Karnataka Times
Trending Stories, Viral News, Gossips & Everything in Kannada

Bank FD: 9.60% ವರೆಗೆ FD ಮೇಲೆ ರಿಟರ್ನ್ಸ್ ಘೋಷಣೆ ಮಾಡಿದ ಈ 5 ಬ್ಯಾಂಕುಗಳು! ಖಾತೆ ಇದ್ದವರಿಗೆ ಸಿಹಿಸುದ್ದಿ

advertisement

FD interest rate: ಸ್ನೇಹಿತರೆ ವಾಸ್ತವವಾಗಿ ಫಿಕ್ಸೆಡ್ ಡಿಪೋಸಿಟ್(Fixed deposit) ನಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಗ್ರಾಹಕರು ಬಂಪರ್ ರಿಟರ್ನ್ಸ್ ಅನ್ನು ಪಡೆಯುತ್ತಾರೆ. ಹೀಗೆ ನೀವು ಕೂಡ ಯಾವುದೇ ಅಪಾಯವಿಲ್ಲದೆ ಹಣವನ್ನು ಹೂಡಿಕೆ ಮಾಡಿ ಅದರಿಂದ ಹೆಚ್ಚು ಆದಾಯ ಬರುವಂತಹ ಎಫ್ಡಿಯನ್ನು ಎದುರು ನೋಡುತ್ತಿದ್ದರೆ, ಇದಕ್ಕಿಂತ ಉತ್ತಮವಾದ ಆಯ್ಕೆ ಮತ್ತೊಂದು ಸಿಗುವುದಿಲ್ಲ.

ಹೌದು ಗೆಳೆಯರೇ ಕಳೆದ ಕೆಲವು ವರ್ಷಗಳಿಂದ ದೊಡ್ಡ ದೊಡ್ಡ ಬ್ಯಾಂಕ್ ಗಳಲ್ಲಿ ಮಾತ್ರವಲ್ಲ ಸಣ್ಣಪುಟ್ಟ ಹಣಕಾಸು ಬ್ಯಾಂಕಿನಲ್ಲಿ ಕೂಡ ಫಿಕ್ಸೆಡ್ ಡಿಪೋಸಿಟ್(Fixed deposit) ಠೇವಣಿಯನ್ನು ಪ್ರಾರಂಭ ಮಾಡಿ ಬಂಪರ್ ಆಫರ್ ನೀಡುತ್ತಿದ್ದಾರೆ. ಅಂತಹ ಐದು ಸಣ್ಣ ಬ್ಯಾಂಕ್ ವಿವರ ಹಾಗೂ ಅಲ್ಲಿ ನಿಮ್ಮ ಹೂಡಿಕೆ ಹಣಕ್ಕೆ ನೀಡುತ್ತಿರುವಂತಹ ಬಡ್ಡಿ ದರ ಎಷ್ಟು? ಎಂಬ ಸಂಪೂರ್ಣ ವಿವರವನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಯೋಣ.

ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್

ನೀವೇನಾದರೂ 2 ರಿಂದ 3 ವರ್ಷದವರೆಗೆ ನಿಮ್ಮ ಹಣವನ್ನು ಎಫ್ ಡಿ ಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದಾರೆ, ಅದಕ್ಕೆ ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್(ESAF Small finance bank) ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇಲ್ಲಿ ಬ್ಯಾಂಕ್ ತಮ್ಮ ಗ್ರಾಹಕರಿಗೆ 8.50% ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ 9% ಬಡ್ಡಿ ದರವನ್ನು ನೀಡುವ ಮೂಲಕ ನಿಮ್ಮ ಹೂಡಿಕೆಗೆ ಅತ್ಯುತ್ತಮ ಆದಾಯವನ್ನು ಕಲ್ಪಿಸಿಕೊಡುತ್ತಿದೆ.

