Karnataka Times
Trending Stories, Viral News, Gossips & Everything in Kannada

Guarantee Scheme: ಎಲೆಕ್ಷನ್ ಗೂ ಮುನ್ನವೇ ಗ್ಯಾರಂಟಿ ಯೋಜನೆ ಬಗ್ಗೆ ಕಹಿಸುದ್ದಿ! ಕಾಂಗ್ರೆಸ್ ಶಾಸಕ ಹೇಳಿದ್ದೆ ಬೇರೆ

advertisement

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ಚುನಾವಣೆ ಮೊದಲು ಗ್ಯಾರಂಟಿ ಯೋಜನೆ (Guarantee Scheme) ಗಳನ್ನು ಘೋಷಣೆ ಮಾಡುವ ಮೂಲಕ‌ ಮತದಾರರ ಗಮನ ಸೆಳೆದಿತ್ತು.‌ ಐದು ಗ್ಯಾರಂಟಿ ಯೋಜನೆಗಳನ್ನು ಎಲ್ಲ ವರ್ಗದ ಜನತೆಗೆ ನೀಡುವ ಮೂಲಕ ವಿಧಾನಸಭೆ ಚುನಾವಣೆ ಯಲ್ಲಿ ಹೆಚ್ಚಿನ ಮತ ಗಳಿಸಿತ್ತು. ಈಗಾಗಲೇ ಹೇಳಿದ ಮಾತಿನಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಬಳಕೆಯನ್ನು ಜನತೆ ಪಡೆಯುತ್ತಿದೆ.‌ ಗ್ಯಾರಂಟಿ‌ ಯೋಜನೆ ಗಳ ಬಗ್ಗೆ ಹೆಚ್ಚಿನ ಜನತೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದು ಬಡವರ್ಗದ ಜನತೆಗೆ ನೆರವಾಗುತ್ತಿದೆ ಎಂದು ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ಇನ್ನೇನು ಲೋಕಸಭೆ ಚುನಾವಣೆ ಕೂಡ ನಡೆಯಲಿದ್ದು ಮತದಾರರ ಗಮನ ಸೆಳೆಯಲು ಹೊಸ ಯೋಜನೆಗಳನ್ನು ಆರಂಭ ಮಾಡುವ ಪ್ರಣಾಳಿಕೆ ಯನ್ನು ಕಾಂಗ್ರೆಸ್ ಸರಕಾರ ನೀಡಿದ್ದು ಗ್ಯಾರಂಟಿ ಯೋಜನೆ (Guarantee Scheme)ಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಂಗ್ರೆಸ್ ಶಾಸಕರು, ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಇದೀಗ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Karnataka Guarantee Schemes
Image Source: Vistara News

ಏನು ಹೇಳಿದ್ರು?

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಪ್ರದೀಪ್ ಈಶ್ವರ್ (Pradeep Eshwar) ಮಾತನಾಡಿದ್ದು ಗ್ಯಾರಂಟಿ ಯೋಜನೆಗಳ ಪ್ರಸ್ತಾಪ ಮಾಡಿದ್ದಾರೆ. ಮತದಾರರು ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಡಿ ಒಂದು ವೇಳೆ ನೀವು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಹುದು‌ ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

advertisement

ಶಾಸಕ ಬಾಲಕೃಷ್ಣ ಕೂಡ ಹೇಳಿಕೆ ನೀಡಿದ್ದರು

ಕೆಲವು ತಿಂಗಳ ಹಿಂದೆ ಇದೇ ಮಾತನ್ನು ಮಾಗಡಿ ಶಾಸಕ ಬಾಲಕೃಷ್ಣ ಅವರು ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಗೆ ಬೆಂಬಲ ನೀಡದಿದ್ದರೆ ಮತ ಹಾಕದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಲಾಗುತ್ತದೆ ಎನ್ನುವ ಹೇಳಿಕೆ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲದಿದ್ದರೆ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಒಲವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಗ್ಯಾರಂಟಿ ಯೋಜನೆಗಳ ಸ್ಥಗಿತ ಕೂಡ ಆಗಬಹುದು ಎನ್ನುವ ಹೇಳಿಕೆ ನೀಡಿದ್ದರು‌. ಇದೀಗ ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆ ಕೂಡ ಜನತೆಗೆ ಶಾಕ್ ನೀಡಿದೆ.

Image Source: Vistara News

ಲೋಕಸಭೆ ಚುನಾವಣೆಗೆ ಐದು ಗ್ಯಾರಂಟಿ ಯೋಜನೆ (Guarantee Scheme)ಗಳ ಘೋಷಣೆ:

ಈ ಬಾರಿಯು ಮಹಿಳೆಯರಿಗಾಗಿ ಕಾಂಗ್ರೆಸ್ ಸರಕಾರವು ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು ಮಹಾಲಕ್ಷ್ಮಿ‌ ಯೋಜನೆಯ ಮೂಲಕ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ವರ್ಗಾವಣೆ ಮಾಡುವ ಪ್ರಾಣಾಳಿಕೆ‌ ನೀಡಿದೆ. ಅದೇ ರೀತಿ ಸರಕಾರಿ ಉದ್ಯೋಗದಲ್ಲಿ‌ ಶೇಕಡಾ 50 ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡುವುದು, ಆಶಾ ಕಾರ್ಯಕರ್ತರು ,ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನ ಹೆಚ್ಚಳ, ಕಾನೂನು ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು, ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದರಂತೆ ಹಾಸ್ಟೆಲ್‌ ನಿರ್ಮಾಣ ಮಾಡುವುದು ಇತ್ಯಾದಿ ಗ್ಯಾರಂಟಿ ಯೋಜನೆಯನ್ನು ಪ್ರಣಾಳಿಕೆ ಯಲ್ಲಿ ಇಟ್ಟಿದೆ.

advertisement

Leave A Reply

Your email address will not be published.