Karnataka Times
Trending Stories, Viral News, Gossips & Everything in Kannada

Highest Milk Producing Cow: ಕೇವಲ 8 ಹಸುಗಳಿಂದ 1 ದಿನಕ್ಕೆ 150 ಲೀಟರ್ ಹಾಲು! ಯಾವ ತಳಿ ಗೊತ್ತಾ?

advertisement

ಪಶು ಸಂಗೋಪನೆ ಹಾಗೂ ಹೈನುಗಾರಿಕೆಗಳು ಕೃಷಿಯ ಒಂದು ಭಾಗವೇ ಆಗಿದ್ದು ದನ ಕರುಗಳನ್ನು ಸಾಕಿ ಸಲಹಿ ಲಕ್ಷಾಂತರ ರೂಪಾಯಿ ಆದಾಯ ಪಡೆಯುವ ಅನೇಕ ವರ್ಗವನ್ನು ನಾವು ಕಾಣಬಹುದು. ದೇಸಿ ಹಸು ಮತ್ತುವಿದೇಶಿ ಹಸು ಎಂಬುದರಲ್ಲಿ ಅನೇಕ ಪ್ರಕಾರದ ತಳಿಗಳು ಕೂಡ ಇವೆ‌. ಇವುಗಳ ಆಧಾರದ ಮೇಲೆ ಲಾಭದ ಲೆಕ್ಕಾಚಾರ ಆಗಲಿದೆ. ಹಾಗಾಗಿ ನೀವು ಕೂಡ ಹೈನುಗಾರಿಕೆ ಮಾಡಬೇಕು ಎಂದಾದರೆ ಯಾವ ತಳಿಯ ಹಸು ನಿಮಗೆ ಉತ್ತಮ ಎಲ್ಲಿ ನಿಮಗೆ ಅಧಿಕ ಲಾಭ ಸಿಗಲಿದೆ ಎಂಬ ಪೂರ್ತಿ ವಿವರಣೆ ಇಲ್ಲಿದೆ.

ಯಾವ ತಳಿ ಉತ್ತಮ:

ದೇಶಿಯ ಹಾಗೂ ವಿದೇಶಿ ಹಸುವಿನಲ್ಲಿ ದೇಶೀಯ ಹಸುವಿನ ಹಾಲಿನ ಪ್ರಮಾಣ ಕಡಿಮೆ ಎಂದು ಹೇಳಬಹುದು. ದೇಶೀಯ ಹಸುವಿನಲ್ಲಿ ಜೆರ್ಸಿ ಹಸುವಿನ ತಳಿಗೆ ಅಧಿಕ ಬೇಡಿಕೆ ಇರುತ್ತದೆ ಅದಕ್ಕೆ ಮುಖ್ಯ ಕಾರಣ ಏನೆಂದರೆ ಇದರಲ್ಲಿ ಹಾಲಿನ ಫ್ಯಾಟಿ ಅಂಶ ಹೆಚ್ಚಿದ್ದು ಅಧಿಕ ಲಾಭ ಸಿಗಲಿದೆ. ಇನ್ನೊಂದು ತಳಿ ನೋಡುವುದಾದರೆ Holstein Friesian ತಳಿಯ ಹಸು ಹಾಲು, ಎಲ್ಲ ಇತರ ತಳಿಗಿಂತಲೂ ಅಧಿಕ ನೀಡಲಿದೆ. ಬರೋಬ್ಬರಿ 40ಲೀಟರ್ ವರೆಗೂ ಕೂಡ ಹಾಲನ್ನು ನೀಡಬಲ್ಲವು ಪಶುಸಂಗೋಪನೆ ಮಾಡುವವರಿಗೆ ಲಕ್ಷಾಂತರ ರೂಪಾಯಿ ಅಧಿಕ ಲಾಭ ಸಿಗಲಿದೆ.

ಮೂಲ ಎಲ್ಲಿದೆ?

 

Image Source: Breeds of Livestock

 

HF ನ ವಿಸ್ತ್ರತ ರೂಪ ನೋಡುವುದಾದರೆ Holstein Friesian ಎಂದು ನಾವು ಕಾಣಬಹುದು. ಇಂತಹ ಹಸುಗಳಿಗೆ ಕಪ್ಪು ಬಿಳಿ ಮಿಶ್ರ ರೂಪ ಇರಲಿದೆ. ಇದರ ಹೆಸರೆ ಸೂಚಿಸುವಂತೆ ಹೋಲ್ ಸ್ಟೈನ್ ಇದರ ಮೂಲವಾಗಿದ್ದು ಈಗ ಪ್ರಪಂಚದಾದ್ಯಂತ ಪಶುಸಂಗೋಪನೆ ನಿಮಿತ್ತ ಈ ಒಂದು ದನಗಳು ಹೆಚ್ಚು ಪ್ರಚಲಿತ ದಲ್ಲಿವೆ. ಉತ್ತರ , ದಕ್ಷಿಣ ಅಮೇರಿಕಾದಲ್ಲಿ ಇಂತಹ ಹಸುವಿಗೆ ಅಧಿಕ ಬೇಡಿಕೆ ಇದ್ದು HF ಹಸುವಿನ ತಳಿಯನ್ನು ಇತರ ದೇಶಕ್ಕೆ ಕೂಡ ರಫ್ತು ಮಾಡುವ ಚಟುವಟಿಕೆ ಅನೇಕ ವರ್ಷದ ಹಿಂದೆ ನಡೆದಿದೆ.

