Karnataka Times
Trending Stories, Viral News, Gossips & Everything in Kannada

Agricultural Land: 1 ಎಕರೆಯಷ್ಟು ಭೂಮಿ ಇರುವ ಎಲ್ಲಾ ರೈತರಿಗೂ ಕೇಂದ್ರದ ಹೊಸ ಗ್ಯಾರಂಟಿ!

advertisement

ರೈತ‌ ನಮ್ಮ ದೇಶದ ಬೆನ್ನೆಲುಬು ಎಂಬ ಮಾತಿದೆ ಆ ಕಾರಣಕ್ಕಾಗಿಯೇ ಕೃಷಿ ಹಾಗೂ ಇತರ ಕೃಷಿ ಸಂಬಂಧಿತ ಕಾರ್ಯಕ್ರಮಗಳಿಗೆ ಸರಕಾರ ಒತ್ತು ನೀಡುತ್ತಲೇ ಬಂದಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂಬ ನೆಲೆಯಲ್ಲಿ ಈಗಾಗಲೇ ರೈತಪರ ಅನೇಕ ಯೋಜನೆ ಚಾಲ್ತಿಯಲ್ಲಿ ಇದ್ದು ಅವುಗಳಲ್ಲಿ ಒಂದು ಯೋಜನೆಗೆ ಇಂದು ರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಗುತ್ತಿದೆ‌. ಹಾಗಾದರೆ ಆ ಯೋಜನೆ ಯಾವುದು ಹೇಗೆ ಅದು ಪ್ರಖ್ಯಾತಿ ಪಡೆಯುತ್ತಿದೆ ಎಂಬ ವಿವರಣೆಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ಸಹಾಯಧನ ವಿತರಣೆ:

ರೈತರಿಗೆ ಸಸಿ, ಬೀಜ, ರಸಗೊಬ್ಬರ, ಯಂತ್ರೋಪಕರಣ ಸೇರಿದಂತೆ ಕೃಷಿ ಚಟುವಟಿಕೆಗಳನ್ನು ಬೆಂಬಲಿಸಬೇಕು ಎಂಬ ಉದ್ದೇಶದಿಂದ ಸ್ಥಾಪಿತವಾದ ವ್ಯವಸ್ಥೆ ಈ ಫಸಲ್ ಬಿಮಾ ಯೋಜನೆ (Fasal Bima Yojana) ಎನ್ನಬಹುದು. ಕಾಲಕ್ಕೆ ತಕ್ಕಂತೆ ಈ ಒಂದು ಯೋಜನೆಯಲ್ಲಿ ಕೆಲವು ಅಗತ್ಯ ಮಾರ್ಪಾಡನ್ನು ಮಾಡಲಾಗಿದ್ದು ಎರಡು ಅಗತ್ಯ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಇದರ ಮೂಲಕ ರೈತರಿಗೆ ವಿಮಾ ರಕ್ಷಣೆ ನೀಡುವ ಜೊತೆಗೆ ಸಹಾಯಧನ ಕೂಡ ವಿತರಣೆ ಮಾಡಲಾಗುತ್ತಿದೆ.

ಪ್ರೋತ್ಸಾಹಿಸಲು ಮೊದಲ ಆದ್ಯತೆ:

 

PM Fasal Bima Yojana
Image Source: Maha DBT

 

