ಯ ಪ್ರಮಾಣ ಪತ್ರಗಳ ಜೊತೆಗೆ ಅಗತ್ಯ ಮಾಹಿತಿಯನ್ನೂ ನೀಡಬೇಕಾಗುತ್ತದೆ.

advertisement

Leave A Reply

Your email address will not be published.