Karnataka Times
Trending Stories, Viral News, Gossips & Everything in Kannada

UPI ID: ಕಳೆದುಕೊಂಡ ಮೊಬೈಲ್ ನ ಫೋನ್ ಪೇ, ಗೂಗಲ್ ಪೇ ಇತರ ವ್ಯವಹಾರ ನಿರ್ಬಂಧಿಸಲು ಈ ಸರಳ ಕ್ರಮ ಅನುಸರಿಸಿ

advertisement

ಇಂದು ಮಾರುಕಟ್ಟೆಯ ವ್ಯಾಪಾರ ಮತ್ತು ವ್ಯವಹಾರ ಬಹಳ ಸುಲಭ ಎಂದು ಹೇಳಬಹುದು. ಬದಲಾದ ಈ ಆಧುನಿಕ ಕಾಲಘಟ್ಟದಲ್ಲಿ ವ್ಯವಹಾರಗಳು ಆನ್ಲೈನ್ ನತ್ತ ಹಾದಿ ಹಿಡಿಯುವ ಕಾರಣ ವ್ಯವಸ್ಥೆಗಳೆಲ್ಲ ಸರಳವಾಗುತ್ತಿದೆ. ಸಣ್ಣ ಪುಟ್ಟ ವಸ್ತುವಿನಿಂದ ದುಬಾರಿ ವಸ್ತುವಿನ ವರೆಗೂ ಖರೀದಿ ಮಾಡಲು ಆನ್ಲೈನ್ ಪ್ಲ್ಯಾಟ್ ಫಾರ್ಮ್ (Online Platform) ಬಹಳ ಉಪಯುಕ್ತವಾಗಿದೆ.

ಹೀಗಾಗಿ ಎಲ್ಲ ಕಿರಣಿ, ಆಹಾರ (Food) ಉತ್ಪನ್ನ ಮತ್ತು ಮಾರಾಟ ಇತರ ವಸ್ತುಗಳ ಆಂಗಡಿಯಲ್ಲಿ ಗೂಗಲ್ ಪೇ (Google Pay), ಫೋನ್ ಪೇ (Phone Pe), ಪೇಟಿಎಂ (Paytm) ಇತರ ಆಯ್ಕೆ ಇರುವುದನ್ನು ನಾವು ಕಾಣಬಹುದು. ಆದರೆ ಯುಪಿಐ ಪೇಮೆಂಟಿನಿಂದ ತೊಂದರೆ ಕೂಡ ಸಾಕಷ್ಟಿದ್ದು ಈ ಬಗ್ಗೆ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ‌.

ಗಮನ ಅಗತ್ಯ:

ಎಷ್ಟೊ ಬಾರಿ ಸ್ಮಾರ್ಟ್ ಫೋನ್ ಕಳೆದುಕೊಂಡಂತಹ (Lost Smartphone) ಸಂದರ್ಭದಲ್ಲಿ ನಮ್ಮ ಫೋನಿನಿಂದ ಬ್ಯಾಂಕ್ ವ್ಯವಹಾರದ ಮೇಲೆ ಅಕ್ರಮ ವ್ಯವಹಾರಗಳನ್ನು ಮಾಡುವ ಸಾಧ್ಯತರ ಇರುತ್ತದೆ. ಅದೇ ರೀತಿ ನಿಮ್ಮ ಫೋನ್ ಅನ್ನು ಕದಿಯುವ ಮೂಲಕ ಹಣ ದೋಚಲು ಬಹುದು ಹಾಗಾಗಿ ಅಂತಹ ಸಂದರ್ಭ ನಿಮ್ಮ ಬ್ಯಾಂಕಿನ ವ್ಯವಹಾರ ಮೊಟಕು ಗೊಳಿಸುವ ಆಯ್ಕೆ ಕೂಡ ನಿಮ್ಮ ಬಳಿ ಇದ್ದು ಈ ಬಗ್ಗೆ ಗಮನ ಹರಿಸುವುದು ಅತ್ಯವಶ್ಯಕವಾಗಿದೆ.

