Karnataka Times
Trending Stories, Viral News, Gossips & Everything in Kannada

Marriage Age: ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿ‌ ಹೆಚ್ಚಳ, ಮಹತ್ವದ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ!

advertisement

ಹಿಂದೆಲ್ಲ ಬಾಲ್ಯ ವಿವಾಹದ ಪ್ರಮಾಣ ತುಂಬಾ ಅಧಿಕವಾಗಿತ್ತು ಹಾಗಾಗಿ ಬಾಲ್ಯ ವಿವಾಹ ವಾದವರಿಗೆ ಚಿಕ್ಕ ವಯಸ್ಸಿಗೆ ಮಗು ಆಗುವುದು ಇತರ ಕಾಯಿಲೆ ಬರುವುದು ಮಾತ್ರವಲ್ಲದೇ ಸಾಕಷ್ಟು ಆರೋಗ್ಯ ಸಮಸ್ಯೆ ಸಹ ಬರುತ್ತಿತ್ತು, ಆದರೆ ಕಾಲ ಕ್ರಮೇಣ ಸರಕಾರ, ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿ ರೂಪುಗೊಳ್ಳುತ್ತಿದ್ದು ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಗೆ ತರುವ ಜೊತೆಗೆ ಬಾಲ್ಯ ವಿವಾಹ ವ್ಯವಸ್ಥೆಯನ್ನು ಸಹ ತೆಗೆದುಹಾಕಲಾಯಿತು.ಈ ಮೂಲಕ ಹೆಣ್ಣು ಮಕ್ಕಳಿಗೆ 18 ವರ್ಷ ವಾಗದೇ ಮದುವೆ ಮಾಡಿಸಬಾರದು ಎಂಬ ನಿಯಮವೂ ಚಾಲ್ತಿಗೆ ಬಂದಿದೆ.

ಈ ನಿಯಮ ಬಂದ ಕಾರಣಕ್ಕೆ ಗ್ರಾಮೀಣ ಭಾಗದ, ಬುಡಕಟ್ಟು ಜನಾಂಗ ಸೇರಿದಂತೆ ಅನೇಕ ಭಾಗದ ಮಹಿಳೆಯರು ಶಿಕ್ಷಣ ಪಡೆದು ಅನೇಕ ಮರ್ಯಾದಸ್ತ ಉದ್ಯೋಗದಲ್ಲೂ ಇದ್ದಾರೆ‌. ಈ ನಡುವೆ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು ಏರಿಸಬೇಕು ಎಂಬ ಪ್ರಸ್ತಾಪನೆ ಸಲ್ಲಿಕೆ ಆಗುತ್ತಿದ್ದು ಸದ್ಯ ಇದೇ ಒಂದು ಅನುಸಾರವಾಗಿ ಹಿಮಾಚಲ ಪ್ರದೇಶದ ಸರಕಾರ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ (Marriage Age) ಮಿತಿ ಏರಿಸಲು ತೀರ್ಮಾನಿಸಿದೆ.

ಎಷ್ಟು ಏರಿಕೆ?

ಪ್ರಸ್ತುತ 18 ವರ್ಷ ವಿವಾಹ ವಯಸ್ಸಿನ ಮಿತಿ ಇದ್ದು ಹೆಚ್ಚುವರಿಯಾಗಿ ಮೂರು ವರ್ಷ ವಯಸ್ಸಿನ ಮಿತಿ ಏರಿಸಲು ಹಿಮಾಚಲ ಪ್ರದೇಶದ ಸರಕಾರ ನಿರ್ಧಾರ ಕೈಗೊಂಡಿದೆ. ಅಲ್ಲಿನ ಮುಖ್ಯ ಮಂತ್ರಿಯವರಾದ ಸಖ್ವಿಂದರ್ ಸಿಂಗ್ ಸುಖ್ಖು (Sukhvinder Singh Sukhu) ಅವರು ಫೆಬ್ರವರಿ 26 ರಂದು ಕಿಲಾಂಗ್ ನಲ್ಲಿ ನಡೆದ ಲಹೌಲ್ ಶರದ್ ಉತ್ಸವ್ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಬಳಿಕ ಈ ಬಗ್ಗೆ ಮಾತನಾಡಿದ್ದಾರೆ.

advertisement

ಅಲ್ಲಿನ ಸಿಎಂ ಹೇಳಿದ್ದೇನು?

ಹಿಮಾಚಲ ಪ್ರದೇಶದ ಸಿಎಂ ಸಖ್ವಿಂದರ್ ಸಿಂಗ್ ಸುಖ್ಖು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಶೀಘ್ರ ಹೊಸ ಯೋಜನೆಯೊಂದು ಜಾರಿಗೆ ಬರಲಿದೆ. ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸಲು ನಿರ್ಧಾರ ಮಾಡಲಾಗಿದೆ. ಇದರಿಂದಾಗಿ ಹೆಣ್ಣು ಮಕ್ಕಳಿಗೂ ಅನೇಕ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು , ಸಾಧನೆ ಮಾಡಲು ಸಮಯಾವಕಾಶ ನೀಡಿದಂತಾಗುವುದು. ಈ ಮೂಲಕ ವಿವಾಹ ವಯಸ್ಸನ್ನು ಏರಿಸಿದ್ದ ಮೊದಲ ರಾಜ್ಯ ಹಿಮಾಚಲ ಪ್ರದೇಶ ಆಗಲಿದೆ ಎಂದು ಹೇಳಿದ್ದಾರೆ.

ಅಧಿವೇಶನದಲ್ಲಿ ಚರ್ಚೆ

ಮುಂಬರುವ ಚುನಾವಣೆಯ ಸಂದರ್ಭಕ್ಕೆ ಸರಿಯಾಗಿ ವಿಧಾನ ಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18 ವರ್ಷಕ್ಕೆ ಬದಲಿಗೆ 21ವರ್ಷಕ್ಕೆ ಏರಿಸಲು ಸರಕಾರ ತೀರ್ಮಾನ ಕೈಗೊಂಡಿದೆ‌. ಹಾಗಾಗಿ ಸರಕಾರ ಈಗಾಗಲೇ ಕಾನೂನು ನಿಬಂಧನೆ ಸಹ ಸಿದ್ದಪಡಿಸಿದೆ. ಅಧಿವೇಶನದ ಬಳಿಕ ಈ ನಿಯಮ ಹಿಮಾಚಲ ಪ್ರದೇಶದಲ್ಲಿ ಜಾರಿಯಾಗಲಿದೆ ಎನ್ನಬಹುದು.

advertisement

Leave A Reply

Your email address will not be published.