Karnataka Times
Trending Stories, Viral News, Gossips & Everything in Kannada

Fixed Deposit: ಈ ಬ್ಯಾಂಕ್ಗಳಲ್ಲಿ ಎಫ್ ಡಿ ಇಟ್ರೆ ಸಿಗುತ್ತೆ 9.21% ವರೆಗೆ ಬಡ್ಡಿ; ಹಿರಿಯ ನಾಗರಿಕರಿಗೆ ವಿಶೇಷ ಆಫರ್!

advertisement

ನೀವು ಹಿರಿಯ ನಾಗರಿಕರಾಗಿದ್ದು ಅಥವಾ ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರು ಇದ್ದಾರೆ ವೃದ್ಧಾಪ್ಯದಲ್ಲಿ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು ಎಂದು ನೀವು ಬಯಸಿದರೆ ಅವರ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ಆರಂಭಿಸಿ ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿ ಇಡುವುದು ಬಹಳ ಒಳ್ಳೆಯದು ಯಾಕೆಂದರೆ ಹಿರಿಯ ನಾಗರಿಕರು ಸ್ಥಿರ ಠೇವಣಿ (Fixed Deposit) ಇಟ್ಟಾಗ ಬ್ಯಾಂಕುಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ ಬೇರೆ ಬೇರೆ ರೀತಿಯ ಎಫ್ ಡಿ ಮೇಲಿನ ಬಡ್ಡಿ ದರವನ್ನು ನಿಗದಿಪಡಿಸಿವೆ. ಹೆಚ್ಚಿನ ಬಡ್ಡಿ ದರವನ್ನು ನೀಡುವ ಬ್ಯಾಂಕ್ಗಳು ಯಾವವು ನೋಡೋಣ.

Fincare Small Finance Bank:

 

 

ಈ ಬ್ಯಾಂಕ್ ನಲ್ಲಿ ಏಳು ದಿನಗಳಿಂದ 10 ವರ್ಷಗಳ ವರೆಗೆ ಸ್ಥಿರ ಠೇವಣಿ ಇಡಬಹುದು ಹಿರಿಯ ನಾಗರಿಕರು 3.60 % ನಿಂದ 9.21% ವರೆಗೆ ದೊಡ್ಡ ಮೊತ್ತದ ಪಡೆಯಬಹುದು. ಉದಾಹರಣೆಗೆ 750 ದಿನಗಳಲ್ಲಿ ಮೆಚೂರ್ ಆಗುವ Fixed Deposit ಮೇಲೆ 9.21% ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಕಳೆದ ಅಕ್ಟೋಬರ್ 28 2023 ರಿಂದ ಬ್ಯಾಂಕ್ ಉತ್ತಮ ಬಡ್ಡಿ ದರವನ್ನು ಘೋಷಿಸಿದೆ.

Jana Small Finance Bank:

 

 

ಈ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ 9% ವರೆಗೆ ಬಡ್ಡಿ ದರ ನೀಡಲಾಗುತ್ತಿದೆ ಜನವರಿ 2, 2024 ರಿಂದ ಈ ಹೊಸ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗಿನ Fixed Deposit ಮೇಲೆ 3.5% ನಿಂದ 9% ವರೆಗೆ ಬಡ್ಡಿ ಸಿಗುತ್ತದೆ. ಒಂದು ವರ್ಷಗಳಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಯ ಮೇಲೆ ಹಿರಿಯ ನಾಗರಿಕರು 9% ಬಡ್ಡಿ ಪಡೆಯಬಹುದು.

Suryoday Small Finance Bank:

 

advertisement

 

ಎರಡು ವರ್ಷ ಹಾಗೂ ಎರಡು ದಿನಗಳ Fixed Deposit ಮೇಲೆ ಹಿರಿಯ ನಾಗರಿಕರು 9.10% ಬಡ್ಡಿ ದರವನ್ನು ಪಡೆಯಬಹುದು. 2024 ಜನವರಿ 22 ರಿಂದ ಹೊಸ ಬಡ್ಡಿದರ ಪರಿಷ್ಕರಣೆ ಆಗಿದೆ. ಏಳು ದಿನಗಳಿಂದ 10 ವರ್ಷಗಳ ವರೆಗೆ ಪಕ್ವ ಆಗುವ FD ಮೇಲೆ 4.50% ಆರಂಭಿಕ ಬಡ್ಡಿ ದರದಿಂದ 9.10% ವರೆಗೆ ಬಡ್ಡಿ ಪಡೆಯಬಹುದು.

Utkarsh Small Finance Bank:

 

 

ಈ ಸಣ್ಣ ಫೈನಾನ್ಸ್ ಬ್ಯಾಂಕ್ ನಲ್ಲಿ ಏಳು ದಿನಗಳಿಂದ 10 ವರ್ಷಗಳ ವರೆಗಿನ ಎಫ್ ಡಿ ಠೇವಣಿ ಇಟ್ಟರೆ 4.60 ಪರ್ಸೆಂಟ್ ನಿಂದ 9.10% ವರೆಗೆ ಬಡ್ಡಿ ಸಿಗುತ್ತದೆ. 2023 ಆಗಸ್ಟ್ 21ರ ನಂತರ ಇಲ್ಲಿ ಠೇವಣಿ ಇಟ್ಟಿರುವ ಹಿರಿಯ ನಾಗರಿಕರಿಗೆ 2 ರಿಂದ 3 ವರ್ಷಗಳ ವರೆಗಿನ ಸ್ಥಿರ ಠೇವಣಿ ಮೇಲೆ 9.10% ಬಡ್ಡಿ ನೀಡಲಾಗುವುದು.

Unity Small Finance Bank:

 

 

ಜನವರಿ 2 2024 ರಿಂದ ಹೊಸ ಬಡ್ಡಿ ದರವನ್ನು ಈ ಬ್ಯಾಂಕ್ ಅಳವಡಿಸಿಕೊಂಡಿದೆ. ಗ್ರಾಹಕರು 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಸ್ಥಿರ ಠೇವಣಿಯ ಮೇಲೆ 4.50% ಇಂದ 9.50% ವರೆಗೆ ಬಡ್ಡಿ ದರ ಪಡೆಯಬಹುದು. 1001 ದಿನಗಳಲ್ಲಿ ಪಕ್ವವಾಗುವ fd ಹೂಡಿಕೆಯನ್ನು ಹಿರಿಯ ನಾಗರಿಕರು ಮಾಡಿದರೆ 9% ಬಡ್ಡಿ ದರವನ್ನು ನೀಡಲಾಗುವುದು.

ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತಲೂ ಸಣ್ಣ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಹೆಚ್ಚಿನ ಬಡ್ಡಿ ದರ ಸಿಗುವುದರಿಂದ ಹಿರಿಯ ನಾಗರಿಕರು ಇಂತಹ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇಡುವ ಬಗ್ಗೆ ಯೋಚಿಸಬಹುದು.

advertisement

Leave A Reply

Your email address will not be published.