Karnataka Times
Trending Stories, Viral News, Gossips & Everything in Kannada

Pension: LIC ಯ ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದರೆ ಜೀವನ ಪರ್ಯಂತ ₹12,000ಗೂ ಹೆಚ್ಚಿನ ಪಿಂಚಣಿ!

advertisement

ಸ್ನೇಹಿತರೆ, ಎಲ್ಐಸಿಯ ಹಲವು ಯೋಜನೆಗಳಲ್ಲಿ ಈ ಯೋಜನೆ ಜನರನ್ನು ಆಕರ್ಷಿಸುತ್ತಿದೆ, ಕೇವಲ ಒಮ್ಮೆ ಹೂಡಿಕೆ ಮಾಡಿ ಜೀವನ್ಪರಿಯಂತ ಪ್ರತಿ ತಿಂಗಳು 12 ಸಾವಿರಕ್ಕೂ ಹೆಚ್ಚಿನ ಹಣವನ್ನು ಪಿಂಚಣಿ ಪಡೆಯಬಹುದಾಗಿದೆ. 40 ರಿಂದ 80 ವರ್ಷದ ಹಿರಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಒಬ್ಬರೇ ಅಥವಾ ಪತಿ-ಪತ್ನಿ ಯೊಂದಿಗೆ ಜಂಟಿಯಾಗಿ ಈ ಸ್ಕೀಮನ್ನು ಖರೀದಿಸಬಹುದಾಗಿದೆ. ಅಷ್ಟಕ್ಕೂ ಈ ಯೋಜನೆ ಯಾವುದು? ಇದನ್ನು ಖರೀದಿಸುವುದು ಹೇಗೆ? ಎಷ್ಟು ಸಾವಿರ ಹೂಡಿಕೆ ಮಾಡಬೇಕು? ಹಾಗೂ ಇದರ ಬಡ್ಡಿ ದರ ಎಷ್ಟಿದೆ? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

40 ವರ್ಷ ಮೇಲ್ಪಟ್ಟವರಿಗೆ ಹೇಳಿ ಮಾಡಿಸಿದ ಸರಿಮಾಡಿಸಿದ ಯೋಜನೆ:

 

Image Source: Amar Ujala

 

ಪ್ರತಿಯೊಬ್ಬರು ತಾವು ದುಡಿದಂತಹ ಹಣದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಮುಂದಿನ ಭವಿಷ್ಯಕ್ಕೆಂದು ಉಳಿಸಿಡುತ್ತಾರೆ ಅಥವಾ ಕೆಲ ಯೋಜನೆಗಳಲ್ಲಿ ಹೂಡಿಕೆ ಮಾಡಿ ಅದರಿಂದ ಲಾಭವನ್ನು ಪಡೆಯುತ್ತಿರುತ್ತಾರೆ. ಅದರಲ್ಲೂ ಮುಖ್ಯವಾಗಿ 50 ವರ್ಷ ಮೇಲ್ಪಟ್ಟವರು ನಿವೃತ್ತಿಯಾದ (Retirement) ಬಳಿಕ ಇತರರ ಮೇಲೆ ಅವಲಂಬನೆಯಾಗಲು ಇಷ್ಟಪಡದೆ ಸ್ವಲ್ಪ ಸ್ವಲ್ಪ ಹಣವನ್ನು ಹೂಡಿಕೆ ಮಾಡಿ ಉಳಿಸಿಟ್ಟು, ನಿವೃತ್ತಿಯ ಬಳಿಕ ಪ್ರತಿ ತಿಂಗಳೂ ನಿಗದಿತ ಹಣವನ್ನು ಪಿಂಚಣಿ (Pension) ರೀತಿಯಲ್ಲಿ ಸ್ವೀಕರಿಸುತ್ತಾರೆ.

ಒಮ್ಮೆ ಹೂಡಿಕೆ, ಜೀವನ ಪರ್ಯಂತ ಆದಾಯ:

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC) ಪ್ರತಿ ವಯಸ್ಸಿನ ಜನರಿಗೆ ಒಂದೊಂದು ವಿಶೇಷವಾದ ಯೋಜನೆಗಳನ್ನು ಬಿಟ್ಟಿದ್ದು, ಈ ಎಲ್ಲಾ ಯೋಜನೆಗಳಿಗೆ ಹೋಲಿಸಿದರೆ ಒಮ್ಮೆ ಹೂಡಿಕೆ ಮಾಡಿ ಅತಿಹೆಚ್ಚಿನ ಲಾಭವನ್ನು ಪಡೆಯುವಂತಹ ಅದ್ಭುತವಾದ ಯೋಜನೆಯನ್ನು ಹಿರಿಯರಿಗಾಗಿ ಬಿಟ್ಟಿದ್ದಾರೆ. ಅದುವೇ ‘ಎಲ್ಐಸಿ ಸರಳ ಪಿಂಚಣಿ ಯೋಜನೆ’ (LIC Saral Pension Scheme) ಈ ಯೋಜನೆಯು ನಿವೃತ್ತಿದಾರರಿಗೆ ಬಹಳ ವಿಶೇಷವಾಗಿದ್ದು, ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ಸಾಕು ಇತರ ಯೋಜನೆಗಳಂತೆ ಪದೇ ಪದೇ ಪ್ರತಿ ತಿಂಗಳು ಹಣವನ್ನು ಕಟ್ಟುವಂತಹ ಅವಶ್ಯಕತೆ ಇರುವುದಿಲ್ಲ.

