Karnataka Times
Trending Stories, Viral News, Gossips & Everything in Kannada

Govt Job: ಇಂತಹವರಿಗೆ ಸರ್ಕಾರಿ ಕೆಲಸ ಪಡೆಯಲು ಇನ್ಮೇಲೆ ಹೊಸ ರೂಲ್ಸ್! ಸರ್ಕಾರದ ತಿದ್ದುಪಡಿ

advertisement

ಸರಕಾರಿ ಕೆಲಸ ಎಂದರೆ ಎಲ್ಲರಿಗೂ ವಿಶೇಷ ಆಸಕ್ತಿ ಅಭಿವ್ಯಕ್ತಿ ಇರುವುದನ್ನು ಕಾಣಬಹುದು. ಎಷ್ಟೊ ಸರಕಾರಿ ನೌಕರರ ಕುಟುಂಬ (Govt Employees Family) ಅವರ ತಿಂಗಳ ಆದಾಯವನ್ನೇ ಅವಲಂಬಿತವಾಗಿದೆ. ಸರಕಾರಿ ನೌಕರರು ಕೆಲಸದ ಅವಧಿಯಲ್ಲೇ ಅಸುನೀಗಿದರೆ ಆಗ ಅವರ ಕುಟುಂಬಕ್ಕೆ ಅನೇಕ ಸೇವಾ ಸೌಲಭ್ಯ ಸಹ ನೀಡಲಾಗುತ್ತದೆ. ಅದರ ಜೊತೆಗೆ ಆ ವ್ಯಕ್ತಿಯ ಆದಾಯವನ್ನೇ ಆತನ ಕುಟುಂಬ ಅವಲಂಬಿಸಿದ್ದರೆ ಆಗ ಆ ಕುಟುಂಬದ ಸದಸ್ಯರಿಗೆ ಅದೇ ಹುದ್ದೆಯನ್ಮು ಅನುಕಂಪದ ಆಧಾರದ ಮೇಲೆ ನೀಡಲಾಗುತ್ತದೆ.

ಅನೇಕ ಗೊಂದಲ:

ಅನುಕಂಪದ ಆಧಾರದ ಮೇಲೆ ನೀಡಲಾಗುವ ಹುದ್ದೆಗಳಲ್ಲಿ ಇತ್ತೀಚೆಗೆ ಗೊಂದಲ ಏರ್ಪಟ್ಟಿದ್ದು ಮೃತ ಸರಕಾರಿ ಉದ್ಯೋಗಸ್ಥರ ಕುಟುಂಬದಲ್ಲಿ ಆತನ ಬಳಿಕ ಈ ಕೆಲಸ ತಮಗೆ ನೀಡುವಂತೆ ಅನೇಕರು ಮನವಿ ಮಾಡಿ ಸರಕಾರಕ್ಕೂ ಸಮಸ್ಯೆ ಆಗುತ್ತಿದೆ. ಹಾಗಾಗಿ ಇತ್ತೀಚೆಗಷ್ಟೇ ಅನುಕಂಪದ ಆಧಾರದ ಮೇಲೆ ನೀಡಲಾಗುವ ಕೆಲಸಕ್ಕೆ ಕೆಲವೊಂದು ವಿಶೇಷ ನಿಯಮ ವಿಧಿಸಲಾಗಿದೆ. ಹಾಗಾದರೆ ಯಾರು ಈ ಒಂದು ಹಕ್ಕನ್ನು ಪಡೆಯಲಿದ್ದಾರೆ ಸರಕಾರದಲ್ಲಿ ಇರುವ ಅಂಶ ಯಾವುದು ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.

ತಿದ್ದುಪಡಿ ನಿಯಮ:

ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮದ ಪ್ರಕಾರ ಅನುಕಂಪದ ಆಧಾರದ ಮೇಲೆ ಸೇವಾ ನೇಮಕಾತಿ ನಿಯಮ 1996ರನ್ನು 2021ರಲ್ಲಿ ಕೆಲವೊಂದು ಅಗತ್ಯ ಮಾರ್ಪಾಡು ಮಾಡಿ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಸರಕಾರಿ ಉದ್ಯೋಗಸ್ಥರು ಅಸುನೀಗಿದರೆ ಅವರ ಸ್ಥಾನ ತುಂಬುವವರು ಯಾರು ಎಂಬ ಮಿತಿ ಹೇರಿರುವುದನ್ನು ನಾವಿಂದು ಕಾಣಬಹುದು. ಈ ಬಗ್ಗೆ ಪರಿಷ್ಕೃತ ತಿದ್ದುಪಡಿ ಅಧಿ ಸೂಚನೆಗಳನ್ನು ಜಾರಿಗೆ ತಂದಿದೆ.

advertisement

ಯಾರಿಗೆ ಸಿಗಲಿದೆ:

 

 