advertisement

ಕೃಷಿ ಚಟುವಟಿಕೆ ಇಂದು ಅವನತಿಯ ಹಾದಿ ಹಿಡಿಯುತ್ತಿದೆ. ಕೃಷಿ ಚಟುವಟಿಕೆ ಬೆಂಬಲಿಸುವ ಸಲುವಾಗಿ ಅನೇಕ ಕೃಷಿ ಸಂಬಂಧಿತ ಅಂಶಗಳಿಗೆ ಅಧಿಕ ಬೆಂಬಲ ನೀಡಲಾಗುತ್ತಿದೆ. ಕೃಷಿ ಲಾಭ ದಾಯಕ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ನಷ್ಟದ ಅಂಶ ಸಹ ಕೆಲವೊಮ್ಮೆ ಅಪಾಯಕರ ಪರಿಸ್ಥಿತಿ ನಿರ್ಮಾಣ ಮಾಡಲಿದೆ. ಹೀಗಾಗಿ ರೈತರನ್ನು ಇಂತಹ ಅಪಾಯಕ್ಕೆ ದೂಡದಂತೆ ರಕ್ಷಿಸುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM Fasal Bima Yojana) ಬಹಳ ಸಹಕಾರಿ ಆಗಿದೆ. ಈ ಮೂಲಕ ಕೃಷಿ ಮಾಡುವ ರೈತರನ್ನು ಪ್ರೋತ್ಸಾಹಿಸುವ ಈ ಯೋಜನೆಯ ಮೂಲ ನಿಲುವಾಗಿದೆ.

ಈ ದಾಖಲಾತಿ ಅಗತ್ಯ:

ಫಸಲ್ ಬಿಮಾ ಯೋಜನೆಗೆ ಅರ್ಜಿ ಹಾಕುವವರಿಗೆ ಕೆಲ ನಿರ್ದಿಷ್ಟ ಅರ್ಹತೆ ಇರಬೇಕು ಹಾಗೂ ದಾಖಲಾತಿ ಸಹ ಬಹಳ ಮುಖ್ಯ. ರೈತರ ಭೂ ದಾಖಲೆ, ವಿಳಾಸದ ಪುರಾವೆ, ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (PAN Card), ಜಾತಿ ಪ್ರಮಾಣ ಪತ್ರ (Caste Certificate), ಆದಾಯ ಪ್ರಮಾಣಪತ್ರ (Income Certificate), ಬಳಕೆಯಲ್ಲಿ ಇರುವ ಫೋನ್ ಸಂಖ್ಯೆ (Phone Number), ಪಾಸ್ ಪೋರ್ಟ್ ಫೋಟೊ (Passport Photo) ತುಂಬಾ ಅಗತ್ಯವಾಗಿದೆ. ಈ ಎಲ್ಲ ದಾಖಲಾತಿ ಸಮೇತ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ https://pmfby.gov.in ಭೇಟಿ ನೀಡಿ ಅರ್ಜಿ ಹಾಕಬಹುದು.

ವಿಮೆ ಸೌಲಭ್ಯ:

 

Fasal Bima Yojana 2024
Image Source: Shutterstock

 

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ (PM Fasal Bima Yojana) ಮೂಲಕ ರೈತರ ಬೆಳೆ ಹಾನಿ ಆದರೆ, ಪಾಕೃತಿಕ ವಿಕೋಪ ಆದರೆ ಅಂತಹ ಸಂದರ್ಭದಲ್ಲಿ ಈ ವಿಮಾ ಯೋಜನೆ ಮೂಲಕ ಹಣ ವಿತರಿಸಲಾಗುವುದು. ಆಧುನಿಕ ಕೃಷಿ ವ್ಯವಸ್ಥೆ ಯಲ್ಲಿ ಒಗ್ಗಿಕೊಂಡ ಬಹುತೇಕ ರೈತರಿಗೆ ಈ ಯೋಜನೆ ಬಹಳ ಸಹಕಾರಿ ಆಗಲಿದೆ. ಇದಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಈ ಯೋಜನೆಯ ಫಲಾನುಭವಿಗಳು ನೀವಾಗಬಹುದು. ಇತ್ತೀಚೆಗಷ್ಟೇ ಇದೇ ಯೋಜನೆ ಅಡಿಯಲ್ಲಿ ಎಕರೆಗೆ 13 ಸಾವಿರದಷ್ಟು ಸಹಾಯಧನ ನೀಡಲು ಮುಂದಾಗಿದ್ಷು ಪಾಕೃತಿಕ ವಿಕೋಪ ಅಥವಾ ಇತರ ಕಾರಣಕ್ಕೆ ಬೆಳೆ ಹಾನಿಯಾದರೆ ಈ ಕ್ರಮ ಬಹಳ ಸಹಕಾರಿ ಆಗಲಿದೆ.

advertisement

Leave A Reply

Your email address will not be published.