 

advertisement

Image Source: Rightsofemployees.com

 

40 ರಿಂದ 80 ವರ್ಷ ವಯಸ್ಸಿನವರು ತಮ್ಮ ಸಂಗಾತಿಯೊಂದಿಗೆ ಅಥವಾ ಒಂಟಿಯಾಗಿ ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ, ನೀವೇನಾದರೂ ನಿವೃತ್ತಿ ಪಡೆಯುವ ಹಂತದಲ್ಲಿದ್ದರೆ ಪಿಎಫ್ ಫಂಡ್, ಗ್ರಾಜ್ಯುಟಿ ಹಣವ (PF Fund and Gratuity Money) ಮತ್ತು ನೀವು ಉಳಿಸಿರುವಂತಹ ಸ್ವಲ್ಪ ಹಣ ಸೇರಿಸಿ ಇಲ್ಲಿ ಹೂಡಿಕೆ ಮಾಡಿದರೆ ಸಾಕು ಜೀವನದುದ್ದಕ್ಕೂ ನಿಗದಿತ ಹಣ ಪ್ರತಿ ತಿಂಗಳು ಪೆನ್ಷನ್ (Pension) ರೂಪದಲ್ಲಿ ನಿಮ್ಮ ಕೈ ಸೇರುತ್ತದೆ.

ಹೂಡಿಕೆಯಲ್ಲಿ ಯಾವುದೇ ಮಿತಿ ಇರುವುದಿಲ್ಲ:

ಈ ಯೋಜನೆಯಲ್ಲಿ ಹಣದ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ, ಅಂದರೆ ನೀವು ಎಷ್ಟು ಬೇಕಾದರಷ್ಟು ಹಣವನ್ನು ಹೂಡಿಕೆ ಮಾಡಬಹುದು, ಅದರ ಅನುಗುಣವಾಗಿ ಪ್ರತಿ ತಿಂಗಳು ಪೆನ್ಷನ್ ಅನ್ನು ಪಡೆಯುತ್ತೀರಾ. ಹೀಗಾಗಿ ದೊಡ್ಡ ಮತದ ಹಣವನ್ನು ಹೂಡಿಕೆ ಮಾಡಿ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಸಿಕ ಹಾಗೂ ಮಾಸಿಕ ಆಧಾರದ ಮೇಲೆ ನಿಮ್ಮ ಹೂಡಿಕೆ ಹಣವನ್ನು ಪಿಂಚಣಿ ರೂಪದಲ್ಲಿ ಪಡೆಯಬಹುದು.

ಉದಾಹರಣೆಗೆ 42 ವರ್ಷದ ವ್ಯಕ್ತಿಯು ಬರೋಬ್ಬರಿ 30 ಲಕ್ಷ ರೂಪಾಯಿಗಳನ್ನು ನೀಡಿ ಎಲ್ಐಸಿ ಸರಳ ಪೆನ್ಷನ್ ಯೋಜನೆ (LIC Saral Pension Scheme) ಯನ್ನು ಖರೀದಿಸಿದರೆ, ಅವರು ಪ್ರತಿ ತಿಂಗಳು 12,388 ರೂಪಾಯಿಗಳನ್ನು ಪೆನ್ಷನ್ ರೀತಿ ಸ್ವೀಕರಿಸುತ್ತಿರುತ್ತಾರೆ. ಈ ಯೋಜನೆಯು ನಿಮ್ಮ ಜೀವನದುದಕ್ಕೂ ಪಿಂಚಣಿಯನ್ನು ಖಾತರಿಪಡಿಸುತ್ತದೆ. ಇದರ ಜೊತೆಗೆ ಪಾಲಿಸಿದಾರರು ಎಮರ್ಜೆನ್ಸಿ ಸಂದರ್ಭದಲ್ಲಿ ಆರು ತಿಂಗಳ ಬಳಿಕ ಸಾಲವನ್ನು ಪಡೆದುಕೊಳ್ಳಬಹುದು.

ಇದರ ಹೊರತಾಗಿ ಪಾಲಿಸಿದಾರರು ಮ-ರಣ ಹೊಂದಿದ ಸಂದರ್ಭದಲ್ಲಿ ಅವರ ಹಣವನ್ನು ನಾಮಿನಿಗೆ (Nominee) ಹಿಂದಿರುಗಿಸಲಾಗುತ್ತದೆ. ಹೀಗೆ ನೀವೇನಾದರೂ ಒಮ್ಮೆ ಹೂಡಿಕೆ ಮಾಡಿ ಜೀವನಪರ್ಯಂತ ಆದಾಯವನ್ನು ಪಡೆಯುವ ಯೋಜನೆಯನ್ನು ಎದುರು ನೋಡುತ್ತಿದ್ದಾರೆ, ಅದಕ್ಕೆ ಎಲ್ಐಸಿಯ ಸರಳ್ ಪೆನ್ಷನ್ ಯೋಜನೆ ಹೇಳಿ ಮಾಡಿಸಿದ ಸ್ಕೆಮ್, ಹೀಗಾಗಿ ಇಂದೆ ಎಲ್ಐಸಿಯ ಅಧಿಕೃತ ವೆಬ್ಸೈಟ್ ಆದಂತಹ www.licindia.in ಗೆ ಭೇಟಿ ನೀಡಿ 40 ರಿಂದ 80 ವರ್ಷದ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.

advertisement

1 Comment
  1. Akash says

    20,000 Hohil te sudha monthly

Leave A Reply

Your email address will not be published.