Karnataka Times
Trending Stories, Viral News, Gossips & Everything in Kannada

Cars Under 5 Lakhs: ಹೊಸ ಕಾರ್ ಖರೀದಿಸುವ ಪ್ಲಾನ್ ಇದ್ರೆ ಬಜೆಟ್ ನ ಚಿಂತೆ ಬಿಡಿ! 5 ಲಕ್ಷದ ಒಳಗೆ ಸಿಗಲಿದೆ ಈ 3 ಕಾರುಗಳು.

advertisement

ನೀವು ಸದ್ಯದಲ್ಲಿ ಹೊಸ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ನಿಮ್ಮ ಬಜೆಟ್ ಸುಮಾರು 5 ಲಕ್ಷಗಳಷ್ಟು ಇದ್ದರೆ ನೀವು ಇದನ್ನೂ ಪೂರ್ತಿಯಾಗಿ ಓದಲೇ ಬೇಕು. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳಿಂದಾಗಿ ಈಗ ಮಾರುಕಟ್ಟೆಯಲ್ಲಿ ಹೆಚ್ಚಿನ ಕಾರುಗಳ ಬೆಲೆ 5 ಲಕ್ಷಕ್ಕಿಂತ ಹೆಚ್ಚಾಗಿದೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನು ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಾದ ಮಾರುತಿ ಸುಜುಕಿಯ (Maruti Suzuki) 2 ಮಾದರಿಗಳು ಹಾಗೂ ರೆನಾಲ್ಟ್ ನ (Renault) ಒಂದು ಮಾದರಿಯ ಕಾರಿನ ಎಕ್ಸ್ ಶೋರೂಮ್ ಬೆಲೆ 5 ಲಕ್ಷಕ್ಕಿಂತ ಕಡಿಮೆ (Cars Under 5 Lakhs) ಇದೆ. ಹಾಗೆಂದು ಎಲ್ಲಾ ರೂಪಾಂತರಗಳ ಬೆಲೆ 5 ಲಕ್ಷಕ್ಕಿಂತ ಕಡಿಮೆಯೇನಿಲ್ಲ. ಹಾಗಿದ್ದರೆ ಅತ್ಯುತ್ತಮ ಫೀಚರ್ಸ್ ಹೊಂದಿರುವಂತಹ ಬಜೆಟ್ ಫ್ರೆಂಡ್ಲಿ ಮೂರು ಕಾರುಗಳ ವಿವರಗಳನ್ನು ತಿಳಿಯೋಣ, ಅಷ್ಟಕ್ಕೂ ಈ ಕಾರುಗಳು ಯಾವುವು? ಅವುಗಳ ಬೆಲೆ ಎಷ್ಟು? ಎಲ್ಲವನ್ನು ನೋಡೋಣ.

Maruti Suzuki Alto K10

ಪ್ರಸ್ತುತ ಭಾರತದಲ್ಲಿ ಸಿಗುತ್ತಿರುವ ಅತ್ಯಂತ ಅಗ್ಗದ ಕಾರಿದು. ಈ ಮೊದಲು ಮಾರುತಿ 800 ಎಂಬ ಇದೆ ಕಂಪನಿಯು ಕಾರು ಬಹಳ ಬೇಡಿಕೆ ಹೊಂದಿತ್ತು. ಈಗ Alto K10 ಎಂಬ ಅದೇ ಮಾದರಿಯ ಕಾರು ಬಹು ಬೇಡಿಕೆಯನ್ನು ಹೊಂದಿದೆ. Alto K10 ಮತ್ತು LXI ನ ಎರಡು ರೂಪಾಂತರಗಳನ್ನು 5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ನಾವು ಖರೀದಿಸಬಹುದಾಗಿದೆ. Alto K10 ಎಕ್ಸ್ ಶೋರೂಮ್ ಬೆಲೆ 3.99 ಲಕ್ಷ ರೂಪಾಯಿ ಆದರೆ LXI ಟ್ರಿಮ್ ಬೆಲೆ 4.83 ಲಕ್ಷ ರೂಪಾಯಿ ಆಗಿರುತ್ತದೆ.

Image Source: Autocar india

Alto K10 ಮೈಲೇಜ್:

advertisement

Alto K10 ನ ಎರಡು ರೂಪಾಂತರಗಳು 1.0 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು, ಇದು ಗರಿಷ್ಠ 67 Bhp ಮತ್ತು 89 mm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರಿನ ಇಂಜಿನ್ ಅನ್ನು 5- ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಗೆ ಜೋಡಿಸಲಾಗಿದೆ. Alto K10 ಮಾನ್ಯುಯಲ್ 21.90 kmpl ಮೈಲೇಜ್ ಅನ್ನು ನೀಡುತ್ತದೆ. ಸ್ವಯಂ ಚಾಲಿತ ರೂಪಾಂತರವು 24.39 kmpl ಮೈಲೇಜ್ ಅನ್ನು ನೀಡುತ್ತದೆ. ಇನ್ನು ಸಿಎನ್‌ಜಿ ರೂಪಾಂತರವೂ 33.85 Kmpl ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

Image Source: Cardekho

Renault Kwid 

ಮಾರುತಿ ಸುಜುಕಿ ಎಸ್ ಪ್ರೆಸ್ಸದ Std (Maruti Suzuki S Presso Std) ರೂಪಾಂತರದ ಎಕ್ಸ್ ಶೋರೂಮ್ ಬೆಲೆ 4.27 ಲಕ್ಷ ರೂಪಾಯಿ ಆಗಿದ್ದು, ಇದು 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 66bhp ಗರಿಷ್ಠ ಶಕ್ತಿಯನ್ನು ಮತ್ತು 89 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದಲ್ಲದೇ ರೆನಾಲ್ಟ್ ಕ್ವಿಡ್ ಕಾರಿನ ಎರಡು ರೂಪಾಂತರಗಳ ಬೆಲೆ 5 ಲಕ್ಷಕ್ಕಿಂತ ಕಡಿಮೆ ಇದೆ. Renault RXE ವೇರಿಯೆಂಟ್ ಎಕ್ಸ್ ಶೋ ರೂಮ್ ಬೆಲೆ 4.69 ಲಕ್ಷ ರೂಪಾಯಿಗಳಾಗಿದ್ದರೆ RXL(O) ನ ಎಕ್ಸ್ ಷೋ ರೂಂ ಬೆಲೆ 4.99 ಲಕ್ಷ ರೂಪಾಯಿ.

Image Source: Carwale

advertisement

Leave A Reply

Your email address will not be published.