Karnataka Times
Trending Stories, Viral News, Gossips & Everything in Kannada

Aadhaar Card: ಈ ವಿಧಾನ ಅನುಸರಿಸಿ ಮನೆಯಲ್ಲಿಯೇ ಕುಳಿತು ಆಧಾರ್ ಅಪ್ಡೇಟ್ ಮಾಡಬಹುದು.

advertisement

ಈಗಂತೂ ದೇಶದಲ್ಲಿ ಬಹುತೇಕರು ಆಧಾರ್ ಕಾರ್ಡ್ (Aadhaar Card) ಅನ್ನು ಮಾಡಿಸಿಕೊಂಡಿರುತ್ತಾರೆ. ಈಗ ಇದು ಎಲ್ಲರೂ ತಪ್ಪದೆ, ಖಡ್ಡಾಯವಾಗಿ ಮಾಡಿಸಿಕೊಳ್ಳಬೇಕಾದ ಗುರುತಿನ ಕಾರ್ಡ್ (Identity Card) ಆಗಿದೆ. ಈ ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯ ಹೆಸರು (Name), ಜನ್ಮ ದಿನಾಂಕ (Birth Date), ಮೊಬೈಲ್ ಫೋನ್ ಸಂಖ್ಯೆ (Mobile Phone Number), ಮನೆಯ ವಿಳಾಸ ಹೀಗೆ ಏನಾದರೂ ಒಂದು ವಿವರ ಬದಲಾದರೂ ಸಹ ಅವುಗಳನ್ನು ಕೂಡಲೇ ಅಪ್ಡೇಟ್ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ, ಏಕೆಂದರೆ ಈ ಆಧಾರ್ ಕಾರ್ಡ್ ನಮ್ಮೆಲ್ಲಾ ವಿವರಗಳನ್ನು ಹೊಂದಿರುತ್ತದೆ ಮತ್ತು ಇವುಗಳು ಬದಲಾದಲ್ಲಿ, ಅವುಗಳನ್ನು ಕೂಡಲೇ ಅಪ್ಡೇಟ್ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.

ಈ ವಿವರಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಲು ಸ್ಥಳೀಯ ಆಧಾರ್ ಸೇವಾ ಕೇಂದ್ರ (Aadhaar Service Center) ಕ್ಕೆ ಹೋಗಬೇಕಾಗುತ್ತದೆ ಮತ್ತು ಪ್ರತಿ ಬಾರಿ ವಿವರಗಳನ್ನು ಅಪ್ಡೇಟ್ ಮಾಡುವಾಗ ನಾವು ನಮ್ಮ ಫಿಂಗರ್ ಪ್ರಿಂಟ್ (Finger Print) ಮತ್ತು ಕಣ್ಣುಗಳ ಫೋಟೋಗಳನ್ನು ನೀಡಬೇಕಾಗುತ್ತದೆ. ಆದರೆ ಈಗ ಹಾಗಿಲ್ಲ ಮನೆಯಲ್ಲಿಯೇ ಮೊಬೈಲ್ ಬಳಸಿ ಆಧಾರ್ ಅಪ್ಡೇಟ್ ಮಾಡಬಹುದಾಗಿದೆ.

ಯಾರು ಅಪ್ಡೇಟ್ ಮಾಡಬೇಕು?

 

 

advertisement

ಆಧಾರ್ ಕಾರ್ಡ್ (Aadhaar Card) ನಲ್ಲಿ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ (Biometric Data), ವಿಳಾಸ (Address), ಇಮೇಲ್ (Email), ಫೋನ್ ನಂಬರ್ (Phone Number) ಹಾಗೂ ಇತರ ಮಾಹಿತಿಗಳಲ್ಲಿ ಯಾವುದೇ ಬದಲಾವಣೆ ಆಗಿದ್ದರೆ ಅವುಗಳನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಮಗುವಿಗೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಐದು ವರ್ಷವಾದಾಗ ಹಾಗೂ 15 ವರ್ಷವಾದಾಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಈ ಸನ್ನಿವೇಶಗಳನ್ನು ಹೊರತುಪಡಿಸಿದರೆ ಸದ್ಯ UIDAI ಸೂಚನೆಯಂತೆ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದರೆ ಅದನ್ನು ಅಪ್ಡೇಟ್ ಮಾಡುವುದು ಅನಿವಾರ್ಯವಾಗಿದೆ.

ಮೊಬೈಲ್ ಬಳಸಿ Aadhaar Update ಮಾಡುವುದು ಹೇಗೆ?

 

 

  • UIDAI ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • Myaadhaar ಮೇಲೆ ಕ್ಲಿಕ್ ಮಾಡಿ.
  • ಆ ಬಳಿಕ ‘Update Aadhaar’ಆಯ್ಕೆ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
  • ಆ ಬಳಿಕ ‘Send OTP’ಬಟನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ನಮೂದಿಸಿ.
  • Login ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ ‘Address Update’ ಆಯ್ಕೆ ಮಾಡಿ.
  • ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.
  • ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ.
  • 15 ದಿನಗಳೊಳಗೆ ನಿಮ್ಮ ವಿಳಾಸ ಅಥವಾ ಇತರ ಯಾವುದೇ ಮಾಹಿತಿ ಆಧಾರ್ ನಲ್ಲಿ ಅಪ್ಡೇಟ್ ಆಗುತ್ತದೆ.
  • UIDAI ನ ಅಧಿಕೃತ ವೆಬ್ಸೈಟ್ ಯಾವುದೇ ನಾಗರೀಕರು ತಮ್ಮ ಬಯೋಮೆಟ್ರಿಕ್ ಮಾಹಿತಿ ಮತ್ತು ಹೆಸರು, ಮೊಬೈಲ್ ಸಂಖ್ಯೆಗಳನ್ನು, ಲಿಂಗ ಅನ್ನು ಮೊಬೈಲ್ ಬಳಸಿ ಅಪ್ಡೇಟ್ ಮಾಡಬಹುದಾಗಿದೆ.

advertisement

Leave A Reply

Your email address will not be published.