Karnataka Times
Trending Stories, Viral News, Gossips & Everything in Kannada

Ration Card: ಎಲೆಕ್ಷನ್ ಗು‌ ಮುನ್ನವೇ ಸರ್ಕಾರದ ದೊಡ್ಡ ನಿರ್ಧಾರ, ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್

advertisement

ಬಡತನ ರೇಖೆಗಿಂತ ಕೆಳಗಿರುವವರಿಗೆ ಸಹಾಯಕವಾಗಲಿ,‌ಮೂಲಭೂತ ಅವಶ್ಯಕ ವಸ್ತುಗಳು ಸಿಗುವಂತೆ ಆಗಲಿ ಎಂಬ ನಿಟ್ಟಿನಲ್ಲಿ‌ ಆಹಾರ ಇಲಾಖೆಯು ಬಡ ವರ್ಗದ ಜನತೆಗೆ ಆಹಾರ ಧಾನ್ಯಗಳನ್ನು‌ವಿತರಣೆ ಮಾಡುತ್ತಿದೆ. ಇಂದು ರಾಜ್ಯ ಸರಕಾರವು‌ ರೇಷನ್ ಕಾರ್ಡ್ (Ration Card) ಇದ್ದವರಿಗೆ ಹೆಚ್ಚುವರಿ‌ ಅಕ್ಕಿಯ ಬದಲಾಗಿ ಖಾತೆಗೆ‌ ಹಣವನ್ನೂ‌ ಕೂಡ ಜಮೆ ಮಾಡುತ್ತಿದೆ.ಇಂದು ಬಿಪಿಎಲ್ (BPL) ಮತ್ತು ಅಂತ್ಯೋದಯ ರೇಷನ್ ಕಾರ್ಡ್ (Antyodaya Ration Card) ಪಡೆಯಲು ಹೆಚ್ಚಿನ ಜನರು ಸುಳ್ಳು ದಾಖಲೆ ಮಾಹಿತಿ ಗಳನ್ನು ನೀಡುವ ಮೂಲಕ ರೇಷನ್ ಕಾರ್ಡ್ ಮಾಡಿಸಿದ್ದಾರೆ. ಈಗಾಗಲೇ ಈ ಬಗ್ಗೆ ಆಹಾರ ಇಲಾಖೆಯು ಇಂತಹ ಸುಳ್ಳು ದಾಖಲೆ ನೀಡಿರುವ ದಾಖಲೆಗಳನ್ನು ಪತ್ತೆ ಹಚ್ಚಿದೆ.

ಯಾರ ರೇಷನ್ ಕಾರ್ಡ್ ರದ್ದು:

 

Image Source: DNA India

 

