Karnataka Times
Trending Stories, Viral News, Gossips & Everything in Kannada

Best Selling Car 2024: 2024ರಲ್ಲಿ ಭರ್ಜರಿ ಮಾರಾಟ ಆಗುತ್ತಿದೆ ಬಡವರ ಈ ಕಾರು! ಕಡಿಮೆ ಬೆಲೆ 5 ಸ್ಟಾರ್ ಸೇಫ್ಟಿ.

advertisement

ಟಾಟಾ ಮೋಟಾರ್ಸ್ ಕಂಪನಿ 2024 ಫೆಬ್ರವರಿ ತಿಂಗಳಿನಲ್ಲಿ ಮಾರಾಟ (Best Selling Car 2024) ಮಾಡಿದ ತನ್ನ ಕಾರ್ ಯೂನಿಟ್ ಗಳ ಬ್ರೇಕ್ ಡೇಟಾ ಬಿಡುಗಡೆ ಮಾಡಿದೆ. ದಿನದಿಂದ ದಿನಕ್ಕೆ ಟಾಟಾ ಮೋಟಾರ್ಸ್ ಕಾರ್ ಗಳು ಹೆಚ್ಚು ಸೇಲ್ ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಾರ್ಷಿಕವಾಗಿ 19% ನಷ್ಟು ಹೆಚ್ಚು ಕಾರುಗಳ ಮಾರಾಟ ಮಾಡಿದೆ ಎನ್ನಬಹುದು.

ಟಾಟಾ ಮೋಟರ್ಸ್ ಹೆಚ್ಚಿದ ಕಾರುಗಳ ಮಾರಾಟ!

ಟಾಟಾ ಮೋಟಾರ್ಸ್ ನ ಟಾಟಾ ಪಂಚ್ (Tata Punch), ನೆಕ್ಸಾನ್ (Tata Nexon) ಮೊದಲಾದ ಕಾರುಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸಿವೆ. ಸುಮಾರು 1700 ಯೂನಿಟ್ ಗಳಷ್ಟು ಹೆಚ್ಚಿಗೆ ಮಾರಾಟವನ್ನು ಪ್ರತಿ ತಿಂಗಳು ಕಂಡಿದೆ. ಇನ್ನು ಕಂಪನಿಯ ಪೋರ್ಟ್ ಪೋಲಿಯೋ ದಲ್ಲಿ 4 ಎಲೆಕ್ಟ್ರಿಕ್ ಮಾದರಿಯೂ ಕೂಡ ಸೇರ್ಪಡೆಗೊಂಡಿದೆ ಅದರಲ್ಲಿಯೂ ಮೂರು ಅಗ್ರಸ್ಥಾನದಲ್ಲಿ ಉಳಿದುಕೊಂಡಿದೆ ಎನ್ನಬಹುದು.

Image Source: Tata Motors

ಯಾವ ಕಾರು ಹೆಚ್ಚು ಮಾರಾಟವಾಗಿದೆ ಗೊತ್ತಾ?

advertisement

ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ಪಂಚ್ (Tata Punch)ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಮಾರುಕಟ್ಟೆಯ ಸುಮಾರು 36% ನಷ್ಟು ಪಾಲನ್ನು ಒಂದೇ ಕಾರು ಹೊಂದಿದೆ ಅಂದ್ರೆ ಟಾಟಾ ಪಂಚ್ ನ ಬೇಡಿಕೆ ಎಷ್ಟಿರಬಹುದು ಅಂತ ನಿಮಗೆ ಅರ್ಥವಾಗುತ್ತೆ.

Image Source: Tata Motors

ಫೆಬ್ರವರಿ ತಿಂಗಳ ಮಾರಾಟ ಎಷ್ಟು?

