Karnataka Times
Trending Stories, Viral News, Gossips & Everything in Kannada

Anna Bhagya Money: ಮಾರ್ಚ್ ತಿಂಗಳ ಅನ್ನ ಭಾಗ್ಯ ಹಣ ಇಂತವರಿಗೆ ಜಮೆಯಾಗಲ್ಲ! ಹೊಸ ಆದೇಶ

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಹೆಚ್ಚು ಪ್ರಚಲಿತದಲ್ಲಿದ್ದು ಹೆಚ್ಚಿನ ಜನರು ಈ ಯೋಜನೆಗಳ ಫಲಾನುಭವಿಗಳು ಆಗಿದ್ದಾರೆ. ಅದರಲ್ಲಿ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಉಚಿತ ಆಹಾರ ಧಾನ್ಯಗಳೊಂದಿಗೆ ಹಣವೂ (Anna Bhagya Money) ಕೂಡ ಜನರ ಖಾತೆಗೆ ಜಮೆ ಯಾಗುತ್ತಿದೆ.‌ ಈ ಮೂಲಕ ಬಡ ವರ್ಗದ ಜನತೆಗೆ ಈ ಯೋಜನೆಗಳು ಬಹಳಷ್ಟು ಸಹಾಯಕವಾಗುತ್ತಿದೆ.

ಗೃಹಲಕ್ಷ್ಮಿ ಯೋನಜನೆ (Anna Bhagya Yojana) ಯ ಮೂಲಕ ಮಹೀಳೆಯರ ಖಾತೆಗೆ ಹಣ ಜಮೆ ಯಾಗುತ್ತಿದ್ದರೆ, ಅನ್ನ ಭಾಗ್ಯ ಯೋಜನೆಯ ಮೂಲಕ ಮನೆಯ ಯಜಮಾನನ ಖಾತೆಗೆ ಹಣ ಜಮೆಯಾಗುತ್ತಿದೆ. ‌ಇಲ್ಲಿಯವರೆಗೆ ಜನವರಿ ತಿಂಗಳ ವರೆಗೆ ಖಾತೆಗೆ ಹಣ ಜಮೆ ಯಾಗಿದ್ದು ಕೆಲವು ಫಲಾನುಭವಿಗಳ ಖಾತೆಗೆ ಪೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ (Anna Bhagya Money) ಇನ್ನಷ್ಟೆ ಜಮೆ ಯಾಗಬೇಕಿದೆ. ಈ ಬಗ್ಗೆ ಆಹಾರ ಇಲಾಖೆಯು ಖಾತೆಗೆ ಯಾವಾಗ ಹಣ ಜಮೆಯಾಗಲಿದೆ ಎಂದು ಸ್ಪಷ್ಟನೆ ಯನ್ನು ನೀಡಿದೆ.

ಹೆಚ್ಚುವರಿ ಅಕ್ಕಿಯ ಬದಲಾಗಿ ಖಾತೆಗೆ ಹಣ ಜಮೆ:

ರಾಜ್ಯ ಸರ್ಕಾರವು ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ‌ಜಯ ಗಳಿಸಿದ್ರೆ ಹತ್ತು ಕೆಜಿ ಅಕ್ಕಿ ನೀಡುವ ಕುರಿತಾಗಿಯು ಭರವಸೆಯನ್ನು ನೀಡಿತ್ತು.‌ ಆದ್ರೆ ಈ ಭರವಸೆಯನ್ನು ನೆರವೇರಿಸಲು ಅಕ್ಕಿಯ ಕೊರತೆ ಉಂಟಾಯಿತು. ಹಾಗಾಗಿ ಹತ್ತು ಕೆಜಿ ಅಕ್ಕಿ ವಿತರಣೆಯ ಬದಲಾಗಿ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಹಣವನ್ನು ಖಾತೆಗೆ ಜಮೆ ಮಾಡುತ್ತಿದೆ. ರಾಜ್ಯ ಸರ್ಕಾರ ಪ್ರಯತ್ನ ನಡೆಸಿದರೂ ಅಕ್ಕಿ ದಾಸ್ತಾನು ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಹಾಗಾಗಿ 34 ರೂಪಾಯಿ ಮೊತ್ತದಲ್ಲಿ ಪ್ರತಿ ಸದಸ್ಯ ರೂ. 170 ರೂಪಾಯಿಗಳನ್ನು ಜಮೆ ಮಾಡುತ್ತಿದೆ.

ಮಾರ್ಚ್ ತಿಂಗಳ ಹಣ ಜಮೆ ಯಾವಾಗ?

 

advertisement

Image Source: NewsClick

 

ಹೆಚ್ಚಿನ ಜನರಿಗೆ ಜನವರಿ ತಿಂಗಳ ವರೆಗೆ ಅನ್ನಭಾಗ್ಯ ಹಣ (Anna Bhagya Money) ಜಮೆಯಾಗಿದ್ದು ಪೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನಷ್ಟೆ ಜಮೆಯಾಗ ಬೇಕಿದೆ. ಪೆಬ್ರವರಿ ತಿಂಗಳ ಹಣವನ್ನು ಈ ತಿಂಗಳ ಹದಿನೈದರ ಒಳಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಯಾಗಬಹುದು ಎಂದು ವಿವಿಧ ಮೂಲಗಳ ಮಾಹಿತಿ ಪ್ರಕಾರ ತಿಳಿದು ಬಂದಿದೆ.‌ ಅದೇ ರೀತಿ ಮಾರ್ಚ್ ತಿಂಗಳ ಹಣವೂ ಈ ತಿಂಗಳ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಅಕ್ಕಿಯ ಹಣ ಜಮೆಯಾಗಬಹುದು.

ಇಂತವರಿಗೆ ಈ ತಿಂಗಳ Anna Bhagya Money ಇಲ್ಲ:

 

Image Source: Fisdom

 

ಕೆಲವರಿಗೆ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣವೂ ಜಮೆಯಾಗುತ್ತಿಲ್ಲ. ಬ್ಯಾಂಕ್ ಖಾತೆಯು ಗಂಡನ ಹೆಸರಿನಲ್ಲಿದ್ದೂ‌ ಪಡಿತರ ಚೀಟಿ (Ration Card) ಯು ಹೆಂಡತಿಯ ಹೆಸರಿನಲ್ಲಿದ್ದರೆ, ದಾಖಲೆಗಳು ಒಂದಕ್ಕೊಂದು ಮ್ಯಾಚ್ ಆಗದೇ ಇದ್ದಲ್ಲಿ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗೋದಿಲ್ಲ. ಇದರಿಂದ ತಾಂತ್ರಿಕ ದೋಷಗಳು ಉಂಟಾಗಿ ಡಿಬಿಟಿ ಮೂಲಕ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗೋದಿಲ್ಲ.ಹಾಗಾಗಿ ‌ಇಂತವರಿಗೆ ಈ ತಿಂಗಳ ಹಣ ಜಮೆಯಾಗೋದಿಲ್ಲ.‌ಅದಕ್ಕಾಗಿ ನಿಮ್ಮ‌ ದಾಖಲೆ ‌ಗಳನ್ನು ಸರಿಪಡಿಸುವುದು ಮುಖ್ಯ.

advertisement

Leave A Reply

Your email address will not be published.