Karnataka Times
Trending Stories, Viral News, Gossips & Everything in Kannada

Car Loan: ಕಾರ್ ತಗೆದುಕೊಳ್ಳುವ ಎಲ್ಲರಿಗೂ ಹೊಸ ರೂಲ್ಸ್! ಬಡವ ಶ್ರೀಮಂತ ಎನ್ನದೆ ಬ್ಯಾಂಕ್ ಗಳಿಂದ ಹೊಸ ಮಾಹಿತಿ

advertisement

ಕಾಲಿಲ್ಲದವರು ಕಾಣಸಿಗಬಹುದು ಆದರೆ ಕಾರಿಲ್ಲದವರು ಕಾಣಸಿಗಲಿಕ್ಕಿಲ್ಲ. ಹೌದು ಎಲ್ಲೆಡೆಯೂ ಈಗ ಕಾರ್​ ಮಯ ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಎಲ್ಲಿ ನೋಡಿದ್ರೂ ಕಾರ್‌ಗಳು. ಈ ಮೊದಲೆಲ್ಲಾ ಕಾರ್‌ಗಳು ಅಂದ್ರೆ ಅದು ಕೇವಲ ಶ್ರೀಮಂತರ ಪಾಲಿನ ಗಂಟಾಗಿತ್ತು. ಮಧ್ಯಮ ವರ್ಗ ಮತ್ತು ಬಡವರು ಕಾರ್​ ಕೊಂಡುಕೊಳ್ಳುವ ಯೋಚನೆ ಮಾಡೋದು ಕೂಡ ಕಷ್ಟವಾಗಿತ್ತು. ಯಾಕೆಂದರೆ ಯಾರ ಬಳಿಯೂ ಲಕ್ಷಾಂತರ ರೂ ಬಂಡವಾಳ ಇರುತ್ತಿರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. EMI ಪದ್ಧತಿ ಜಾರಿಗೆ ಬಂದಿದ್ದೇ ಬಂದಿದ್ದು ನೋಡಿ, ಯಾರು ಬೇಕಾದ್ರೂ ಕಾರ್​ ಕೊಂಡುಕೊಳ್ಳಬಹುದು ಜಮ್ ಅಂತ ಓಡಾಡಬಹುದು.

ಸಾಮಾನ್ಯರೂ ಕಾರ್ ಖರೀದಿಸಬಹುದಿತ್ತು:

ಈಗ ಮಧ್ಯಮವರ್ಗದ ಜನರೂ ಕೂಡಾ 80 ಸಾವಿರದಿಂದ 1 ಲಕ್ಷದ ವೆರಗೆ ಮಿನಿಮಮ್​ ಡೌನ್​ಪೇಮೆಂಟ್​ (Minimum Down Payment) ಮಾಡಿದ್ರೆ ಸಾಕು , ಮಿಕ್ಕ ಹಣ ಬ್ಯಾಂಕ್​ನಿಂದ ಕಾರ್​ ಲೋನ್​ (Car Loan) ರೂಪದಲ್ಲಿ ಸಿಗುತ್ತದೆ. 3 ವರ್ಷಕ್ಕೋ 5 ರ್ಷಕ್ಕೋ ಅಥವಾ 7 ವರ್ಷಕ್ಕೋ EMI ಹಾಕಿಸಿಕೊಂಡು ತಿಂಗಳಿಗೆ ಇಂತಿಷ್ಟು ಅಂತ ಕಟ್ಟಿಕೊಂಡು ಹೋಗಬಹುದು. ಹೀಗಾಗಿ ಈಗ ಸಾಧಾರಣ ಮಧ್ಯಮ ಕುಟುಂಬದವರು ಕೂಡ ಕಾರ್​ ಕೊಳ್ಳುವ ಕನಸನ್ನ ನನಸಾಗಿಸಿಕೊಳ್ಳಬಹುದಿತ್ತು ಆದ್ರೆ ಇನ್ಮುಂದೆ ಕೆಲವರಿಗೆ ಈ ರೀತಿ ಕಾರ್​ ಲೋನ್ (Car Loan)​ ಸಿಗೋದು ಕಷ್ಟವಾಗಬಹುದು. ಯಾಕೆ ಅಂತೀರಾ ಇದನ್ನ ಪೂರ್ತಿಯಾಗಿ ಓದಿ.

 

Image Source: Axis Bank

 

ಇರಲೇಬೇಕು ಉತ್ತಮ ಸಿಬಿಲ್ ಸ್ಕೋರ್:

