Karnataka Times
Trending Stories, Viral News, Gossips & Everything in Kannada

Zeeta Max: ಟಾಟಾ ಕಂಪನಿಯ ಈ ಎಲೆಕ್ಟ್ರಿಕ್ ಬೈಸಿಕಲ್ ತಗೊಂಡ್ರೆ ಒಂದೇ ಚಾರ್ಜಿನಲ್ಲಿ 35 km ಪ್ರಯಾಣ ಮಾಡ್ಬೋದು! ಕಡಿಮೆ ಬೆಲೆ

advertisement

ಹೊಸದಾಗಿ ವಾಹನ ಕೊಂಡು ಕೊಳ್ಳಬೇಕು ಎಂದೆನಿಸಿದಾಗ ಕಡಿಮೆ ಬೆಲೆ, ಹೆಚ್ಚು ಶ್ರೇಣಿ ಮತ್ತು ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ವಾಹನಗಳನ್ನ ಪಟ್ಟಿ ಮಾಡಿಕೊಳ್ಳುತ್ತೇವೆ. ಅದರಲ್ಲೂ ಪೆಟ್ರೋಲ್ ಹಣ ಉಳಿಸಲು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ (Electric Vehicles)  ಮೇಲೆ ಹೆಚ್ಚಿನ ಗಮನ ಹರಿಸುತ್ತೇವೆ. ಸ್ಟೈಲಿಶ್ ಲುಕ್ , ಬಜೆಟ್ ಫ್ರೆಂಡ್ಲಿ ಬೈಸಿಕಲ್ ಅನ್ನು ಕೊಳ್ಳಬೇಕು ಎಂದು ನೀವು ಹುಡುಕುತ್ತಿದ್ದರೆ ನಿಮಗಾಗಿ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾದ ಟಾಟಾ ಕಂಪನಿಯ ಅತ್ಯುತ್ತಮ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಪರಿಚಯಿಸಲಿದ್ದೇವೆ. ಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವ ಎಲೆಕ್ಟ್ರಿಕ್ ಬೈಸಿಕಲ್ ಹೆಸರು Zeeta Max. ಈ ಎಲೆಕ್ಟ್ರಿಕ್ ಬೈಸಿಕಲ್ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.

ಜೀಟಾ ಮ್ಯಾಕ್ಸ್ ಎಲೆಕ್ಟ್ರಿಕ್ ಬೈಸಿಕಲ್‌ ವಿಶೇಷತೆ

ಟಾಟಾ ಕಂಪನಿಯು ಈ ಎಲೆಕ್ಟ್ರಿಕ್ ಬೈಸಿಕಲ್‌ನಲ್ಲಿ 36V, 7.5 Ah ಸಾಮರ್ಥ್ಯದೊಂದಿಗೆ Inbuilt ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಸೇರಿಸಿದೆ. ಈ ಎಲೆಕ್ಟ್ರಿಕ್ ಬೈಸಿಕಲ್‌ (Electric Bicycle) ಒಂದೇ ಚಾರ್ಜ್‌ನಲ್ಲಿ 35 ಕಿಲೋಮೀಟರ್‌ಗಳ ಅತ್ಯುತ್ತಮ ಶ್ರೇಣಿಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು 100% ಚಾರ್ಜ್ ಮಾಡಲು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಬೈಸಿಕಲ್ನಲ್ಲಿ ನೀವು ಡ್ಯುಯಲ್ ಡಿಸ್ಕ್ ಬ್ರೇಕ್ಗಳನ್ನು ಸಹ ನೋಡಬಹುದಾಗಿದೆ.

Image Source: Stryder Bikes

advertisement

5 ರೈಡ್ ಮೋಡ್ಗಳನ್ನು ಹೊಂದಿದೆ ಈ ಬೈಸಿಕಲ್

ಈ ಎಲೆಕ್ಟ್ರಿಕ್ ಬೈಸಿಕಲ್‌ಗೆ ಟಾಟಾ ಕಂಪನಿಯು 250 ವ್ಯಾಟ್ BLDC ಮೋಟಾರ್ ಅನ್ನು ಸೇರಿಸಿದೆ. ಅಷ್ಟೇ ಅಲ್ಲ ಈ ಎಲೆಕ್ಟ್ರಿಕ್ ಬೈಸಿಕಲ್‌ಗೆ ಗಂಟೆಗೆ 25 ಕಿಲೋಮೀಟರ್ ವೇಗವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಸಿಕಲ್‌ನಲ್ಲಿ 5 ರೈಡ್ ಮೋಡ್‌ಗಳನ್ನು ನೋಡಬಹುದು, ಎಲ್‌ಸಿಡಿ ಡಿಸ್ಪ್ಲೇ ಮೀಟರ್, ಎಲ್‌ಇಡಿ ಹೆಡ್‌ಲೈಟ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಈ ಎಲೆಕ್ಟ್ರಿಕ್ ಬೈಸಿಕಲ್‌ನಲ್ಲಿ ಕಾಣಸಿಗುವ ವೈಶಿಷ್ಟ್ಯಗಳಾಗಿವೆ.

Image Source: Stryder Bikes

Zeeta Max ಎಲೆಕ್ಟ್ರಿಕ್ ಬೆಲೆ

ಟಾಟಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಎಲೆಕ್ಟ್ರಿಕ್ ಬೈಸಿಕಲ್‌ನ ಆರಂಭಿಕ ಬೆಲೆ ₹ 29,995  ಇರುತ್ತದೆ. ಇದನ್ನು ನೀವು ಟಾಟಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಆರ್ಡರ್ ಮಾಡಿ ನಿಮ್ಮದಾಗಿಸಿ ಕೊಳ್ಳಬಹುದು. ಇನ್ನು ನೀವು ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು EMI ನಲ್ಲಿ ಸುಲಭವಾಗಿ ಖರೀದಿಸಬಹುದು, ಆದರೆ EMI ನಲ್ಲಿ ಖರೀದಿಸಲು ನೀವು ಟಾಟಾ ಕಂಪನಿಯ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಲೇ ಬೇಕಾಗುತ್ತದೆ.

advertisement

Leave A Reply

Your email address will not be published.