Karnataka Times
Trending Stories, Viral News, Gossips & Everything in Kannada

Tobacco Farming: ತಂಬಾಕು ಬೆಳೆ ಬೆಳೆಯುವ ರೈತರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್, ಮಹತ್ವದ ಘೋಷಣೆ!

advertisement

ಕರ್ನಾಟಕದಲ್ಲಿ ರೈತರಿಗೆ ಹಿಂದಿನಿಂದಲೂ ಬಹಳ ಪ್ರಶಾಸ್ತ್ಯ ನೀಡುತ್ತಲೆ ಬಂದಿದೆ. ಹೌದು ರೈತರೆ ಈ ದೇಶದ ಮುಖ್ಯ ಅಂಗವಾಗಿದ್ದು ಸರಕಾರ ಕೂಡ ರೈತರ ಏಳಿಗೆಗಾಗಿ ಹಲವು ರೀತಿಯ ಸೌಲಭ್ಯ ಜಾರಿಗೆ ತರುತ್ತಲೆ ಇದೆ. ರೈತರಿಗೆ ತಾವು ಬೆಳೆದ ಬೆಳೆ ಫಸಲು‌ ಕೊಟ್ಟರೆ ಮಾತ್ರ ಜೀವನ ನಡೆಸಲು ಸಾಧ್ಯ, ಒಂದು ವೇಳೆ ಇಳುವರಿ ಇಲ್ಲವಾದರೆ ಜೀವನ ನಡೆಸಲು ಕಷ್ಟ ಸಾಧ್ಯ.‌ ಅದಕ್ಕಾಗಿ ಬೆಳೆ ಹಾನಿ, ಬೆಳೆ ನಷ್ಟದ ಸಂದರ್ಭದಲ್ಲಿ ಸರಕಾರ ಬೆಳೆ ವಿಮೆ ಪರಿಹಾರ ನೀಡುತ್ತದೆ. ಇದೀಗ ಕೇಂದ್ರ ಸರಕಾರವು ತಂಬಾಕು ಬೆಳೆಗಾರರಿಗೆ ಆರ್ಥಿಕ ಉತ್ತೇಜನ ನೀಡುತ್ತಿದೆ.

ಮಳೆ ಹಾನಿಯಿಂದ ತಂಬಾಕು ಬೆಳೆ ನಷ್ಟ:

ಆಂಧ್ರ ಪ್ರದೇಶದಲ್ಲಿ ತಂಬಾಕು ಬೆಳೆ (Tobacco Farming) ಅಧಿಕ,ಈಗಾಗಲೇ ಡಿಸೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಅಲ್ಲಿನ ಬೆಳೆ ಹಾನಿಗೊಳಗಾದ ಆಂಧ್ರಪ್ರದೇಶದ ತಂಬಾಕು ರೈತರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಸುಮಾರು 20 ಪ್ರತಿಶತದಷ್ಟು ಭಾರಿ ಮಳೆಯಿಂದಾಗಿ ಹಾನಿಯಾಗಿದೆ. ಅಪಾರ ಮಳೆಯ ಪ್ರಮಾಣದಿಂದ ತಂಬಾಕು ಉತ್ಪಾದನೆ ಶೇ.50ರಷ್ಟು ಕುಂಠಿತವಾಗಿದ್ದು, ತಂಬಾಕು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಂಡಮಾರುತದ ಮಳೆಯಿಂದಾಗಿ ಆಂಧ್ರಪ್ರದೇಶದ ಏಲೂರು, ಪೂರ್ವ ಗೋದಾವರಿ, ಕಾಕಿನಾಡ, ಹೀಗೆ ಹಲವು ಪ್ರದೇಶದಲ್ಲಿ ಹಾನಿಯಾಗಿದೆ.

ಬಡ್ಡಿ ರಹಿತ ಸಾಲ:

 

advertisement

 

ಆಂಧ್ರಪ್ರದೇಶದಲ್ಲಿ ಇದೀಗ ತಂಬಾಕು ಬೆಳೆಗಾರರು (Tobacco Farmers) ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಅಲ್ಲಿನ ರೈತರಿಗೆ ಸಹಾಯ ಹಸ್ತವನ್ನು ನೀಡಲು ಮುಂದಾಗಿದೆ. ರೈತರ ಸಂಕಷ್ಟವನ್ನು ಕಡಿಮೆ ಮಾಡಲು ತಂಬಾಕು ಮಂಡಳಿಯ ಬೆಳೆಗಾರರ ​​ಕಲ್ಯಾಣ ನಿಧಿಯಿಂದ 10,000/ ಬಡ್ಡಿ ರಹಿತ ಸಾಲವನ್ನು ಬೆಳೆಗಾರ ಸದಸ್ಯರಿಗೆ ಅನುಮೋದಿಸಿದೆ.

ಹರಾಜು ಪ್ರಕ್ರಿಯೆ:

ಕರ್ನಾಟಕದಲ್ಲಿ ಎಫ್‌ಸಿವಿ ತಂಬಾಕು ಹರಾಜು ನಡೆಯುತ್ತಿದ್ದು ಪ್ರಸ್ತುತ ಆಂಧ್ರಪ್ರದೇಶದಲ್ಲಿ 42,915 ಎಫ್‌ಸಿವಿ ತಂಬಾಕು ಬೆಳೆಗಾರರನ್ನು ಹೊಂದಿದ್ದು, 39,552 ಎಫ್‌ಸಿವಿ ತಂಬಾಕು ಬೆಳೆಗಾರರು ಇರಲಿದ್ದು ಕರ್ನಾಟಕದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.ಇದೀಗ ಅಲ್ಲಿನ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು ಬಡ್ಡಿ ರಹಿತ ಸಾಲದ ಮೊತ್ತವನ್ನು ಆಯಾ ತಂಬಾಕು ಬೆಳೆಗಾರರ ​​ಹರಾಜು ಮಾರಾಟದ ಆದಾಯದಿಂದ ಮರು ಪಡೆಯಲಾಗುತ್ತದೆ ಎನ್ನಲಾಗಿದೆ.

advertisement

Leave A Reply

Your email address will not be published.