Karnataka Times
Trending Stories, Viral News, Gossips & Everything in Kannada

PM Kisan: ಮನೆಯಲ್ಲೇ ಕುಳಿತು ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣದ ಸ್ಟೇಟಸ್ ಹೀಗೆ ಚೆಕ್ ಮಾಡಿಕೊಳ್ಳಿ!

advertisement

ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಭೂ ಹಿಡುವಳಿ ರೈತರ ಕುಟುಂಬಗಳು ವಾರ್ಷಿಕವಾಗಿ 6,000 ಆರ್ಥಿಕ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಪ್ರತಿ 4 ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿಗಳಂತೆ ಫಲಾನುಭವಿ ರೈತರ ಖಾತೆಗೆ ಕೇಂದ್ರ ಸರ್ಕಾರ ಹಣವನ್ನು ಜಮಾ ಮಾಡುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮಾನ ನಿಧಿ ಯೋಜನೆ (PM Kisan Samman Nidhi Scheme) ಯ 15 ಕಂತಿನ ಹಣ ಈಗಾಗಲೇ ರೈತರ ಖಾತೆಯನ್ನು ಸೇರಿದೆ ನವೆಂಬರ್ 15, 2023ಕ್ಕೆ ಕೊನೆಯ ಕಂತು ಅಂದರೆ 15ನೇ ಕಂತು ಬಿಡುಗಡೆ ಆಗಿತ್ತು. ಈಗ ಮುಂದಿನ ಕಂತಿನ ಹಣ ಅಂದರೆ 16ನೇ ಕಂತಿನ ಹಣ ಇದೇ ಫೆಬ್ರವರಿ 28, 2024ಕ್ಕೆ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಅಂದರೆ ಇವತ್ತಿನಿಂದ ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಹಣ ರೈತರ ಖಾತೆಯನ್ನು ಸೇರಲಿದೆ. ಈ ಬಗ್ಗೆ ಪಿ ಎಂ ಕಿಸಾನ್ ವೆಬ್ಸೈಟ್ ನಲ್ಲಿ ಅಧಿಕೃತ ಮಾಹಿತಿ ನೀಡಲಾಗಿತ್ತು.

ಈ ಕೆಲಸ ಮಾಡದೆ ಇದ್ರೆ ಹಣ ಬರುವುದಿಲ್ಲ:

 

 

ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ (PM Kisan Samman Nidhi Scheme) ಯ ಹಣ ರೈತರು ತಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಲು ಈ ಕೆ ವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದರೆ ಅಂತವರಿಗೆ ಹಣ ಬರುವುದಿಲ್ಲ. ಬಯೋಮೆಟ್ರಿಕ್ ಆಧಾರಿತ ಈ ಕೆ ವೈ ಸಿ ಯನ್ನು ರೈತರು ಹತ್ತಿರದ ಸೇವಾ ಕೇಂದ್ರದಲ್ಲಿ ಅಥವಾ CSC ಕಚೇರಿಗೆ ಭೇಟಿ ನೀಡಿ ಮಾಡಿಸಿಕೊಳ್ಳಬಹುದು.

advertisement

ಇನ್ನು ಪಿಎಂ ಕಿಸಾನ್ ಯೋಜನೆ (PM Kisan Yojana) ಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಲು ಅಥವಾ ದೂರು ಸಲ್ಲಿಸಲು 155261 ಸಂಖ್ಯೆಗೆ ಕರೆ ಮಾಡಬಹುದು. ಅಥವಾ 011-24300606 ಈ ಸಂಖ್ಯೆಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಜಿ ಸಲ್ಲಿಸಲು https://pmkisan.gov.in ವೆಬ್ಸೈಟ್ ಗೆ ಭೇಟಿ ನೀಡಿ.
  • ಅಲ್ಲಿ ಫಾರ್ಮರ್ಸ್ ಕಾರ್ನರ್ (Farmers Corner) ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
  • ಈಗ ಹೊಸ ರೈತ ನೋಂದಣಿಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚ ಸಂಖ್ಯೆಯನ್ನು ಭರ್ತಿ ಮಾಡಿ.
  • ಈ ಮಾಹಿತಿಗಳನ್ನು ನೀಡಿದ ನಂತರ ಎಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು. ನಂತರ ಸೇವ್ ಮಾಡಿ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.

ಅರ್ಜಿ ಪರಿಶೀಲಿಸುವುದು ಹೇಗೆ?

  • https://pmkisan.gov.in ಇದೇ ವೆಬ್ ಸೈಟ್ ಗೆ ಹೋಗಿ ಫಾರ್ಮರ್ಸ್ ಕಾರ್ನರ್ ಎನ್ನುವ ವಿಭಾಗದ ಅಡಿಯಲ್ಲಿ ಫಲಾನುಭವಿ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಬೇಕು. ಈಗ ಡೇಟಾ ಪಡೆಯಿರಿ (Get Data) ಎನ್ನುವ ಆಯ್ಕೆಯನ್ನು ಒತ್ತಿ.
  • ಈಗ ನಿಮ್ಮ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸ್ಟೇಟಸ್ ಪರದೆಯ ಮೇಲೆ ಕಾಣಿಸುತ್ತದೆ. ಈ ಯೋಜನೆಯ ಅಡಿಯಲ್ಲಿ 80 ದಶಲಕ್ಷಕ್ಕೂ ಹೆಚ್ಚಿನ ರೈತರು ಪ್ರಯೋಜನ ಪಡೆದುಕೊಳ್ಳುತ್ತಿದ್ದು 15ನೇ ಕಂತಿನಲ್ಲಿ 18,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. 14 ಕಂತುಗಳಲ್ಲಿ 2.62 ಲಕ್ಷ ಕೋಟಿ ರೂಪಾಯಿಗಳನ್ನು ವಿತರಣೆ ಮಾಡಲಾಗಿದೆ.

advertisement

Leave A Reply

Your email address will not be published.