Karnataka Times
Trending Stories, Viral News, Gossips & Everything in Kannada

KSRTC: ಫ್ರಿ ಬಸ್ ಕೊಟ್ಟ ಬಳಿಕ ಬೆಳ್ಳಂಬೆಳಗ್ಗೆ ಇನ್ನೊಂದು ಸಿಹಿಸುದ್ದಿ ಕೊಟ್ಟ KSRTC ಸಂಸ್ಥೆ

advertisement

ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ KSRTC ಬಸ್ ಗಳಿಗೆ ಅಧಿಕ ಮಾನ್ಯತೆ ದೊರೆಯುತ್ತಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದ ಕಾರಣ ಬಸ್ ಸಂಖ್ಯೆ ಕೂಡ ಹೆಚ್ಚಿಸಲಾಗುತ್ತಿದೆ. ರಾಜ್ಯಾದ್ಯಂತ ಜನ ಸೇವೆ ಗುರಿಯಾಗಿರಿಸಿದ್ದ ಸರಕಾರಿ ಸಾರಿಗೆಯಾದ ಕೆಎಸ್ ಆರ್ಟಿಸಿ ಬಸ್ ಸೇವೆಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಸರಕಾರಿ ಬಸ್ ಮಟ್ಟದಲ್ಲಿ ಕೆಎಸ್ ಆರ್ಟಿಸಿ ಒಂದು ಹಮ್ಮೆಯವಾಹನವಾಗಿದೆ. ಕೆಎಸ್ ಆರ್ ಟಿಸಿ ಸೇವೆ ಅತ್ಯುತ್ತಮವಾಗಿದ್ದು ಇದರ ಶ್ರಮಕ್ಕೆ ಇದೀಗ ಪ್ರತಿಫಲ ಸಿಗುತ್ತಿದೆ ಎನ್ನಬಹುದು.

ಪ್ರಶಸ್ತಿ ಗರಿಮೆ:

 

 

KSRTC ಬಸ್ ಗೆ ಈಗ 5 ಪ್ರಶಸ್ತಿಗಳು ಲಭಿಸಿದ್ದು ಭಾರತದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವತಿಯಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ‌. ಅದರಲ್ಲಿ ಕರ್ನಾಟಕದ ಹೆಮ್ಮೆಯ KSRTC ಬಸ್ ಕೂಡ ಪಾಲುದಾರಿಕೆ ಪಡೆದಿದೆ. KSRTC ಸೇರಿದಂತೆ ಕರ್ನಾಟಕದ ಒಟ್ಟು ನಾಲ್ಕು ನಿಗಮಕ್ಕೂ ಪ್ರಶಸ್ತಿ ನೀಡಲಾಗುತ್ತಿದೆ. ಹಾಗಾಗಿ KSRTC ಪಾಲಿಗೆ ಒಟ್ಟು 5ಪ್ರಶಸ್ತಿಗಳು ಸಿಕ್ಕಿದೆ ಎಂದು ಹೇಳಬಹುದು. ಈ ಬಗ್ಗೆ ಐದು ಪ್ರಶಸ್ತಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಹಿನ್ನೆಲೆ:

advertisement

2022-23ನೇ ಸಾಲಿನ ಒಟ್ಟು 5ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ಲಭಿಸಿದೆ. 1965ರಲ್ಲಿ ಒಕ್ಕೂಟದ ಸ್ಥಾಪನೆ ಅಷ್ಟಕ್ಕೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ವ್ಯಾಪ್ತಿಯಲ್ಲಿ ದೇಶದ 62ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವ ಹೊಂದಿವೆ. 1965ರಲ್ಲಿ ಆಗಸ್ಟ್ 13ರಂದು ದೇಶದ ರಾಜ್ಯ ಸಾರಿಗೆ ನಡುವೆ ಒಕ್ಕೂಟ ರೂಪುಗೊಂಡಿದ್ದು ದೇಶದ ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯಗಳ ನಿರ್ದೇಶನದ ಅನುಸಾರ ಕಾರ್ಯನಿರ್ವಹಿಸುತ್ತಲೇ ಇದೆ.

ಈ ಪ್ರಶಸ್ತಿಗೆ ಭಾಗೀನ:

KSRTC ಬ್ರ್ಯಾಂಡಿಂಗ್ ಮತ್ತು ವರ್ಚಸ್ ಅಭಿವೃದ್ಧಿ ಉಪಕ್ರಮ, ಸಿಬ್ಬಂದಿಯ ಕಲ್ಯಾಣಕ್ಕೆ ಕೈಗೊಂಡ ಹೊಸಯೋಜನೆಗಳಿಗಾಗಿ ಇದೀಗ ಪ್ರಶಸ್ತಿ ಲಭಿಸಿದೆ. BMTC ವಿದ್ಯುತ್ ಚಾಲಿತ ವಾಹನಗಳಾದ ಅಸ್ತ್ರ ಕಾರ್ಯಾಚರಣೆ ಉಪಕ್ರಮಕ್ಕೆ ಪ್ರಶಸ್ತಿ ಸಿಕ್ಕಿದೆ. ಕಲ್ಯಾಣ ರಸ್ತೆ ಸಾರಿಗೆ ಸಂಸ್ಥೆಗೆ ರಸ್ತೆ ಸಾರಿಗೆ ಸುರಕ್ಷತೆ ಅನುಷ್ಠಾನಕ್ಕೆ ಪ್ರಶಸ್ತಿ ಲಭಿಸಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಸ್ತೆ ಸಾರಿಗೆ ಸುರಕ್ಷತೆ ಪದ್ಧತಿ ಅನುಷ್ಠಾನಕ್ಕೆ ಅಂತಾ ಪ್ರಶಸ್ತಿ ಲಭಿಸಿದೆ.

ಯಾವಾಗ ಸಮಾರಂಭ ನಡೆಯಲಿದೆ:

KSRTC ಪ್ರಧಾನಿಸಲಾಗುವ ಪ್ರಶಸ್ತಿ ಪ್ರಧಾನ ಸಮಾರಂಭವು 2024ರ ಮಾರ್ಚ್ 15ರಂದು ಹೊಸದಿಲ್ಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದಲ್ಲಿ ನಡೆಯಲಿದೆ. KSRTC ಬಸ್ ಗೆ ಐದು ಪ್ರಶಸ್ತಿಗಳು ಲಭಿಸಿದ್ದು ರಾಜ್ಯಕ್ಕೆ ಒಂದು ಹೆಮ್ಮೆ ತಂದ ವಿಚಾರ ಎಂದು ಹೇಳಬಹುದು.

advertisement

Leave A Reply

Your email address will not be published.