  • ಫೆಬ್ರವರಿ 2024, ಟಾಟಾ ಪಂಚ್ ಮಾರಾಟವನ್ನು ನೋಡಿದರೆ ಒಟ್ಟಿಗೆ 18,438 ಯೂನಿಟ್ ಮಾರಾಟವಾಗಿದೆ. 2023ರಲ್ಲಿ ಇದೇ ಫೆಬ್ರವರಿ ತಿಂಗಳಿನಲ್ಲಿ 11,169 ಯೂನಿಟ್ ಮಾರಾಟವಾಗಿತ್ತು. ಅಂದರೆ ಸುಮಾರು 2269 ಹೆಚ್ಚು ಯೂನಿಟ್ ಗಳು ಈ ವರ್ಷ ಮಾರಾಟವಾಗಿದೆ. ಅಲ್ಲಿಗೆ 65.8% ನಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ ಎನ್ನಬಹುದು.
  • ಇನ್ನು, ನೆಕ್ಸಾನ್ ಮಾರಾಟದ ಅಂಕಿ ಅಂಶ ನೋಡುವುದಾದರೆ ಫೆಬ್ರವರಿ 2023ರಲ್ಲಿ 13,914 ಯೂನಿಟ್ ಮಾರಾಟವಾಗಿತ್ತು. ಅದೇ ಫೆಬ್ರುವರಿ 2024ರ ವೇಳೆಗೆ 418 ಯೂನಿಟ್ ಮಾರಾಟ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ 3.46% ನಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಅಂದರೆ ಫೆಬ್ರವರಿ 2024ರಲ್ಲಿ ಮಾರಾಟವಾಗಿರುವ ಯೂನಿಟ್ ಸಂಖ್ಯೆ 14395.
  • ಟಾಟಾ ಟಿಯಾಗೋ (Tata Tiago)ಮಾರಾಟ ಸಂಖ್ಯೆ – 2023 ಫೆಬ್ರವರಿ ತಿಂಗಳಿನಲ್ಲಿ 7453 ಘಟಕಗಳನ್ನು ಟಾಟಾ ಕಂಪನಿ ಮಾರಾಟ ಮಾಡಿದ್ದು. ಇದೀಗ 2024 ಫೆಬ್ರುವರಿ ತಿಂಗಳಿನಲ್ಲಿ 6947 ಯೂನಿಟ್ ಮಾರಾಟವಾಗಿದೆ. ಅಂದರೆ 510 ಯೂನಿಟ್ ಗಳಷ್ಟು ಕಡಿಮೆ ಮಾರಾಟವಾಗಿದ್ದು ಮಾರುಕಟ್ಟೆಯಲ್ಲಿ ವಾರ್ಷಿಕವಾಗಿ 6.84% ಕುಸಿತ ಕಂಡಿದೆ ಎನ್ನಬಹುದು.
  • ಇನ್ನು ಟಾಟಾದ ಅಲ್ಟ್ರೋಜ್, 2023 ಫೆಬ್ರವರಿ ತಿಂಗಳಿನಲ್ಲಿ 3955 ಯೂನಿಟ್ ಮಾರಾಟವಾಗಿತ್ತು. ಇದೀಗ 613 ಹೆಚ್ಚು ಘಟಕ ಮಾರಾಟವಾಗಿದೆ ಫೆಬ್ರುವರಿ 2024ರಲ್ಲಿ. ಅಂದ್ರೆ ವಾರ್ಷಿಕವಾಗಿ 15.50% ನಷ್ಟು ಬೆಳವಣಿಗೆ ಕಂಡಿದೆ.
  • ಟಾಟಾದ ಸಫಾರಿ ಮಾರಾಟ ಸಂಖ್ಯೆಯನ್ನು ನೋಡುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ 111.50% ಅಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ ಎನ್ನಬಹುದು. ಅಂದ್ರೆ ಫೆಬ್ರವರಿ 2023ರಲ್ಲಿ ಕೇವಲ 252 ಘಟಕಗಳು ಮಾರಾಟವಾಗಿದ್ದವು. ಅದೇ ಈ ವರ್ಷ 2648 ಯೂನಿಟ್ ಮಾರಾಟವಾಗಿದೆ.
  • ಟಾಟಾ ಹ್ಯಾರಿಯರ್ (Tata Harrier) ಕಾರು, ಫೆಬ್ರವರಿ 2023ರಲ್ಲಿ 2054 ಘಟಕಗಳಷ್ಟು ಮಾರಾಟವಾಗಿತ್ತು. ಈ ವರ್ಷ ಫೆ. ನಲ್ಲಿ 2562 ಯೂನಿಟ್ ಮಾರಾಟವಾಗಿದೆ.
  • ಟಾಟಾ ಟಿಗೋರ್ ಕಾರು ಕಳೆದ ವರ್ಷಕ್ಕೆ ಹೋಲಿಸಿದರೆ 44.13% ನಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಸುಮಾರು 1352 ಹೆಚ್ಚು ಯೂನಿಟ್ ಮಾರಾಟವಾಗಿದೆ.

ಒಟ್ಟಾರೆಯಾಗಿ ಟಾಟಾ ಮೋಟಾರ್ಸ್ (Tata Motors) ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ 42,865 ಯೂನಿಟ್ ಗಳನ್ನು ಮಾರಾಟ ಮಾಡಿತ್ತು. 2024 ಫೆಬ್ರುವರಿ ತಿಂಗಳಿನಲ್ಲಿ ಒಟ್ಟು 51,270 ಯೂನಿಟ್ ಮಾರಾಟವಾಗಿದೆ. ಅಂದ್ರೆ 8405 ಹೆಚ್ಚು ಯೂನಿಟ್ ಗಳು ಈ ವರ್ಷ ಮಾರಾಟ ಕಂಡಿವೆ. ಅಲ್ಲಿಗೆ ಟಾಟಾ ಮೋಟಾರ್ಸ್ ತನ್ನ ಕಾರುಗಳ ಮಾರಾಟದಲ್ಲಿ ವಾರ್ಷಿಕವಾಗಿ 19.61% ನಷ್ಟು ಬೆಳವಣಿಗೆ ಕಂಡಿದೆ ಎನ್ನಬಹುದು.

advertisement

Leave A Reply

Your email address will not be published.