Karnataka Times
Trending Stories, Viral News, Gossips & Everything in Kannada

Small Savings Schemes: PPF, SSY ಉಳಿತಾಯ ಯೋಜನೆಗಳ ಹೊಸ ಬಡ್ಡಿ ದರ ಪ್ರಕಟ; ಎಷ್ಟು ಸಿಗುತ್ತೆ ನೋಡಿ!

advertisement

ಮಹಿಳಾ ದಿನಾಚರಣೆಯಂದು ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರ ಪರಿಷ್ಕರಿಸಿ ಹೊಸ ಬಡ್ಡಿದರ ಲಿಸ್ಟ್ ಬಿಡುಗಡೆ ಮಾಡಿದೆ. ಇದರಿಂದ ಹೆಣ್ಣು ಮಕ್ಕಳು ಹೂಡಿಕೆ ಮಾಡಿದರೆ ಹೆಚ್ಚಿನ ಮೊತ್ತದ ಲಾಭ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳನ್ನು(Small Savings Schemes)  ಪರಿಚಯಿಸಿದೆ. ಅತಿ ಕಡಿಮೆ ಸಂಬಳ ಬರುವವರು ಅಥವಾ ತಿಂಗಳಿಗೆ ಕಡಿಮೆ ಆದಾಯ ಗಳಿಸುವವರು ಕೂಡ ತಮ್ಮ ಭವಿಷ್ಯದ ದೃಷ್ಟಿಯಿಂದ ಸ್ವಲ್ಪ ಸ್ವಲ್ಪ ಹೂಡಿಕೆ ಮಾಡುವುದರ ಮೂಲಕ ವೃದ್ಧಾಪ್ಯದ ಜೀವನವನ್ನು ಸುಲಭವಾಗಿ ನಡೆಸಲು ಸಹಾಯಕವಾಗುವಂತಹ ಯೋಜನೆಗಳು ಜಾರಿಯಲ್ಲಿ ಇವೆ. ಇವುಗಳಲ್ಲಿ ಪಿಪಿಎಫ್, NSC, SSY ಮೊದಲಾದ ಯೋಜನೆಗಳು ಸೇರಿವೆ.

ಸರ್ಕಾರ ತ್ರೈಮಾಸಿಕ ಆರಂಭದಲ್ಲಿ ಮೊದಲ ಹಾಗೂ ಎರಡನೇ ವಾರಗಳ ನಡುವೆ ಹೊಸ ಬಡ್ಡಿ ದರ ಪರಿಶೀಲಿಸಿ ಪ್ರಕಟಿಸುತ್ತದೆ. ಈ ಬಾರಿ ಮುಂದಿನ ತ್ರೈಮಾಸಿಕದ ಬಡ್ಡಿ ದರವನ್ನು ಸುಮಾರು ಮೂರು ವಾರಗಳ ಮುಂಚಿತವಾಗಿಯೇ ಮಹಿಳಾ ದಿನಾಚರಣೆಯ ಸುಸಂದರ್ಭದಲ್ಲಿ ಘೋಷಿಸಲಾಗಿದೆ. ಹಣಕಾಸು ಸಚಿವಾಲಯ ಹೊರಡಿಸಿರುವ ಅದೇ ಸೂಚನೆಯ ಪ್ರಕಾರ ಎಷ್ಟು ಬಡ್ಡಿದರ ಹೆಚ್ಚಿಸಲಾಗಿದೆ ಎನ್ನುವುದನ್ನು ನೋಡೋಣ.

ಈ ಯೋಜನೆಗಳ ಬಡ್ಡಿ ದರದಲ್ಲಿ ಹೆಚ್ಚಳ:

 

 

advertisement

ನೀವು ಸಣ್ಣ ಉಳಿತಾಯ ಯೋಜನೆ (Small Savings Schemes) ಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಅಥವಾ ಈಗಾಗಲೇ ಹೂಡಿಕೆ ಮಾಡಿದರೆ ಉತ್ತಮ ಬಡ್ಡಿ ದರವನ್ನು ಪಡೆದುಕೊಳ್ಳಲು ಸಾಧ್ಯವಿದೆ ಉದಾಹರಣೆಗೆ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯ ಬಡ್ಡಿ ದರವನ್ನು ಜನವರಿ ಮಾರ್ಚ್ ತಿಂಗಳ ನಾಲ್ಕನೇ ತ್ರೈಮಾಸಿಕಕ್ಕೆ ಶೇಕಡ 0.20% ನಷ್ಟು ಹೆಚ್ಚಿಸಲಾಗಿದೆ. ಅಲ್ಲಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ 8.2% ನಷ್ಟು ಬಡ್ಡಿ ದರವನ್ನು ಪಡೆದುಕೊಳ್ಳುತ್ತೀರಿ. ಹೆಣ್ಣು ಮಕ್ಕಳಿಗಾಗಿಯೇ ಪ್ರಾರಂಭಿಸಲಾಗಿರುವ ಈ ಯೋಜನೆಯಲ್ಲಿ ನಿಮ್ಮ ಹೆಣ್ಣು ಮಗು 10 ವರ್ಷ ವಯಸ್ಸಿಗೆ ಬಂದ ನಂತರ ಹೂಡಿಕೆ ಆರಂಭಿಸಬಹುದು ಹಾಗೂ ಆಕೆಯ 21ನೇ ವರ್ಷ ವಯಸ್ಸಿನಲ್ಲಿ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯುತ್ತೀರಿ.

ನಿಶ್ಚಿತ ಠೇವಣಿ ಬಡ್ಡಿ ದರ ಹೆಚ್ಚಳ:

ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಅನುಗುಣವಾಗಿ ಮೂರು ವರ್ಷಗಳ ನಿಶ್ಚಿತ ಠೇವಣಿಯ ಯೋಜನೆಯ ಮೇಲೆಯೂ ಬಡ್ಡಿದರ ಹೆಚ್ಚಿಸಲಾಗಿದೆ. ಅಂದ್ರೆ ಶೇಕಡ 0.10% ಏರಿಕೆ ಆಗಿದ್ದು, ಎಫ್ ಡಿ ಮೇಲೆ 7.1% ನಷ್ಟು ಬಡ್ಡಿದರ ಪಡೆದುಕೊಳ್ಳಬಹುದು.

ಪಿಪಿಎಫ್ (PPF) ಹೂಡಿಕೆಯ ಮೇಲೆ 7.1% ಬಡ್ಡಿ ಸಿಗುತ್ತದೆ. ಅದೇ ರೀತಿ ಕಿಸಾನ್ ವಿಕಾಸ ಪತ್ರ (PM Kisan Patra) ಮೇಲಿನ ಬಡ್ಡಿ ದರವನ್ನು ಕೂಡ ಸರ್ಕಾರ ಹೆಚ್ಚಿಸಿದೆ. 115 ತಿಂಗಳುಗಳ ಅವಧಿಗೆ ಮೆಚ್ಯೂರ್ಡ್ ಆಗುವ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7.5% ಬಡ್ಡಿದರ ಸಿಗುತ್ತದೆ.

ಇನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC) ಮೇಲೆ ಹೂಡಿಕೆ ಮಾಡಲು ಬಯಸಿದರೆ 7.7% ನಷ್ಟು ಬಡ್ಡಿ ದರ ಪಡೆಯಬಹುದು. ಮಾಸಿಕ ಆದಾಯ ಯೋಜನೆಯ ಹೂಡಿಕೆಗೆ 7.4% ನಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ.

advertisement

Leave A Reply

Your email address will not be published.