Karnataka Times
Trending Stories, Viral News, Gossips & Everything in Kannada

Bank Loan: ಬ್ಯಾಂಕ್ ಸಾಲ ಇದ್ದವರಿಗೆ ಇಂದು ಬೆಳಿಗ್ಗೆಯೇ ಕಹಿಸುದ್ದಿ! ಹೊಸ ರೂಲ್ಸ್

advertisement

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನ ತರಲಾಗಿದೆ. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಳಗೊಳಿಸಲು ನಿರ್ಧರಿಸಿದ್ದಾರೆ. ಹಾಗೂ ಈ ಬಗ್ಗೆ ಬ್ಯಾಂಕ್ ಗಳಿಗೆ ಆದೇಶ ಹೊರಡಿಸಿದ್ದು, ಗ್ರಾಹಕ ಸ್ನೇಹಿ ಸೌಲಭ್ಯವನ್ನು ಒದಗಿಸಿ ಕೊಡಬೇಕು ಎಂದು ಬ್ಯಾಂಕುಗಳಿಗೆ ತಿಳಿಸಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ ಸರಳವಾಗಿದ್ದರೆ ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಸಾಧ್ಯ ಎಂದು ಹೇಳಿದ್ದಾರೆ.

ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆ!

ಯು ಸಿ ಓ ಬ್ಯಾಂಕ್  (UCO Bank) ಬಡ್ಡಿ ದರ ಪರಿಷ್ಕರಿಸಿ ಹೊಸ ಬಡ್ಡಿದರ ಘೋಷಿಸಿದೆ. ಅದರ ಪ್ರಕಾರ ಸರ್ಕಾರಿ ಬ್ಯಾಂಕ್ ಗಳಲ್ಲಿ ಮಾರ್ಚ್ 10, 2024ರಿಂದ ಹೊಸ ಬಡ್ಡಿ ದರಗಳು ಅನ್ವಯವಾಗಲಿವೆ. ಈ ಬಡ್ಡಿ ದರಗಳು ಮನೆ ವಾಹನ ಅಥವಾ ವೈಯಕ್ತಿಕ ಸಾಲ ತೆಗೆದುಕೊಂಡವರಿಗೆ ಹೊರೆ ಆಗುವ ಸಾಧ್ಯತೆ ಇದೆ.

ಎಷ್ಟು ಬಡ್ಡಿದರ ಹೆಚ್ಚಿಸಲಾಗಿದೆ?

advertisement

ಬ್ಯಾಂಕ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಶೇಕಡ 0.05% ನಿಂದ ಶೇಕಡ 0.10% ವರೆಗೆ ಬ್ಯಾಂಕಿಂಗ್ ಬಡ್ಡಿ ದರ ಹೆಚ್ಚಿಸಲಾಗಿದೆ. ಬ್ಯಾಂಕಿನ MSLR ಬಡ್ಡಿದರ 8.10% ನಷ್ಟು ಆಗಿದೆ ಅಂದ್ರೆ ಪ್ರತಿ ತಿಂಗಳು 8.30% ನಷ್ಟು, ಮೂರು ತಿಂಗಳಿಗೆ ಶೇಕಡ 8.45% ನಷ್ಟು, ಆರು ತಿಂಗಳಿಗೆ ಶೇಕಡ 8.70% ಹಾಗೂ ಒಂದು ವರ್ಷಕ್ಕೆ ಶೇಕಡ 8.85% ನಷ್ಟು ಬಡ್ಡಿ ನಂತರ ನಿಗದಿಪಡಿಸಲಾಗಿದೆ.

ಅದೇ ರೀತಿ ಖಜಾನೆ ಬಿಲ್ ಬೆಂಚ್ಮಾರ್ಕ್ ಲಿಂಕ್ಡ್ ಲೆಂಡಿಂಗ್ (Treasury Bill Benchmark Linked Landing Rate) ದರ ಶೇ.7 ನಷ್ಟು ಆಗಿದೆ. 6 ತಿಂಗಳಿಗೆ ಶೇ. 7.10 ಈ ಹೊಸ ದರಗಳು ಜನವರಿ 10 2024ರಿಂದ ಅನ್ವಯವಾಗಲಿದೆ. ಇನ್ನು ರೆಪೋ ತರ ಶೇಕಡ 9.30% ನಷ್ಟು ಇದ್ದು, ಮಾರ್ಚ್ 15, 2023ರಿಂದ ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ.

MCLR ಎಂದರೇನು?

ಬ್ಯಾಂಕ್ ನೀಡುವ ಸಾಲದ (Bank Loan) ಕನಿಷ್ಠ ಬಡ್ಡಿ ದರವನ್ನು MCLR ಎಂದು ಕರೆಯಲಾಗುತ್ತದೆ. ಇದು ಫಂಡ್ ಆಧಾರಿತ ಸಾಲದ ಮಾರ್ಜಿನಲ್ ವೆಚ್ಚ. MCLR ಅನ್ನು ಏಪ್ರಿಲ್ 2016 ರಿಂದ ಬ್ಯಾಂಕ್ ಗಳು ಆರಂಭಿಸಿದೆ. ಸಾಲಕ್ಕೆ ವಿಧಿಸುವ ಬಡ್ಡಿಯ ಬದಲಿಗೆ ಎಂ ಸಿ ಎಲ್ ಆರ್ ಬಳಸಲಾಗುತ್ತದೆ.

advertisement

Leave A Reply

Your email address will not be published.