advertisement

ಯಾವ ಆಹಾರ ಮುಖ್ಯ:

ಹಸುಗಳು ಹಾಲನ್ನು ಜಾಸ್ತಿ ನೀಡಬೇಕು ಎಂದಾದರೆ ಪ್ರೋಟೀನ್ ಹಾಗೂ ಫೈಬರ್ ಯುಕ್ತ ಆಹಾರವನ್ನು ಹಸುಗಳಿಗೆ ನೀಡಬೇಕು. ಹಸುಗಳು ದಪ್ಪವಾಗಿದ್ದರೆ ಹಾಲಿನ ಇಳುವರಿ ಕೂಡ ಅಧಿಕ ಬರಲಿದೆ. ಅದೇ ರೀತಿ ನೀವು ದನ ಸಾಕಬೇಕು ಎಂದು ಕೊಂಡರೆ ಯಾವ ರೀತಿಯ ಹಸು ಆಯ್ಕೆ ಮಾಡುತ್ತೀರಿ ಎಂಬ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಸಿಗಲಿದೆ. ನೀವು 5-6ಲೀಟರ್ ಹಾಲು ನೀಡುವ ಹಸುಗಳನ್ನು ಸಾಕಿದರೆ ಅದರ ನಿರ್ವಹಣಾ ವೆಚ್ಚ, ಶ್ರಮಿಕರ ಕೆಲಸದ ವೇತನ ಅದಕ್ಕಿಂತ ಅಧಿಕ ಇರಲಿದೆ. ಹಾಗಾಗಿ ದಿನಕ್ಕೆ 15-20ಲೀಟರ್ ಆದರೂ ನೀಡುವ ಹಸುಗಳ ತಳಿ ಆಯ್ಕೆ ಮಾಡುವುದು ಉತ್ತಮ ಈ ನೆಲೆಯಲ್ಲಿ Holstein Friesian ತಳಿ ನಿಮಗೆ ಮೊದಲ ಆದ್ಯತೆ ಆಗಲಿದೆ.

 

Image Source: Scientific American

 

ಸಮಸ್ಯೆಗೆ ಪರಿಹಾರ ಇದೆ:

ಇಂತಹ ಹಸುಗಳು ಹಾಲನ್ನು ಅಧಿಕ ನೀಡುವ ಕಾರಣ ಕೆಚ್ಚಲು ಬಾವು ಸಮಸ್ಯೆ ಕಂಡು ಬರಲಿದೆ. ಇತ್ತೀಚೆಗಂತೂ ಮಿಶನ್ ನಲ್ಲಿ ಹಾಲು ಕರೆಯುವ ಕಾರಣ ಕರುವಿನ ಸ್ಪರ್ಷ ಸಿಗದೆ ನೋವು ಅಧಿಕವಾಗಲಿದೆ. ಕಾಲಕ್ಕೆ ತಕ್ಕಂತೆ ಸಮಸ್ಯೆ ನಿವಾರಿಸಲು ಸಾಕಷ್ಟು ಔಷಧೀಯ ಸಸ್ಯಗಳು ಕೂಡ ಇರಲಿದೆ. ಇವುಗಳ ಹಾಲಿನ ಪೂರೈಕೆ ಅಧಿಕವಾಗಿದ್ದು ಕರುಗಳಿಗೂ ಕೂಡ ಸಾಕಷ್ಟು ಹಾಲನ್ನು ನೀಡಬೇಕಾಗುವುದು ಇಲ್ಲದಿದ್ದರೆ ಅವುಗಳ ಬೆಳವಣಿಗೆ ಕುಂಟಿತವಾಗುವ ಸಾಧ್ಯತೆ ಇದೆ‌. ಹಾಗಾಗಿ ಹಾಲನ್ನು ಸ್ವಲ್ಪ ‌ಪ್ತಮಾಣದಲ್ಲಿ ಕರುಗಳಿಗಾಗಿ ಬಿಡಬೇಕು ಆಗ ಕೆಚ್ಚಲು ಬಾವು ನೋವು ಸಹ ದನಕ್ಕೆ ಬರಲಾರದು.

 

advertisement

Leave A Reply

Your email address will not be published.