 

advertisement

ಹೀಗೆ ಮಾಡಿ:

ನಿಮ್ಮ ಫೋನ್ ಅನ್ನು ನೀವು ಕಳೆದುಕೊಂಡಂತಹ ಸಂದರ್ಭದಲ್ಲಿ ಕೆಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲೇಬೇಕು. ನೀವು ಸಹಾಯವಾಣಿ ಸಂಖ್ಯೆ 01204456456 ಕರೆ ಮಾಡಬೇಕು. ಅದರಲ್ಲಿ ನಿಮ್ಮ ಫೋನ್ ಆಯ್ಕೆ ಕ್ಲಿಕ್ ಮಾಡಿರಿ. ಬಳಿಕ ನಿಮ್ಮ ಮೊಬೈಲ್ ಸಂಖ್ಯೆ (Mobile Number) ನಮೋದಿಸಿ. ಬಳಿಕ ನೀವು ಫೋನ್ ಪೇ (Phone Pe), ಗೂಗಲ್ ಪೇ (Google Pay), ಪೇಟಿಎಂ (Paytm) ಅಥವಾ ಇತರ ಆಯ್ಕೆಯಲ್ಲಿ ಲಾಗ್ ಔಟ್ ಆಪ್ಶನ್ ಬರಲಿದೆ. ಅದರಲ್ಲಿ ನಿಮ್ಮ ಕೆಲ ವೈಯಕ್ತಿಕ ವಿವರ ಕೇಳಲಾಗುವುದು ಎಲ್ಲ ದಾಖಲಾತಿ ಮ್ಯಾಚ್ ಆದ ಬಳಿಕ ನೀವು ನಿರ್ಬಂಧ ಮಾಡಲು ಬಯಸಿದ್ದ ಖಾತೆ ನಿರ್ಬಂಧಿಸಬಹುದು.

ಪ್ರತ್ಯೇಕ ಸಂಖ್ಯೆ ಇದೆ:

ಫೋನ್ ಪೇ (Phone Pe) ಮತ್ತು ಗೂಗಲ್ ಪೇ (Google Pay) ನಿರ್ಬಂಧ ಮಾಡಲು ಕೂಡ ಪ್ರತ್ಯೇಕ ಆಯ್ಕೆ ಇರುವುದನ್ನು ಕಾಣಬಹುದು. ಫೋನ್ ಪೇ ನಿರ್ಬಂಧ ಮಾಡಲು 18004190157 ಹಾಗೂ ಗೂಗಲ್ ಪೇ ನಿರ್ಬಂಧಿಸಲು 08068727374 ಈ ನಂಬರ್ ಗೆ ಕರೆ ಮಾಡಬೇಕು. ಅದರಲ್ಲಿ UPI ಐಡಿಗೆ ಲಿಂಕ್ ಮಾಡಿದ್ದ ಮೊಬೈಲ್ ಸಂಖ್ಯೆ (Mobile Number) ನಮೋದಿಸುವ ಮೂಲಕ ಲಾಗಿನ್ ಆಗಬಹುದು. ಬಳಿಕ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ಕೇಳಲಾಗುವುದು ಅದನ್ನು ನೀವು ಸಲ್ಲಿಸಿದ್ದಾಗ ಕಸ್ಟಮರ್ ಕೇರ್ (Customer Care) ಮೂಲಕ ನಿಮ್ಮ ವಿವರ ಪಡೆಯಲಾಗುವುದು. ಕಸ್ಟಮರ್ ಕೇರ್ ಮೂಲಕ UPI ಐಡಿ ಬಗ್ಗೆ ಅಧಿಕ ಮಾಹಿತಿ ಪಡೆದು ಐಡಿ ನಿರ್ಬಂಧ ಮಾಡಲಾಗುವುದು.

advertisement

Leave A Reply

Your email address will not be published.