Karnataka Times
Trending Stories, Viral News, Gossips & Everything in Kannada

DoT: ಎಲ್ಲಾ ಮೊಬೈಲ್ ಸಿಮ್ ಕಂಪನಿಗಳಿಗೆ ಬೆಳ್ಳಂಬೆಳಿಗ್ಗೆ ಸರ್ಕಾರದ ಹೊಸ ಆದೇಶ! ಮಹತ್ವದ ನಿರ್ಧಾರ

advertisement

ಕರೆ ಫಾರ್ವರ್ಡ್ ಮಾಡುವಿಕೆ, ಅಥವಾ ಕರೆ ಡೈವರ್ಶನ್, ಇದು ಎಲ್ಲಾ ಟೆಲಿಫೋನ್ ಸ್ವಿಚಿಂಗ್ ಸಿಸ್ಟಮ್‌ಗಳ ಟೆಲಿಫೋನ್ ವೈಶಿಷ್ಟ್ಯವಾಗಿದ್ದು, ಇದು ದೂರವಾಣಿ ಕರೆಯನ್ನು ಮತ್ತೊಂದು ಸ್ಥಾನಕ್ಕೆ ಮರುನಿರ್ದೇಶಿಸುತ್ತದೆ. ಅಂದರೆ ಕರೆ ಫಾರ್ವರ್ಡ್ ಮಾಡುವಿಕೆಯು ಸಾಮಾನ್ಯವಾಗಿ ಒಳಬರುವ ಕರೆಗಳನ್ನು (Incoming Calls) ಯಾವುದೇ ಇತರ ದೇಶೀಯ ದೂರವಾಣಿ (Domestic Phone Number) ಸಂಖ್ಯೆಗೆ ಮರುನಿರ್ದೇಶಿಸುತ್ತದೆ. ಆದರೆ ಫಾರ್ವರ್ಡ್ ಮಾಡಿದ ಲೈನ್‌ನ ಮಾಲೀಕರು ಫಾರ್ವರ್ಡ್ ಮಾಡಿದ ಕರೆಗಳಿಗೆ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಡಿಪಾರ್ಟ್ಮೆಂಟ್ ಆಫ್ ಟೆಲಿಕಾಮ್ಯುನಿಕೇಶನ್ (DoT) ಇಂದ ಕಾಲ್ ಫಾರ್ವರ್ಡ್ ಅನ್ನು ಮುಚ್ಚಲು ಕಾರಣ ಮತ್ತು ಉದ್ದೇಶ ಏನೆಂದು ತಿಳಿದುಕೊಳ್ಳೋಣ:

 

Image Source: ET Government

 

ಇನ್ನು ಡಿಪಾರ್ಟ್ಮೆಂಟ್ ಆಫ್ ಟೆಲಿಕಾಮ್ಯುನಿಕೇಶನ್ (Department of Telecommunications) ಸಂಸ್ಥೆಯು ಹೊರಡಿಸಿದ ಮಾರ್ಚ್ 28 ರ ಆದೇಶದಲ್ಲಿ, ಕೆಲವು ಅಸಮರ್ಪಕವಾಗಿರುವಂತಹ ಚಟುವಟಿಕೆಗಳಿಗೆ SSSD (Unstructured Supplementary Service Data) ಆಧಾರಿತ ಕರೆ ಫಾರ್ವರ್ಡ್ ಸೌಲಭ್ಯವನ್ನು ದುರುಪಯೋಗ ಮಾಡುತ್ತಾ ಇರುವುದು ಗಮನಕ್ಕೆ ಬಂದಿದೆ ಎಂಬುದನ್ನು ತಿಳಿಸಿದೆ. ಮತ್ತು ಇದಕ್ಕೆ ಸೂಕ್ತ ಕ್ರಮಗಳನ್ನು ಜರುಗಿಸುವಂತಹ ಕಾರ್ಯಗಳಿಗೆ ಇಲಾಖೆಯು ಮುಂದಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 15 ರಿಂದ USSD ಆಧಾರಿತ ಕರೆ ಫಾರ್ವರ್ಡ್ (Call Forwarding) ಮಾಡುವುದನ್ನು ನಿಲ್ಲಿಸುವಂತೆ ದೂರಸಂಪರ್ಕ ಇಲಾಖೆ (DoT) ಟೆಲಿಕಾಂ ಕಂಪನಿಗಳನ್ನು ಕೇಳಿದೆ.

