PhonePe Account: ATM ಕಾರ್ಡ್ ಇಲ್ಲದೇ ಫೋನ್ ಪೇ ಖಾತೆ ತೆಗೆಯುವ ಸುಲಭ ಮಾರ್ಗ ಇಲ್ಲಿದೆ!
ಪ್ರಸ್ತುತ ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಡಿಜಿಟಲ್ ಪೇ ನಲ್ಲಿ ಬಹಳ ಉತ್ತಮ ಸ್ಥಾನದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಲೇ ಇದ್ದಾರೆ. ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಬೆಂಬಲಿಸುವ ಅನೇಕ ಆ್ಯಪ್ ಇಂದು ಚಿರ ಪರಿಚಿತವಾಗುತ್ತಿವೆ.ಅವುಗಳಲ್ಲಿ ಪೋನ್ ಪೇ (PhonePe) ಕೂಡ ಒಂದಾಗಿದೆ. ಹಣವನ್ನು ಪಾವತಿ ಮಾಡಲು ,ಸ್ವೀಕಾರ ಮಾಡಲು ಇತ್ಯಾದಿ ಹಣಕಾಸು ವಹಿವಾಟಿನಲ್ಲಿ ಫೋನ್ ಪೇ ಬಳಕೆಯನ್ನು ದಿನನಿತ್ಯ ಮಾಡುತ್ತಲೇ ಇದ್ದು ಫೋನ್ ಪೇ ಅಕೌಂಟ್ ಓಪನ್ ಮಾಡಲು ಬ್ಯಾಂಕ್ ಖಾತೆ ಲಿಂಕ್ ಮಾಡುವ ಅಗತ್ಯವಿದೆ. ಹಾಗಾಗಿ ಎಟಿಎಂ ಕಾರ್ಡ್ ಮೂಲಕ ಫೋನ್ ಪೇ ಅಕೌಟ್ (PhonePe Account) ಮಾಡಲಾಗುತ್ತದೆ.
ಫೋನ್ ಪೇ ಖಾತೆ (PhonePe Account) ಯನ್ನು ಹಣಕಾಸಿನ ವಹಿವಾಟಿನ ಉದ್ದೇಶಕ್ಕಾಗಿ ಮಾಡಿದ್ದರೂ ಎಷ್ಟೋ ಬಾರಿ ಬ್ಯಾಂಕ್ ಲಿಂಕ್ ಮಾಡುವುದೇ ಸಮಸ್ಯೆದಾಯಕವಾಗುತ್ತದೆ. ನಮ್ಮ ATM Card ನ ಸಮಸ್ಯೆಯಿಂದಾಗಿ ಫೋನ್ ಪೇ ಅಪ್ಲಿಕೇಶನ್ ಬಳಸಲು ಸಾಧ್ಯವಾಗದೆ ಇರಬಹುದು ಹಾಗಾಗಿ ಈ ಬಗ್ಗೆ ಇನ್ನು ಮುಂದೆ ನೀವು ಚಿಂತೆ ಮಾಡದೆ ATM Card ಬಳಸದೆ ಫೋನ್ ಪೇ ಅಪ್ಲೋಡ್ ಮಾಡಬಹುದಾಗಿದೆ. ಅದು ಹೇಗೆ ಯಾವ ರೀತಿ ಎಂಬ ಅನೇಕ ವಿಧದ ಮಾಹಿತಿ ಇಲ್ಲಿ ನಾವು ನೀಡಲಿದ್ದೇವೆ.
UPI ID ರಚಿಸಿ:
ನೀವು ಎಟಿಎಂ ಕಾರ್ಡ್ (ATM Card) ಇಲ್ಲದಿದ್ದರೂ PhonePe ಬಳಸಬಹುದು ಅದಕ್ಕಾಗಿ ನೀವು UPI ID ಮಾಡಿರಬೇಕು. ಯುಪಿಐ ಐಡಿ ಮಾಡಲು ಆಧಾರ್ ಕಾರ್ಡ್ ಮೂಲಕ UPI ಐಡಿ ನಿರ್ಮಾಣ ಮಾಡಬಹುದು. ಅದಕ್ಕಾಗಿ ಮೊದಲು ನೀವು UPI ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ನಮೋದಿಸಿದ ಬಳಿಕ OTP ಬರಲಿದೆ ಅದನ್ನು ಸಹ ಪರಿಶೀಲಿಸಬೇಕು.
ಬ್ಯಾಂಕ್ ಖಾತೆ ಲಿಂಕ್ ಕಡ್ಡಾಯ:
UPI ನಲ್ಲಿ ನೋಂದಣಿ ಪ್ರಕ್ರಿಯೆ ಆಯ್ಕೆ ಮಾಡಿ ಅದರಲ್ಲಿ ಆಧಾರ್ ಬಳಸಿ UPI ID ರಚಿಸಿ ಆಯ್ಕೆ ಮಾಡಿಕೊಳ್ಳಿ ಅದರಲ್ಲಿ ನಿಮ್ಮ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ನಮೋದಿಸಿ.ಬಳಿಕ OTP ಆಧಾರ್ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಬರಲಿದೆ. ಹೀಗೆ UPI ಐಡಿ ಮೂಲಕ ನೀವು PhonePe ಬಳಸಬಹುದು. ಅದೇ ರೀತಿ ಬ್ಯಾಂಕ್ ನಿಂದ UPI ಐಡಿ ರಚಿಸುವ ಮುನ್ನ ನಿಮ್ಮ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಹೊಂದಿದ್ದು KYC ಪ್ರಕ್ರಿಯೆ ಆಗಿರಬೇಕು.
ಪರ್ಯಾಯ ವ್ಯವಸ್ಥೆ ಕಂಡು ಕೊಳ್ಳುವುದು:
ಫೋನ್ ಪೇ ಇಲ್ಲದೆಯೂ ಕೂಡ ನೀವು ಅನೇಕ ಡಿಜಿಟಲ್ ವ್ಯಾಲೇಟ್ ಬಳಸಿ ಕೂಡ ನೀವು ಆನ್ಲೈನ್ ವಹಿವಾಟು ಮಾಡಬಹುದಾಗಿದೆ. ಸಾಂಪ್ರದಾಯಿಕ ಬ್ಯಾಂಕ್ ಖಾತೆಗಿಂತ ಡಿಜಿಟಲ್ ವ್ಯಾಲೆಟ್ ಗಳು ಸ್ವಲ್ಪ ವಿಭಿನ್ನ ಎಂದು ಹೇಳಬಹುದು. ಹೊಸದಾಗಿ ಡಿಜಿಟಲ್ ಪೇಮೆಂಟ್ ಆರಂಭ ಮಾಡುವವರಿಗೆ ಡಿಜಿಟಲ್ ವ್ಯಾಲೇಟ್ ಬಹುಮುಖ್ಯವಾಗಿದೆ. ಅದೇ ರೀತಿ ಡಿಜಿಟಲ್ ವ್ಯಾಲೇಟ್ ಬಳಸುವ ಮುನ್ನ ಅದರ ಷರತ್ತು ಮತ್ತು ನಿಯಮಗಳ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿರಿ. ಹೆಚ್ವು ನಂಬಿಕೆ, ವಿಶ್ವಾಸ ಇದ್ದರೆ ಮಾತ್ರವೇ ಬಳಸಿ. ನಿಮ್ಮ ಡೇಟಾ ಮಾಹಿತಿ ಗೌಪ್ಯವಾಗಿ ಇಡಬೇಕು ಇಲ್ಲವಾದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ.