Karnataka Times
Trending Stories, Viral News, Gossips & Everything in Kannada

Indian Railways: ಏಪ್ರಿಲ್ 1 ರಿಂದ ರೈಲ್ವೆಯಲ್ಲಿ ಹೊಸ ಬದಲಾವಣೆ, ಎಲ್ಲಾ ಪ್ರಯಾಣಿಕರಿಗೆ ಸೂಚನೆ!

advertisement

ರೈಲ್ವೆ ಪ್ರಯಾಣಿಕರಿಗೆ ಸಾಮಾನ್ಯವಾಗಿ ಇಷ್ಟು ದಿನವೂ ಕೂಡ ದಂಡ ವಿಧಿಸಿದರೆ ಹಣವನ್ನೆ ಪಾವತಿ ಮಾಡಬೇಕಾದಂತ ನಿಯಮ ಇತ್ತು. ಆದ್ದರಿಂದ ಪ್ರಯಾಣಿಕರ ಬಳಿ ಅಕ್ರಮವಾಗಿ ಸುಲಿಗೆ ನಡೆಯುತ್ತಿತ್ತು. ಇನ್ನು ಪ್ರಯಾಣಿಕರಿಂದ ಅಕ್ರಮ ಸುಲಿಗೆ ದೂರುಗಳನ್ನು ತಡೆಯಲು ಏಪ್ರಿಲ್ 1 ರಿಂದ ವಿಶೇಷ ಉಪಕ್ರಮವನ್ನು ಪ್ರಾರಂಭಿಸಲು ರೈಲ್ವೆ (Indian Railways) ನಿರ್ಧರಿಸಿದೆ. ಈ ನಿರ್ಧಾರದಿಂದ ರೈಲ್ವೆ ಪ್ರಯಾಣ ಇನ್ಮುಂದೆ ಮತ್ತಷ್ಟು ಸುಗಮವಾಗಲಿದೆ. ಇನ್ನು ನಿರ್ದೇಶನದಂತೆ ಕ್ಯೂಆರ್ ಕೋಡ್ ಸ್ಕ್ಯಾನ್ (QR Code Scan) ಮಾಡುವ ಮೂಲಕ ದಂಡವನ್ನು ಪಾವತಿಸಬಹುದು.

ರೈಲ್ವೆಯಲ್ಲಿ QR Code Scan ಇಂದ ಆಗುವ ಪ್ರಯೋಜನಗಳು ಏನೆಂದು ತಿಳಿದುಕೊಳ್ಳೋಣ:

 

Image Source: Zee News

 

advertisement

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನೊಂದಿಗೆ ಸಾಗಲು, ಭಾರತವು ಅಭಿವೃದ್ಧಿ ಹೊಂದುವ ಹಲವಾರು ಯೋಜನೆಗಳಿಂದ ತಂತ್ರಜ್ಞಾನದ ಕೈ ಹಿಡಿದು ಡಿಜಿಟಲ್ ಪೇಮೆಂಟ್ (Digital Payment) ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಸಾಧಿಸುತ್ತಾ ಬಂದಿದೆ. ಇನ್ನು ಇದೀಗ ಈ ಡಿಜಿಟಲ್ ಪೇಮೆಂಟ್ ಎಂಬ ತಂತ್ರಜ್ಞಾನವನ್ನು, ಇದೀಗ ರೈಲ್ವೆ ಸಂಸ್ಥೆಯು ಕೂಡ ಅಳವಡಿಸಿಕೊಂಡಿದೆ. ಮತ್ತು ಅದನ್ನು ಏಪ್ರಿಲ್ ಒಂದರಿಂದ ಜಾರಿಗೆ ತರಲಾಗುತ್ತಿದೆ. ಇದರಲ್ಲಿ, Paytm, Google Pay ಮತ್ತು PhonePe ನಂತಹ ಪ್ರಮುಖ UPI ವಿಧಾನಗಳನ್ನು ಅನುಸರಿಸಬಹುದಾಗಿದೆ.

ಇದರಿಂದ ಒಂದೆಡೆ ಪ್ರಯಾಣಿಕರಿಗೆ ಹಣ ಪಾವತಿಗೆ ಅನುಕೂಲವಾದರೆ ಮತ್ತೊಂದೆಡೆ ರೈಲ್ವೇಯಲ್ಲಿ ಪ್ರಯಾಣಿಕರಿಂದ ಅಕ್ರಮ ಸುಲಿಗೆ ಮಾಡುತ್ತಾ ಇದ್ದಾರೆ ಎಂಬ ಆರೋಪಕ್ಕೂ ಕಡಿವಾಣ ಬೀಳಲಿದೆ. ಇದು ಮಾತ್ರವಲ್ಲದೆ ಡಿಜಿಟಲ್ ಪೇಮೆಂಟ್ (Digital Payment) ಕಾರ್ಯವನ್ನು ಉತ್ತೇಜಿಸಲು, ರೈಲ್ವೆಯು ಆಹಾರದಿಂದ ಮೊದಲಾಗಿ ಟಿಕೆಟ್‌ಗಳು, ದಂಡಗಳು ಮತ್ತು ಪಾರ್ಕಿಂಗ್‌ವರೆಗೆ ಎಲ್ಲೆಡೆ ಕ್ಯೂಆರ್ ಕೋಡ್ ಸ್ಕ್ಯಾನರ್ (QR Code Scanner) ಸೌಲಭ್ಯವನ್ನು ಪ್ರಾರಂಭಿಸುತ್ತಿದೆ. ರೈಲ್ವೆಯ ಈ ಹೊಸ ಸೇವೆಯಲ್ಲಿ, ಜನರು ರೈಲ್ವೆ ನಿಲ್ದಾಣದಲ್ಲಿರುವ ಟಿಕೆಟ್ ಕೌಂಟರ್‌ನಲ್ಲಿ QR Code ಪೇಮೆಂಟ್ ಮೂಲಕ ಸಾಮಾನ್ಯ ಟಿಕೆಟ್‌ಗಳನ್ನು ಖರೀದಿಸಲು ಸಹ ಸಾಧ್ಯವಾಗುತ್ತದೆ.

ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು ಭಾರತೀಯ ರೈಲ್ವೇ ಮುಂದಿನ ತಿಂಗಳ ಅಂದರೆ ಏಪ್ರಿಲ್ 1 ರಿಂದ ಪಾವತಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಿದೆ. ಇದಲ್ಲದೇ ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರು ಸಿಕ್ಕಿಬಿದ್ದರೆ, ಅಂತವರು ದಂಡವನ್ನೂ ಪಾವತಿಸಿ ಜೈಲು ಪಾಲಾಗುವುದನ್ನು ಕೂಡ ತಪ್ಪಿಸಬಹುದಾಗಿದೆ. ಮತ್ತು ಇದಕ್ಕಾಗಿ ರೈಲ್ವೇ ಸಂಸ್ಥೆಯು ತಪಾಸಣಾ ಸಿಬ್ಬಂದಿಗೆ ಟರ್ಮಿನಲ್ ಯಂತ್ರವನ್ನು ನೀಡಲಾಗಿದೆ. ಇನ್ನು ಈ ಯಂತ್ರಗಳ ಮೂಲಕ, ಟಿಟಿ ಯಾವುದೇ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

advertisement

Leave A Reply

Your email address will not be published.