advertisement

ಈ ನಿಟ್ಟಿನಲ್ಲಿ, ಸಕ್ಷಮ ಪ್ರಾಧಿಕಾರವು ಅಸ್ತಿತ್ವದಲ್ಲಿರುವ ಎಲ್ಲಾ USSD-ಆಧಾರಿತ ಕರೆ ಫಾರ್ವರ್ಡ್ ಸೇವೆಗಳನ್ನು ಏಪ್ರಿಲ್ 15, 2024 ರಿಂದ ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಮತ್ತು USSD ಆಧಾರಿತ ಕರೆ ಫಾರ್ವರ್ಡ್ ಸೇವೆಯನ್ನು ಬಳಸುತ್ತಿದ್ದಂತಹ ಎಲ್ಲಾ ಅಸ್ತಿತ್ವದಲ್ಲಿರುವ ಗ್ರಾಹಕರು ಪರ್ಯಾಯ ವಿಧಾನಗಳ ಮೂಲಕ ಮತ್ತೆ ಕರೆ ಫಾರ್ವರ್ಡ್ ಮಾಡುವ ಸೇವೆಗಳನ್ನು ಸಕ್ರಿಯಗೊಳಿಸಲು ಟೆಲಿಕಾಂ ಇಲಾಖೆಯನ್ನು ಕೇಳಬಹುದು ಎಂದು ತಿಳಿಸಲಾಗಿದೆ.

 

Image Source: TelecomTalk

 

ಮೊಬೈಲ್ ಚಂದಾದಾರರು ತಮ್ಮ ಫೋನ್ ನಲ್ಲಿ ಯಾವುದೇ ಯೂಸರ್ ಕೋಡ್ (User Code) ಅನ್ನು ಡಯಲ್ ಮಾಡುವ ಮೂಲಕ USSD ಸೇವೆಯನ್ನು ಪ್ರವೇಶಿಸುತ್ತಾರೆ. ಇದರಲ್ಲಿ IMEI ಸಂಖ್ಯೆ ಮತ್ತು ಮೊಬೈಲ್ ಫೋನ್ ಬ್ಯಾಲೆನ್ಸ್ ಸೇರಿದಂತೆ ಹಲವು ಮಾಹಿತಿಯನ್ನು ಕಂಡುಹಿಡಿಯಲು ಈ ಸೇವೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದೀಗ ಕಾಲ್ ಫಾರ್ವರ್ಡ್ ಸೇವೆಯನ್ನು ಸ್ಥಗಿತಗೊಳಿಸಿದ ಕಾರಣ ಚಂದದಾರರು ಪರ್ಯಾಯ ವಿಧಾನಗಳ ಮೂಲಕ ಈ ಸೇವೆಗಳನ್ನು ಪುನರಾರಂಭಿಸಬಹುದು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಇದರ ಮೂಲ ಕಾರಣ ಏನು ಎಂದು ನೋಡಿದರೆ ಮೊಬೈಲ್ ಫೋನ್ ಮೂಲಕ ವಂಚನೆ ಮತ್ತು ಆನ್‌ಲೈನ್ ಅಪರಾಧಗಳಿಗೆ ಕಡಿವಾಣ ಹಾಕಲು ಈ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ ಸಂಸ್ಥೆಯು ತಿಳಿಸಿದೆ. ಆದ್ದರಿಂದ ಏಪ್ರಿಲ್ 15ರಿಂದ ಕಾಲ್ ಫಾರ್ವರ್ಡ್ ಮಾಡುವಂತಹ ಸೇವೆಯನ್ನು ಸ್ಥಗಿತಗೊಳಿಸುವಂತೆ ಮಿನಿಸ್ಟ್ರಿ ಆಫ್ ಟೆಲಿಕಾಮ್ಯೂನಿಕೇಶನ್ ಸಂಸ್ಥೆಯು ಮಿಕ್ಕ ಇಲಾಖೆಗಳಿಗೆ ಆದೇಶ ಹೊರಡಿಸಿದೆ.

advertisement

Leave A Reply

Your email address will not be published.