Karnataka Times
Trending Stories, Viral News, Gossips & Everything in Kannada

Manaswini Yojana: ಗೃಹಲಕ್ಷ್ಮಿ ಹಣದ ಜೊತೆ ಈ 800 ರೂ ಹಣ ಕೂಡ ಮಹಿಳೆಯರ ಖಾತೆಗೆ! ಈಗಲೇ ಅರ್ಜಿ ಹಾಕಿ

advertisement

ಮಹಿಳೆಯರು ಅಭಿವೃದ್ಧಿ ಯಾಗಬೇಕು, ಆರ್ಥಿಕವಾಗಿ ಅವರು ಅಭಿವೃದ್ಧಿ ಯಾಗಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ರಾಜ್ಯಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಮನೆಯ ಹಿರಿಯ ಮಹಿಳೆಯ ಖಾತೆಗೆ ಎರಡು ಸಾವಿರ ರೂಪಾಯಿ ಯನ್ನು ಖಾತೆಗೆ ಜಮೆ ಮಾಡುತ್ತಿದೆ. ಈಗಾಗಲೇ ಈ ಯೋಜನೆಯ ಹಣ ಏಳು ಕಂತಿನ ವರೆಗೆ ಬಿಡುಗಡೆ ಗೊಂಡಿದ್ದು ಎಂಟನೇ ಕಂತಿನ ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಇದರ ಜೊತೆಗೆ ಮಹಿಳಾ ಪರವಾದ ಅನೇಕ‌ ಯೋಜನೆಗಳು ಇದ್ದು ಮಹಿಳೆಯರನ್ನು ಆರ್ಥಿಕವಾಗಿ ಬೆಂಬಲಿಸುತ್ತಿದೆ. ಅದೇ ರೀತಿ ಸರಕಾರವು ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದು ಹೇಗಿದೆ ಈ ಯೋಜನೆ? ಯಾರಿಗೆ ಈ ಯೋಜನೆಯ ಹಣ ಜಮೆಯಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಯಾರಿಗೆ ಈ ಯೋಜನೆ?

ಮನಸ್ವಿನಿ ಯೋಜನೆ (Manaswini Yojana) ಮೂಲಕವು ಮಹಿಳೆಯರಿಗೆ ಆರ್ಥಿಕ ಸೌಲಭ್ಯ ದೊರಕುತ್ತಿದೆ‌. ಇದರ ಅಡಿಯಲ್ಲಿ ಪ್ರತಿ ತಿಂಗಳು ಎಂಟನೂರು ರೂಪಾಯಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಯಾಗಲಿದ್ದು ಇದು ಮಹಿಳೆಯರ ಪಿಂಚಣಿ (Pension) ಯೋಜನೆಯಾಗಿದೆ.

 

Image Source: Udayavani

 

ಈ ಯೋಜನೆಯ ಸೌಲಭ್ಯವೂ ಬಡ ವರ್ಗದ ಮಹಿಳೆಯರಿಗೆ 40 ರಿಂದ 64 ವರ್ಷದೊಳಗಿರುವ 40 ರಿಂದ 64 ವರ್ಷದ ಒಳಗಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಈ ಹಣವನ್ನು ಸರಕಾರ ನೀಡುತ್ತಿದೆ. ಹೆಚ್ಚಿನ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು ಗೃಹಲಕ್ಷ್ಮಿ (Gruha Lakshmi) ಜೊತೆಗೆ ಈ ಯೋಜನೆಯ ಹಣವೂ ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗುತ್ತಿದೆ.

advertisement

ಈ ದಾಖಲೆ ಬೇಕು:

ಈ ಯೋಜನೆಯ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ (BPL Card) ಅಗತ್ಯವಾಗಿದ್ದು ಅವಿವಾಹಿತರು ವಿವಾಹ ಆಗಿಲ್ಲವೆಂದು ಹಾಗೂ ವಿಚ್ಛೇ ದಿತರು ವಿಚ್ಛೇದನ ಪಡೆದಿರುವ ಬಗ್ಗೆ ಸ್ವಯಂ ಪ್ರಮಾಣ ಪತ್ರ ಸಲ್ಲಿಸಬೇಕು.ಅದೇ ರೀತಿ‌ ಆದಾಯ ಪ್ರಮಾಣ ಪತ್ರ, ವಿಳಾಸದ ಬಗ್ಗೆ ದೃಢೀಕೃತ ದಾಖಲೆ ಮತ್ತು ವಯಸ್ಸಿನ ಪ್ರಮಾಣ ಪತ್ರ ಬೇಕು.

ಅರ್ಜಿ ಸಲ್ಲಿಸಿ:

 

Image Source: Fisdom

 

ಈ ಯೋಜನೆಯ ಸೌಲಭ್ಯ ಪಡೆಯಲು ಹತ್ತಿರ ಇರುವ ಸರಕಾರಿ ಕಚೇರಿ ಅಥವಾ ಅಟಲ್ ಜಿ ಸ್ನೇಹ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಹಾಕಬಹುದಾಗಿದೆ.ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ 40 ವರ್ಷದಿಂದ 65 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು ಅರ್ಜಿ ಹಾಕಬಹುದು. ಬಡತನದ ರೇಖೆಗಳಿಗಿಂತ ಕೆಳಗಿರುವ ಮಹಿಳೆಯರು ಅರ್ಜಿ ಹಾಕಬಹುದು. ಬೇರೆ ಯಾವುದೇ ಯೋಜನೆ ಅಡಿ ಯಾವುದೇ ಪಿಂಚಣಿಯನ್ನ ತೆಗೆದು ಕೊಳ್ಳುವವರು ಈ ಯೋಜನೆಯ ಫಲಾನುಭವಿಗಳು ಆಗಲು ಸಾಧ್ಯವಿಲ್ಲ.

advertisement

Leave A Reply

Your email address will not be published.