  • ಇದೀಗ ಆಹಾರ ಇಲಾಖೆಯು ರೇಷನ್ ಕಾರ್ಡ್ ಇದ್ದಂತಹ ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲನೆ ಮಾಡುವ ಮೂಲಕ ಕೆಲವೊಂದು ಕಾರ್ಡ್ ಗಳನ್ನು ರದ್ದು ಪಡಿಸಲು ತಿರ್ಮಾನ ಮಾಡಿದೆ. ಇದೀಗ ಹೆಚ್ಚು ಜಮೀನು, ಆಸ್ತಿ ಗಳನ್ನು ಹೊಂದಿದ್ದ ಜನತೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಮಾಡಿಸಿದವರ ಕಾರ್ಡ್ ಅನ್ನು ರದ್ದು ಪಡಿಸಲು ಆಹಾರ ಇಲಾಖೆಯು ತಿರ್ಮಾನ ಮಾಡಿದೆ.
  • ಅದೇ ರೀತಿ ರೇಷನ್ ಕಾರ್ಡ್ ಅನ್ನು ಪಡೆಯಲು ಕೆಲವೊಂದು‌ ಅರ್ಹತೆಗಳನ್ನು ನಿಗದಿ ಪಡಿಸಿದ್ದು ಅಂತಹ ಅರ್ಹತೆಗಳನ್ನು ಮೀರಿದ್ರೆ ಅಂತವರ ಬಳಿ ಬಿಪಿಎಲ್ ಕಾರ್ಡ್ (BPL Card) ಇದ್ರೆ ಅಂತವರ ಕಾರ್ಡ್ ರದ್ದು ಆಗಲಿದೆ.
  • ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಇದ್ದರೆ ಅಂತ ಕಾರ್ಡ್ ರದ್ದು ಆಗಲಿದೆ
  • ಕಳೆದ ಆರು ತಿಂಗಳಿನಿಂದ ಪಡಿತರ ಪಡೆಯದೇ,ಆಹಾರ ಧಾನ್ಯಗಳನ್ನು ಪಡೆದು ಕೊಳ್ಳದ ಜನರು ಬಹಳಷ್ಟು ಮಂದಿ ಇದ್ದಾರೆ. ರೇಷನ್ ಕಾರ್ಡ್ (Ration Card) ಮೂಲಕ ಕೇವಲ ಸರ್ಕಾರಿ ಯೋಜನೆಯ ಪ್ರಯೋಜನವನ್ನು‌ ಪಡೆದುಕೊಳ್ಳುವವರ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ.
  • ಸರ್ಕಾರಿ ನೌಕರಿ ಹೊಂದಿದ್ದು ಬಿಪಿಎಲ್ ರೇಷನ್ ಕಾರ್ಡ್ ಪಡೆದಿದ್ದರೆ ಅಂತವರ ಕಾರ್ಡ್ ರದ್ದು ಆಗಲಿದೆ.
  • ತಿಳಿಸಿರುವ ಆದಾಯ ಕ್ಕಿಂತ ಹೆಚ್ಚಿನ‌ ಆದಾಯ ಹೊಂದಿ ಬಿಪಿಎಲ್ ‌ಕಾರ್ಡ್ ಪಡೆದಿದ್ದರೆ ಅಂತವರ ಕಾರ್ಡ್ ರದ್ದು ಆಗಲಿದೆ.

advertisement

ನಿಮ್ಮ‌ ರೇಷನ್ ಕಾರ್ಡ್ ರದ್ದು ಆಗಿದೆಯಾ?

 

Image Source: Times Now

 

ನಿಮ್ಮ ರೇಷನ್ ಕಾರ್ಡ್ (Ration Card) ರದ್ದು ಆಗಿದೆಯೇ ಎಂದು ತಿಳಿದು‌ಕೊಳ್ಳಲು ಮೊದಲಿಗೆ ಆಹಾರ ಇಲಾಖೆಯ ಲಿಂಕ್ ಗೆ ತೆರಳಿ ಇಲ್ಲಿ‌ ಇ- ಸ್ಟೇಟಸ್ ನಲ್ಲಿ ರದ್ದು ಮಾಡಿರುವ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಎನ್ನುವ ಆಶ್ಚನ್ ಇರಲಿದ್ದು ಅಲ್ಲಿ‌ ಕ್ಲಿಕ್ ಮಾಡಿ, ನಂತರದಲ್ಲಿ‌ ನಿಮ್ಮ ಜಿಲ್ಲೆ,ಗ್ರಾಮ ಆಯ್ದು ಕೊಂಡು‌ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ವೋ ಎನ್ನುವ ಮಾಹಿತಿ ಕಂಡು ಹಿಡಿಯಬಹುದು.

ಹೊಸ ಕಾರ್ಡ್ ಗೂ ಅವಕಾಶ:

ಈಗಾಗಲೇ ಹೊ‌ಸರೇಷನ್ ಕಾರ್ಡ್ (New Ration Card) ಪಡೆಯಲು ರಾಜ್ಯದ ಕೆಲವೊಂದು ಜನತೆ ಬಹಳಷ್ಟು ಕಾಯುತ್ತಿದ್ದು ಈ ಬಗ್ಗೆ ಆಹಾರ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.‌ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದ ಅರ್ಜಿ ಪರಿಶೀಲನೆ ಮಾಡಿ ಕಾರ್ಡ್ ವಿತರಣೆ ಮಾಡುವ ಬಗ್ಗೆ ಮತ್ತು ಹೊಸ ಕಾರ್ಡ್ ಅರ್ಜಿ ಸಲ್ಲಿಕೆಯ ಬಗ್ಗೆಯು ಗುಡ್ ನ್ಯೂಸ್ ನೀಡಿದ್ದಾರೆ.

advertisement

Leave A Reply

Your email address will not be published.