Karnataka Times
Trending Stories, Viral News, Gossips & Everything in Kannada

Yashaswini Scheme: ಆಸ್ಪತ್ರೆ ಬಿಲ್ ಕಟ್ಟಲು ಕಷ್ಟವಾಗಿರುವ ಜನರಿಗೆ ಬೆಳ್ಳಂಬೆಳಗ್ಗೆ ಇನ್ನೊಂದು ಸಿಹಿಸುದ್ದಿ

advertisement

ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತೊಂದು ಇದೆ. ಆರೋಗ್ಯ ರಕ್ಷಣೆ ಕಪಾಡಿಕೊಳ್ಳುವಿಕೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನಮ್ಮ ಆರೋಗ್ಯದ ರಕ್ಷಣೆ ಕೂಡ ನಮ್ಮ ಕೈಯಲ್ಲೆ ಇದೆ. ಇಂದು ಸಣ್ಣ ವಯಸ್ಸಿನಲ್ಲೆ ಬಿಪಿ,ಶುಗರ್ ಇತ್ಯಾದಿ ಖಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಬಡ ವರ್ಗದ ಜನತೆಗೆ ಸುಲಭವಾಗಿ ಆರೋಗ್ಯ ವಿಮೆ ಪಡೆದು ಕೊಳ್ಳಲು ಆಯುಷ್ಮಾನ್ ಜೊತೆಗೆ ಯಶಸ್ವಿನಿ ಕಾರ್ಡ್ ಕೂಡ ಜಾರಿಗೆ ತಂದಿದೆ.

ಯಾರಿಗೆ ಈ ಯೋಜನೆ?

ಬಡವರ್ಗದ ಜನತೆಗೆ ಅತಿ ಕಡಿಮೆ ವೆಚ್ಚದಲ್ಲಿ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.ಸಹಕಾರಿ ಸಂಘಗಳ ಸದಸ್ಯರಿಗಾಗಿ ಆರೋಗ್ಯ ಸೇವೆ ನೀಡಲು 2003 ರಲ್ಲಿ ಯಶಸ್ವಿನಿ ಯೋಜನೆ (Yashaswini Scheme) ಯನ್ನು ರಾಜ್ಯ ಸರ್ಕಾರ ಆರಂಭಿಸಿತ್ತು. ಈ ಯಶಸ್ವಿನಿ ಈ ಯೋಜನೆಯಲ್ಲಿ 823 ಬಗೆಯ ಶಸ್ತ್ರಚಿಕಿತ್ಸೆಗಳು ಕೂಡ ಒಳಗೊಂಡಿದೆ.

ನೋಂದಣಿ ಗೆ ಅವಧಿ ವಿಸ್ತರಣೆ

ಇದೀಗ ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆ (Yashaswini Scheme) ಗೆ ಅರ್ಜಿ ಸಲ್ಲಿಕೆ ಮಾಡಲು ಅವಧಿ ವಿಸ್ತರಣೆ ಮಾಡಲಾಗಿದೆ. ನೋಂದಣಿಗಾಗಿ ಮಾರ್ಚ್ 31ರವರೆಗೆ ಅವಧಿ ವಿಸ್ತರಣೆ ಮಾಡಿ ಆದೇಶ ಕೂಡ ಹೊರಡಿಸಲಾಗಿದೆ.ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಮೂಲಕ ಹೊಸ ಸದಸ್ಯರನ್ನು ನೋಂದಾಯಿಸಲು ಸಮಯಾವಕಾಶವನ್ನು 01-01-2024 ರಿಂದ 28-02-2024 ರವರೆಗೆ ಮುಂದುವರೆಸಲಾಗಿತ್ತು ಎನ್ನಲಾಗಿತ್ತು. ಇದೀಗ ಮಾರ್ಚ್ 31 ವರೆಗೆ ವಿಸ್ತರಣೆ ಮಾಡಲಾಗಿದೆ.

advertisement

ಗ್ರಾಮೀಣ ಜನತೆಗೆ ಸಹಕಾರಿ

ಈ ಯೋಜನೆಯು ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ಯಾಗಿದ್ದು ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಸಹಕಾರಿ ಸಂಘಗಳ ಸದಸ್ಯತ್ವವನ್ನು ಹೊಂದಿರುವ ಕುಟುಂಬ ಐದು ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ನಗದು ರಹಿತ ಚಿಕಿತ್ಸೆಗಾಗಿ ಸರ್ಕಾರದಿಂದ ಪಡೆದುಕೊಳ್ಳಬಹುದು.

ಮಿತಿ ಇದೆಯೇ?

ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿ ಆಸ್ಪತ್ರೆಗೆ ಸೇರಿದ್ರೆ ರೂ. 1.25 ಗರಿಷ್ಠ ಮಿತಿಯಲ್ಲಿ ಚಿಕಿತ್ಸೆ ಪಡೆಯಬಹುದು. ಅದೇ ವರ್ಷದಲ್ಲಿ ಆ ವ್ಯಕ್ತಿ ಅನೇಕ ಬಾರಿ ಶಸ್ತ್ರ ಚಿಕಿತ್ಸೆ ಪಡೆಯುವ ಪ್ರಕರಣಗಳಲ್ಲಿ ಗರಿಷ್ಠ ಮಿತಿ 2 ಲಕ್ಷದವರೆಗೆ ಚಿಕಿತ್ಸೆ ಪಡೆಯಲು ಕೂಡ ಅವಕಾಶ ಇದೆ.

ಪಾವತಿ ಮಾಡಬೇಕು

ಯಶಸ್ವಿನಿ ಯೋಜನೆ (Yashaswini Scheme) ಗೆ ಸಹಕಾರ ಸಂಘಗಳ ಮತ್ತು ಗ್ರಾಮಾಂತರ ಪ್ರದೇಶಗಳ ಸದಸ್ಯರು 300 ರೂ., ನಗರ ಪ್ರದೇಶಗಳ ಸದಸ್ಯರು 710 ರೂ. ವಾರ್ಷಿಕ ಪಾವತಿ ಮಾಡಬೇಕಿದ್ದು ಪ್ರತಿ ವರ್ಷ ನವೀಕರಣ ಮಾಡಬೇಕು.

advertisement

Leave A Reply

Your email address will not be published.