ಅನುಕಂಪದ ಆಧಾರದ ಮೇಲೆ ನೀಡುವ  ಕೆಲಸವು ಕುಟುಂಬದ ಸದಸ್ಯರವರೆಗೆ ವಿಸ್ತರಿಸಲಾಗಿದೆ. ಅಂದರೆ ಮೃತನ ಪತ್ನಿ, ಮಗ, ಅವಿವಾಹಿತ ಮಗಳಿಗೆ ಮಾತ್ರವಲ್ಲದೆ ಮೃತರ ಮನೆ ಸದಸ್ಯರು ಈ ಒಂದು ಅನುಕಂಪದ ಕೆಲಸ ಪಡೆಯಬಹುದು. ಪುರುಷ ಮೃತ ಪಟ್ಟಿದ್ದರೆ ಆಗ ಆತನ ಪತ್ನಿ, ಮಗ, ಮಗಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಗಲಿದೆ. ಮಗಳು ವಿವಾಹಿತೆ ಆಗಿರಲಿ ಆಗಿರದೇ ಇರಲಿ ಅವರಿಗೆ ಕೆಲಸ ನೀಡಬಹುದಾಗಿದೆ. ಮೊದಲ ಆಯ್ಕೆ ಪತ್ನಿ ಆಗಿದ್ದು ಆಕೆ ನೇಮಕಾತಿ ಅನರ್ಹಳಾದರೆ ಆ ಬಳಿಕ ಪತ್ನಿ ಸೂಚಿಸಿದ್ದ ಮಗ ಅಥವಾ ಮಗಳಿಗೆ ನೌಕರಿ ನೀಡಲಾಗುತ್ತದೆ.

ಒಂದು ವೇಳೆ ಪತ್ನಿಯೇ ಮೃತರಾಗಿದ್ದರೆ ಅವರ ಮಕ್ಕಳಲ್ಲಿ ಯಾರು ಹಿರಿಯರು ಮತ್ತು ಅರ್ಹತೆ ಆಧಾರದ ಮೇಲೆ ಕೆಲಸ ನೀಡಲಾಗುವುದು. ಸರಕಾರಿ ನೌಕರಿ ಮಾಡುವ ಮಹಿಳೆ ಮೃತ ಪಟ್ಟರೆ ಆಗ ಪತಿ, ಮಗ,ಮಗಳು ಅನುಕಂಪದ ಕೆಲಸ ಪಡೆಯಲಿದ್ದಾರೆ. ಮೊದಲು ಆಕೆಯ ಮಕ್ಕಳಿಗೆ ಈ ಅಧಿಕಾರ ಬರಲಿದೆ. ಮಕ್ಕಳು ಚಿಕ್ಕವರಾಗಿದ್ದರೆ ಆಗ ಪತಿಗೆ ಈ ಆಯ್ಕೆ ಸಿಗಲಿದೆ.  ಮೃತರ ಪತಿ ಅಥವಾ ಪತ್ನಿ ಮೊದಲೇ ಸತ್ತಿದ್ದು ಮಕ್ಕಳು ಅಪ್ರಾಪ್ತರಾಗಿದ್ದರೆ ಆಗ ಆ ಮಕ್ಕಳನ್ನು ಸಾಕುವ ಪೋಷಕರಿಗೆ ಅಧಿಕಾರ ಸಿಗಲಿದೆ.

ಅವಿವಾಹಿತರಾಗಿದ್ದರೆ:

ಮೃತರು ಅವಿವಾಹಿತರಾಗಿದ್ದರೆ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಒಂದೆ ಪ್ರಕಾರದ ಕಾನೂನು ಅನ್ವಯವಾಗಲಿದೆ.  ಆಗ ಮೃತರ ಸೋದರ , ಸೋದರಿಗೆ ಕೆಲಸ ಸಿಗಲಿದೆ. ತಂದೆ ತಾಯಿಯಲ್ಲಿ ಯಾರಿಗೆ ನೀಡಬೇಕು ಎಂಬ ಗೊಂದಲ ಇದ್ದರೆ ತಾಯಿ ಹೇಳುವ ವ್ಯಕ್ತಿ ಅಂತಿಮವಾಗಲಿದೆ. ಮೃತ ಅವಿವಾಹಿತ ಸರಕಾರಿ ನೌಕರರ ತಂದೆ ತಾಯಿ ಮೊದಲೇ ಸತ್ತಿದ್ದರೆ, ಆಗ ಆತನ ಸಹೋದರ ಸಹೋದರಿಗೆ ವಯಸ್ಸಿನ ಹಾಗೂ ಅರ್ಹತೆ ಆಧಾರದ ಮೇಲೆ ಕೆಲಸ ನೀಡಲಾಗುವುದು.  ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು 18 ವರ್ಷ ದಾಟಿದ್ದು 55 ವರ್ಷದ ಒಳಗೆ ವಯಸ್ಸಿರಬೇಕು. ಮೃತ ಪಟ್ಟ ಒಂದು ವರ್ಷದೊಳಗೆ ಸಂಬಂದ ಪಟ್ಟ ಇಲಾಖೆಗೆ ನಿಗಧಿತ ನಮೂನೆ ಮೂಲಕ ಅರ್ಜಿ ಸಲ್ಲಿಸಬೇಕು.

advertisement

Leave A Reply

Your email address will not be published.