advertisement

ನಿಮಗೆ ಕಷ್ಟದ ಸಮಯದಲ್ಲಿ ಬ್ಯಾಂಕ್​ನಿಂದ ಯಾವುದೇ ತರಹದ ಲೋನ್​ (Loan) ಬೇಕು ಅಂದರೂ ಕೂಡ ನಿಮ್ಮ ಸಿಬಿಲ್​ ಸ್ಕೋರ್​ (CIBIL Score) ಬಹಳ ಮುಖ್ಯವಾಗುತ್ತೆ. ಈ ಸಿಬಿಲ್​ ಸ್ಕೋರ್​ ಎಂದರೆ ಸಿಬಿಲ್ ಎಂಬ ಒಂದು ಖಾಸಗಿ ಕಂಪೆನಿ ನಿಮ್ಮ ಇಡೀ ಹಣಕಾಸಿನ ವ್ಯವಹಾರವನ್ನ ಗಮನದಲ್ಲಿಟ್ಟುಕೊಂಡು ನಿಮಗೆ ನೀಡುವ ಅಂಕ. ಈ ಹಿಂದೆ ಯಾವುದಾದ್ರೂ ಲೋನ್​ ತೆಗೆದುಕೊಂಡಿದ್ದೀರಾ ? ಅದನ್ನು ಸರಿಯಾಗಿ ಮರುಪಾವತಿ ಮಾಡಿದ್ದೀರೋ ಇಲ್ಲವೋ ? ಸಮಯಕ್ಕೆ ಸರಿಯಾಗಿ EMI ಹೊಂದಿಸಿದ್ದೀರೋ ಇಲ್ವೋ ಇದೆಲ್ಲಾ ಡೇಟಾಗಳನ್ನೂ ಗಮನಿಸಿ 300 ರಿಂದ 900ರವರೆಗೆ ನಿಮ್ಮ ಖಾತೆಗೆ ಅಂಕವನ್ನ ನೀಡುತ್ತದೆ. ಅದರ ಆಧಾರದ ಮೇಲೆ ಬ್ಯಾಂಕ್​ಗಳು ನಿಮಗೆ ಸಾಲ ನೀಡಬೇಕೋ ಬೇಡ್ವೋ ಅನ್ನುವುದನ್ನು ನಿರ್ಧಾರ ಮಾಡುತ್ತವೆ.

 

Image Source: Bajaj Finserv

 

ಒಂದು ವೇಳೆ ನೀವು ತೆಗೆದುಕೊಂಡ ಸಾಲವನ್ನು ಈ ಮೊದಲು ಸರಿಯಾದ ಸಮಯದಲ್ಲಿ ಪಾವತಿ ಮಾಡಿದ್ದರೆ ನಿಮ್ಮ ಖಾತೆಗೆ ಉತ್ತಮ ಸಿಬಿಲ್ ಸ್ಕೋರ್ (CIBIL Score)​ ಇದ್ದಲ್ಲಿ ನಿಮಗೆ ನಿರಾಯಾಸವಾಗಿ ಲೋಕ್​ ಸಿಗುತ್ತದೆ. ಆದ್ರೆ ಸಿಬಿಲ್​ ಸ್ಕೋರ್​ ಕಡಿಮೆ ಇದ್ದಲ್ಲಿ ನಿಮಗೆ ಲೋನ್​ ನೀಡೋದು ರಿಸ್ಕ್​ ಎಂದು ಬ್ಯಾಂಕ್​ ಭಾವಿಸುತ್ತೆ. ಹಾಗಂತ ಸಿಬಿಲ್​ ಕಡಿಮೆ ಇದ್ದರೆ ಲೋನ್ ಸಿಗುವುದಿಲ್ಲ ಎಂದಲ್ಲ .ಆದ್ರೆ ನಿಮ್ಮ ಸಿಬಿಲ್​ ಕಡಿಮೆ ಇದ್ದಲ್ಲಿ ಬ್ಯಾಂಕ್​ಗಳು ನಿಮಗೆ ಹೆಚ್ಚಿನ ಬಡ್ಡಿ ದರವನಮ್ನ ವಿಧಿಸುವುದು ಗ್ಯಾರಂಟಿ.

ಹೊಸ ನಿಯಾಮವೇನು?

ಇದೀಗ ಕಾರ್​ಲೋನ್​ (Car Loan) ಗಳಿಗೆ ಹೊಸ ನಿಯಮ ಬಂದಿದ್ದು, ನೀವೇನಾದ್ರೂ ಕಾರ್​ ಲೋನ್​ (Car Loan) ಪಡೆಯಲು ಅರ್ಹರಾಗಿರಬೇಕು ಅಂದ್ರೆ ಕನಿಷ್ಠ 700 ಅಥವಾ ಅದಕ್ಕಿಂತಲೂ ಹೆಚ್ಚಿನ ಸಿಬಿಲ್ ಸ್ಕೋರ್​ ಹೊಂದಿರಬೇಕು. ಒಂದು ವೇಳೆ ನೀವು 700ಕ್ಕಿಂತ ಕಡಿಮೆ ಸ್ಕೋರ್​ ಹೊಂದಿದ್ದರೆ ಆಗ ಕಾರ್​ ಲೋನ್​ ಸಿಗೋದು ಸ್ವಲ್ಪ ಕಷ್ಟ ಹಾಗಂತ ಸಿಗೋದೇ ಇಲ್ಲ ಅಂತೇನಲ್ಲ. ಆದರೆ ಹೆಚ್ಚಿಗೆ ಬಡ್ಡಿಯನ್ನ ಪಾವತಿ ಮಾಡಬೇಕಾಗುತ್ತೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿಮಗೇನಾದ್ರೂ ಲೋನ್​ನಲ್ಲಿ ಕಾರ್​ ಕೊಳ್ಳುವ ಮನಸಿದ್ರೆ ಉತ್ತಮ ಸಿಬಿಲ್​ ಸ್ಕೋರ್​ ಅಂದ್ರೆ 700 ಅದಕ್ಕಿಂತ ಹೆಚ್ಚು ಸ್ಕೋರ್​ ಇಟ್ಟುಕೊಂಡಿದ್ರೆ ಆರಾಮವಾಗಿ ಲೋನ್ ಪಡೆದು ಕಾರಿನಲ್ಲಿ ಅಡ್ಡಾಡಬಹುದು.

advertisement

Leave A Reply

Your email address will not be published.