Image Source: DNA India

ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ(Equitas finance Bank) ನೀವೇನಾದರೂ 888 ದಿನಗಳ ಎಫ್ ಡಿ ಪಡೆದು ನಿಮ್ಮ ಬಳಿ ಇರುವಂತಹ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿಮ್ಮ ಹಣಕ್ಕೆ 888 ದಿನಗಳವರೆಗೂ ಗರಿಷ್ಠ 8.50% ಹಾಗೂ ಹಿರಿಯನಾಗರಿಕರಿಗೆ 9% ನಷ್ಟು ಆದಾಯ ಲಭಿಸಲಿದೆ.

advertisement

ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಈ ಸಣ್ಣ ಹಣಕಾಸು ಬ್ಯಾಂಕ್ ನಲ್ಲಿ ನಿಮ್ಮ ಹಣವನ್ನು 1000 ದಿನಗಳವರೆಗೆ ಹೂಡಿಕೆ ಮಾಡಿದ್ದಲ್ಲಿ ಬ್ಯಾಂಕ್ ವತಿಯಿಂದ ನಿಮ್ಮ ಹೂಡಿಕೆಗೆ ಬಂಪರ್ ಆಫರ್ ದೊರೆಕಲಿದೆ. ಹೌದು ಸಾರ್ವಜನಿಕ ನಾಗರಿಕರಿಗೆ 8.51% ಬಡ್ಡಿ ನೀಡುತ್ತಿದೆ ಇದೆ ಅವಧಿಗೆ ಹಿರಿಯ ನಾಗರಿಕರು ಹಣವನ್ನು ಹೂಡಿಕೆ ಮಾಡಿದರೆ ಶೇಕಡ 9.11% ಬಡ್ಡಿ ಹಣವನ್ನು ಪಡೆಯಬಹುದು.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್

1೦೦1 ದಿನಗಳವರೆಗೂ ಎಫ್ ಡಿ ಅವಧಿಯನ್ನು ನೀಡುತ್ತಿರುವಂತಹ ಈ ಬ್ಯಾಂಕ್ ನಿಮ್ಮ ಹೂಡಿಕೆಗೆ ಅತ್ಯುತ್ತಮ ಆದಾಯವನ್ನು ನೀಡುವ ಮೂಲಕ ನಿಮ್ಮ ಉಳಿತಾಯಕ್ಕೆ ಹೆಚ್ಚಿನ ಲಾಭವನ್ನು ಒದಗಿಸಿಕೊಡುತ್ತಿದೆ. ಸಾರ್ವಜನಿಕ ನಾಗರಿಕರ ಎಫ್‌ಡಿ ಹಣದ ಮೇಲೆ 9% ಬಡ್ಡಿಯನ್ನು ನೀಡುತ್ತಿರುವ ಯುನಿಟಿ ಸ್ಮಾಲ್ ಫೈನಾನ್ಸ್ ಹಿರಿಯ ನಾಗರಿಕರ ಹಣಕ್ಕೆ ಅದೇ ಅವಧಿಯಲ್ಲಿ ಗರಿಷ್ಠ 9.50% ನಷ್ಟು ಬಡ್ಡಿಯನ್ನು ನೀಡುತ್ತಿದೆ.

Image Source: DNA India

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್

ನಿಮ್ಮ ಉಳಿತಾಯದ ಹಣವನ್ನು ಬರೋಬ್ಬರಿ 5 ವರ್ಷಗಳ ಜೋಪಾನವಾಗಿ ಇಡಲು ಸೂರ್ಯೋದಯ ಸಣ್ಣ ಹಣಕಾಸಿನ ಬ್ಯಾಂಕ್ನಲ್ಲಿ ಫಿಕ್ಸಡ್ ಡಿಪೋಸಿಟ್(Fixed deposit) ಪಡೆದರೆ ಸಾರ್ವಜನಿಕ ನಾಗರಿಕರಿಗೆ ನಿಮ್ಮ ಉಳಿತಾಯದ ಮೇಲೆ ಐದು ವರ್ಷಗಳ ಅವಧಿಯಲ್ಲಿ ಶೇಕಡಾ 9.10% ನಷ್ಟು ಬಡ್ಡಿ ದೊರೆಯುತ್ತಿದೆ. ಅದರಂತೆ ಹಿರಿಯ ನಾಗರಿಕರಿಗೆ 0.5% ಹೆಚ್ಚುವರಿ ಅಂದರೆ 9.60% ಎಷ್ಟು ಹೆಚ್ಚಿನ ಆದಾಯ ನೀಡುತ್ತಿದ್ದಾರೆ.

advertisement

Leave A Reply

Your email address will not be published.