Karnataka Times
Trending Stories, Viral News, Gossips & Everything in Kannada

Electric Scooter: ಒಮ್ಮೆ ಚಾರ್ಜ್ ಮಾಡಿದ್ರೆ 110Km ಓಡುವ ಕಡಿಮೆ ಬೆಲೆಯ ಸ್ಕೂಟರ್ ಬಿಡುಗಡೆ!

advertisement

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರುಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಆಟೋ ಕಂಪನಿಗಳು ಒಂದರ ನಂತರ ಒಂದರಂತೆ ಪೈಪೋಟಿಗೆ ಬಿದ್ದಂತೆ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಕೆಲವೇ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ EV ಬ್ರ್ಯಾಂಡ್ FUJIYAMA ವನ್ನು ಹೊಸ ನಾವೀನ್ಯತೆಯೊಂದಿಗೆ ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್ (Classic Electric Scooter) ಆಗಿ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ವಾಹನವು ಒಂದೇ ಚಾರ್ಜ್‌ನಲ್ಲಿ 110 ಕಿಮೀ ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ ನ ವಿಶೇಷತೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.

FUJIYAMA Classic Electric Scooter:

ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್ 3000-ವ್ಯಾಟ್ ಮೋಟಾರ್ ನಿಂದ ಚಾಲಿತವಾಗಿದ್ದು, ಗಂಟೆಗೆ 60 ಕಿಮೀ ವೇಗವನ್ನು ತಲುಪುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ IOT-ಸಕ್ರಿಯಗೊಳಿಸಿದ ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿಯನ್ನು ಬಳಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 110 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಇದು ಅವಳಿ-ಬ್ಯಾರೆಲ್ ಎಲ್ಇಡಿ ದೀಪಗಳನ್ನು ಹೊಂದಿರುವದರಿಂದ ಆರಾಮವಾಗಿ ರಾತ್ರಿ ಸಮಯದಲ್ಲೂ ಪ್ರಯಾಣ ಬೆಳೆಸಬಹುದು. ಉತ್ತಮ ಬ್ರೇಕಿಂಗ್‌ಗಾಗಿ ಕಾಂಬಿ-ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದು ಕೇವಲ 4 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸಾಕು 110 ಕಿಮೀ ದೂರವನ್ನು ಸುಲಭವಾಗಿ ಕ್ರಮಿಸಬಹುದು.

advertisement

Image Source: Mobility Outlook

ಇದರ ಬೆಲೆಯೆಷ್ಟು ?

ಈ ಎಲೆಕ್ಟ್ರಿಕ್ ಸ್ಕೂಟರ್‌ (Electric Scooter)ನ ಎಕ್ಸ್ ಶೋ ರೂಂ ಬೆಲೆ ₹ 79,999 ರೂಪಾಯಿ ಆಗಿರುತ್ತದೆ. ನೀವು ಇದನ್ನು ಕೇವಲ ₹1999 ಕ್ಕೆ ಬುಕ್ ಮಾಡಬಹುದು. ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಸವಾರರು ನಗರದ ಬೀದಿಗಳಲ್ಲಿ ಅತ್ಯಾಕರ್ಷಕವಾಗಿ ಸವಾರಿ ಮಾಡಬಹುದು. ಕಸ್ಟಮೈಸ್ ಮಾಡಬಹುದಾದ ರೈಡ್ ಮೋಡ್‌ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಇ-ಸ್ಕೂಟರ್ ಅನನ್ಯ ಸಾಟಿಯಿಲ್ಲದ ಸವಾರಿ ಅನುಭವವನ್ನು ನೀಡೋದ್ರಲ್ಲಿ ಎರಡು ಮಾತಿಲ್ಲ.

advertisement

Leave A Reply

Your email address will not be published.