Karnataka Times
Trending Stories, Viral News, Gossips & Everything in Kannada

Supreme Court: ಅಂತರ್ ಜಾತಿ ವಿವಾಹದಲ್ಲಿ ಮಗುವಿನ ಜಾತಿ ಯಾವುದಾಗುತ್ತೆ? ಸುಪ್ರಿಂ ಕೋರ್ಟ್ ಹೊಸ ತೀರ್ಪು

advertisement

ಇತ್ತೀಚಿನ ದಿನದಲ್ಲಿ ವಿವಾಹದ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಪ್ರೇಮ ವಿವಾಹಕ್ಕೆ ಪೋಷಕರು ಹೆಚ್ಚಾಗಿ ವಿರೋಧ ವ್ಯಕ್ಯ ಪಡಿಸುತ್ತಲೇ ಇರುತ್ತಾರೆ ಹಾಗಿದ್ದರೂ ಅಂತರ್ ಜಾತಿ ವಿವಾಹ (Inter Caste Marriage) ಆಗುವವರ ಪ್ರಮಾಣ ಅಧಿಕವಾಗೇ ಇದೆ. ಹಾಗಿದ್ದರೆ ಹಾಗೆ ವಿವಾಹ ವಾದವರ ಜಾತಿ ಯಾವುದು ಆಗುತ್ತೆ. ಅವರಿಗೆ ಮಕ್ಕಳಾದರೆ ಆ ಮಗುವಿನ ಜಾತಿ ಯಾವುದಾಗಲಿದೆ ಎಂಬ ಇತ್ಯಾದಿ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

ಮಗುವಿಗೆ ಒಂದು ಜಾತಿಯ ಹಂಚಿಕೆ ಎನ್ನುವುದು ಹುಟ್ಟಿನಿಂದಲೇ ಬರುವಂತದ್ದಾಗಿದೆ. ತಲತಲಾಂತರದಿಂದ ಒಂದೇ ಜಾತಿ ಇದ್ದರೆ ಆಗ ಅದೆ ಜಾತಿ ಆ ಮಗುವಿಗೂ ಸಿಗಲಿದೆ. ಆದರೆ ತಂದೆ ಒಂದು ಜಾತಿ ಹಾಗೂ ತಾಯಿ ಒಂದು ಜಾತಿ ಇದ್ದರೆ ಮಗುವಿಗೆ ಯಾವ ಜಾತಿ ಸಿಗಲಿದೆ ಎಂಬ ಪ್ರಶ್ನೆ ಬಹುತೇಕರಿಗೆ ಕಾಡುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ನಲ್ಲಿ ಆದೇಶ ನೀಡಲಾಗಿದೆ. ಅದೆ ಸುತ್ತೋಲೆಯನ್ನು ಇಂದು ರಾಷ್ಟ್ರೀಯ ಮಟ್ಟದಲ್ಲಿ ಪಾಲಿಸಲಾಗುತ್ತಿದೆ.

Supreme Court ತಿಳಿಸಿದ್ದೇನು?

 

 

advertisement

ಮಗುವಿನ ತಂದೆ ತಾಯಿ ಬೇರೆ ಬೇರೆ ಜಾತಿಯವರಾಗಿದ್ದರೂ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ದಂಪತಿಗೆ ಜನಿಸಿದ ಮಕ್ಕಳಿಗೆ ಯಾವಾಗಲೂ ತಂದೆಯ ಜಾತಿ ಸಿಗಲಿದೆ. ಹಾಗಾಗಿ ಮಗುವಿನ ವಿದ್ಯಾಭ್ಯಾಸ ಇತರ ಎಲ್ಲ ಕಾರ್ಯಕ್ಕೆ ಜಾತಿ ಕಾಲಂ ನೀಡುವಾಗ ತಂದೆಯ ಜಾತಿ ಆಧಾರವಾಗಿ ಹಾಕಬೇಕು. ಅದೇ ರೀತಿ ಜಾತಿ ಪ್ರಮಾಣ ಪತ್ರವನ್ನು ಮಗುವಿಗೆ ಮಾಡುವಾಗ ತಂದೆ ಬದುಕಿರಲಿ ಇಲ್ಲದಿರಲಿ ತಂದೆಯ ಜಾತಿ ಪ್ರಮಾಣ ಪತ್ರವನ್ನೇ ಆ ಮಗುವಿಗೂ ನೀಡಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ.

ಪತ್ನಿಗೆ ಅಧಿಕಾರ ಇರುತ್ತಾ?

ಎಷ್ಟೊ ಬಾರಿ ಅಂತರ್ ಜಾತಿ ವಿವಾಹ (Inter Caste Marriage) ದಲ್ಲಿ ಪತ್ನಿಗೆ ಗಂಡನ ಜಾತಿ ಅನ್ವಯ ಆಗುತ್ತಾ ಎಂದು ಕೇಳಲಾಗುತ್ತದೆ. ಪರಿಶಿಷ್ಟ ಜಾತಿ ಅಥವಾ ವರ್ಗದ ಆಧಾರದ ಮೇಲೆ ಮಹಿಳೆ ಆ ಜಾತಿಯ ಪುರುಷನನ್ನು ವಿವಾಹವಾದರೆ ಸರಕಾರದ ಕೆಲ ಯೋಜನೆ ಫಲಾನುಭವಿ ಗಳಾಗಬಹುದು ಆದರೆ ಮೀಸಲಾತಿ ಪಡೆಯಲು ಸಾಧ್ಯವಿಲ್ಲ. ಯಾಕೆಂದರೆ ಆಕೆ ಹುಟ್ಟುತ್ತಲೇ ತನ್ನ ತಂದೆಯ ಜಾತಿಯಿಂದ ಬಂದ ಕಾರಣ ಮೀಸಲಾತಿ ಅನರ್ಹ ವಾಗಿದೆ. ಪರಿಶಿಷ್ಟ ಜಾತಿ ಪಂಗಡಕ್ಕೆ ಚುನಾವಣೆ ಪಕ್ಷದ ಮೀಸಲಾತಿ, ಇತರ ವ್ಯವಸ್ಥೆಗೆ ಆಕೆ ಅನರ್ಹಳಾಗುತ್ತಾಳೆ.

ಈ ವಿಚಾರವು ಧರ್ಮದ ಬದಲಾವಣೆಗೆ ಕೂಡ ಸೀಮಿತವಾಗಿದ್ದು ಬಹುತೇಕರು ಮದುವೆಯಾದ ಬಳಿಕ ಪತ್ನಿಗೆ ತನ್ನ ಪತಿಯ ಧರ್ಮ , ಜಾತಿಗಳು ಸಿಗಲಿದ್ದು ಕನ್ವರ್ಟ್ ಆಗುವುದನ್ನು ನಾವು ಕಾಣಬಹುದು. ಈ ಬಗ್ಗೆ ಅನೇಕ ನೀತಿ ನಿಯಮಗಳನ್ನು ರಾಜ್ಯದ ಹೈಕೋರ್ಟ್ (High Court) ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸುಪ್ರೀಂ ಕೋರ್ಟ್ ಪಾಲಿಸುತ್ತಲೇ ಬಂದಿದ್ದು ಈಗಲೂ ಅದೇ ನಿಯಮ ಜಾರಿಯಲ್ಲಿದೆ ಎನ್ನಬಹುದು.

advertisement

Leave A Reply

Your email address will not be published.